ದೇಶದಲ್ಲೇ ಸೆಮಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿರ್ಮಿಸಲಿರುವ ಟಾಟಾ
ಭಾರತದಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಅಥವಾ ಸೆಮಿ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೇ ಮನಗಂಡಿರುವ ದೇಶದ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಎಎಂಟಿ ಗೇರ್ ಬಾಕ್ಸ್ ಸ್ಥಳೀಯವಾಗಿ ನಿರ್ಮಿಸುವ ಯೋಜನೆ ಹೊಂದಿದೆ.
ಪ್ರಸ್ತುತ ಟಾಟಾ ಸಂಸ್ಥೆಯು ಎಎಂಟಿ ಗೇರ್ ಬಾಕ್ಸ್ ಆಮದು ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪೂರಕವಾದ ಬೆಳವಣಿಗೆಗಳು ಕಂಡುಬರಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಟಾಟಾ ಜೆನ್ ಎಕ್ಸ್ ನ್ಯಾನೋ ಕಾರಿನಲ್ಲಿ ಎಎಂಟಿ ಗೇರ್ ಬಾಕ್ಸ್ ಆಳವಡಿಸಲಾಗಿದೆ. ಇದು ಅಂದಾಜು ಶೇಕಡಾ 40ರಷ್ಟು ಬುಕ್ಕಿಂಗ್ಸ್ ದಾಖಲಿಸಿಕೊಳ್ಳಲು ಸಾಧ್ಯವಾಗಿತ್ತು.
ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಎಎಂಟಿ ಗೇರ್ ಬಾಕ್ಸ್ ಒದಗಿಸುತ್ತಿದೆ. ಇದರಿಂದ ಬೇಡಿಕೆಯು ಹೆಚ್ಚಾಗಿದ್ದು, ಕಾಯುವಿಕೆ ಅವಧಿಯು ಗಣನೀಯವಾಗಿ ವರ್ಧಿಸಿದೆ.
ಇನ್ನಷ್ಟೇ ಬಿಡುಗಡೆಯಾಗಲಿರುವ ಝಿಕಾ ಕಾರಿನಲ್ಲೂ ಎಎಂಟಿ ಗೇರ್ ಬಾಕ್ಸ್ ನೀಡುವ ಇರಾದೆ ಟಾಟಾ ಸಂಸ್ಥೆಯದ್ದಾಗಿದೆ. ಒಟ್ಟಿನಲ್ಲಿ ಪ್ರಯಾಣಿಕ ಕಾರು ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿರುವ ಟಾಟಾಗೆ ಇದು ನೆರವಾಗಲಿದೆ.


Click it and Unblock the Notifications