ಬಸ್ ವಿಭಾಗವನ್ನು ಮತ್ತಷ್ಟು ಬಲಪಡಿಸಲಿರುವ ಟಾಟಾ
ಟಾಟಾ ಮೋಟಾರ್ಸ್ ದೇಶದ ನಂ.1 ವಾಹನ ತಯಾರಿಕ ಸಂಸ್ಥೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಇದರಲ್ಲಿ ಟಾಟಾ ಬಸ್ಸುಗಳ ಪಾತ್ರ ಬಹು ದೊಡ್ಡದಿದೆ. ಪ್ರಯಾಣಿಕ ಕಾರು ಹೊರತಾಗಿ ವಾಣಿಜ್ಯ ಹಾಗೂ ಘನ ವಾಹನಗಳ ವಿಭಾಗದಲ್ಲಿ ಟಾಟಾ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ಈದ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯು ತನ್ನ ಬಸ್ ವಿಭಾಗವನ್ನು ಮತ್ತಷ್ಟು ಗಟ್ಟಿಪಡಿಸುವ ಇರಾದೆ ಹೊಂದಿದೆ. ಅಷ್ಟಿಷ್ಟಲ್ಲ, ಬಸ್ ಬಾಡಿ ನಿರ್ಮಾಣಕ್ಕಾಗಿ ಬರೋಬ್ಬರಿ 30ರಿಂದ 50 ಕೋಟಿ ರು.ಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ.

ಸದ್ಯ ಮಲ್ಟಿ ಆಕ್ಸೆಲ್ ವಿಭಾಗದಲ್ಲಿ ಟಾಟಾದ ಯಾವುದೇ ಉತ್ಪನ್ನಗಳಿಲ್ಲ. ಇಲ್ಲಿ ವೋಲ್ವೋ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವೀಡನ್ ಸಂಸ್ಥೆಗೆ ಪ್ರತಿಸ್ಪರ್ಧಿಯಾಗಿ ಎದ್ದು ಕಾಣಿಸುವುದು ಟಾಟಾ ಗುರಿಯಾಗಲಿದೆ.
ವರ್ಷಂಪ್ರತಿ 600ರಿಂದ 700 ಯುನಿಟ್ ಬಿಡುಗಡೆ ಮಾಡುವುದು ಟಾಟಾ ಯೋಜನೆಯಾಗಿದೆ. ಟಾಟಾ ಜೊತೆ ಹೊಂದಾಣಿಕೆ ಹೊಂದಿರುವ ಬ್ರೆಜಿಲ್ ಸಂಸ್ಥೆಯಾಗಿರುವ ಮಾರ್ಕೊಪೊಲೊ ಜೊತೆ ಸೇರಿ ಕರ್ನಾಟಕದ ದಾರವಾಡ ಘಟಕದಲ್ಲಿ ಕೋಚ್ ಅಭಿವೃದ್ಧಿಪಡಿಸಲಾಗುವುದು.


Click it and Unblock the Notifications








