ಭಾರತೀಯ ಸೇನೆಯಿಂದ 900 ಕೋಟಿ ರು.ಗಳ ಒಪ್ಪಂದಕ್ಕೆ ಟಾಟಾ ಸಹಿ

Posted By:

ಭಾರತೀಯ ಸೇನೆಯಿಂದ 900 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೊತ್ತದ ಬೃಹತ್ ಒಪ್ಪಂದ ಗಿಟ್ಟಿಸಿಕೊಂಡಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ 1,200ರಷ್ಟು ಮಲ್ಟಿ ಆಕ್ಸೆಲ್ ಟ್ರಕ್ಕುಗಳನ್ನು ದೇಶದ ರಕ್ಷಣಾ ಪಡೆಗೆ ಒದಗಿಸಲಿದೆ.

ಈ ಮೂಲಕ ಅತಿ ದೊಡ್ಡ ಒಪ್ಪಂದವನ್ನು ತನ್ನದಾಗಿಸಿಕೊಳ್ಳುವಲ್ಲಿ ಟಾಟಾ ಯಶ್ವಸಿಯಾಗಿದ್ದು, ಹೈ ಮೊಬಿಲಿಟಿ 6X6 ಮಲ್ಟಿ ಆಕ್ಸೆಲ್ ಟ್ರಕ್ಕುಗಳನ್ನು ಇಂಡಿಯನ್ ಆರ್ಮಿಗೆ ಒದಗಿಸಲಿದೆ.

To Follow DriveSpark On Facebook, Click The Like Button
ಟಾಟಾ ಮೋಟಾರ್ಸ್

ಈ ಎಲ್ಲ ಟ್ರಕ್ ಗಳನ್ನು ಭಾರತೀಯ ಸೇನೆಯು ಅತಿ ಹೆಚ್ಚು ಭಾರದ ಸಾಮಾಗ್ರಿಗಳನ್ನು ಸಾಗಿಸಲು ಬಳಕೆ ಮಾಡಲಿದೆ. ಕಾರ್ಯಾಚರಣೆ ವೇಳೆ ಬಿಡಿಭಾಗಗಳ ಸಾಗಾಣೆಗೂ ಇದರ ನೆರವಾಗಲಿದೆ.

ಭಾರತದಲ್ಲೇ ಸ್ಥಳೀಯವಾಗಿ ಅಭಿವೃದ್ಧಿಯಾಗಿರುವ ಟಾಟಾದ 6x6 ಹೈ ಮೊಬಿಲಿಟಿ ಟ್ರಕ್ ಗಳು ಆಲ್ ವೀಲ್ ಚಾಲನಾ ವ್ಯವಸ್ಥೆಯನ್ನು ಹೊಂದಿದ್ದು, ಆಫ್ ರೋಡ್ ನಲ್ಲೂ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

1958ನೇ ಇಸವಿಯಿಂದಲೇ ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಯೊಂದಿಗೆ ನಂಟನ್ನು ಹೊಂದಿರುವ ಟಾಟಾ ಮೋಟಾರ್ಸ್, ಇದುವರೆಗೆ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಹಸ್ತಾಂತರಿಸಿದೆ.

English summary
Tata Motors has secured a deal with the Indian Army to provide 1239 vehicles. The Army demands 6x6 high mobility vehicles with material handling cranes.
Story first published: Saturday, July 11, 2015, 12:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark