ವರ್ಷಾಂತ್ಯದೊಳಗೆ 200 ಶೋ ರೂಂಗಳನ್ನು ತೆರೆಯಲಿರುವ ಟಾಟಾ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್, ವರ್ಷಾಂತ್ಯದೊಳಗೆ 200ರಷ್ಟು ವಾಹನ ಪ್ರದರ್ಶನ ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ. ಈ ಮೂಖಾಂತರ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡುವ ಹುರುಪಿನಲ್ಲಿದೆ.

ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೂ ಬೋಲ್ಟ್ ಬ್ಯಾಚ್ ಬ್ಯಾಕ್ ಕಾರಿನ ಬಳಿಕ ಇತ್ತೀಚೆಗಷ್ಟೇ ನ್ಯಾನೋ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಬಿಡುಗಡೆಗೊಳಿಸಿದ್ದು ಟಾಟಾ ಸಂಸ್ಥೆಯು, ಡಿಸೈನ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಮೂಲಕ ಮತ್ತೆ ಜನಮೆಚ್ಚುಗೆಗೆ ಪಾತ್ರವಾಗುವ ಇರಾದೆಯಲ್ಲಿದೆ.

ಟಾಟಾ ನ್ಯಾನೋ ಎಎಂಟಿ

ವರ್ಷಂಪ್ರತಿ ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಟಾಟಾ, ಈ ನಿಟ್ಟಿನಲ್ಲಿ ಶೋ ರೂಂಗಳ ಸಂಖ್ಯೆಯನ್ನು ವರ್ಧಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.

ಪ್ರಸ್ತುತ ಟಾಟಾ ಸಂಸ್ಧೆ ದೇಶದ್ಯಾಂತ 460ರಷ್ಟು ಪ್ರದರ್ಶನ ಮಳಿಗೆಗಳನ್ನು ಹೊಂದಿದೆ. ಹಾಗೆಯೇ ಟಾಟಾದ ಹೊಸ ಡೀಲರ್ ಶಿಪ್ ಗಳು ತ್ರಿಎಸ್ ಸೌಲಭ್ಯಗಳನ್ನು ಹೊಂದಿರಲಿದ್ದು, ಇದರಂತೆ ಗ್ರಾಹಕರು ಮಾರಾಟ ಹಾಗೂ ಸರ್ವೀಸ್ ಸೇವೆಗಳನ್ನು ಒಂದೇ ಕಡೆ ಪಡೆಯಬಹುದಾಗಿದೆ.

English summary
Tata Motors has launched the Zest compact sedan and Bolt hatchback in the Indian market. They have also provided their Nano with a much needed facelift and feature update during 2015.
Story first published: Friday, July 31, 2015, 7:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark