ಟಾಟಾ ಜೆಸ್ಟ್ ಎಕ್ಸ್‌ಟಿಎ ವೆರಿಯಂಟ್ ಲಾಂಚ್

By Nagaraja

ಭಾರತೀಯ ಮಾರುಕಟ್ಟೆಗೆ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ಹೊಸ ಜೆಸ್ಟ್ ಎಂಟ್ರಿ ಲೆವೆಲ್ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದ ಟಾಟಾ ಮೋಟಾರ್ಸ್, ಈಗ ಈ ಜನಪ್ರಿಯ ಕಾರಿಗೆ ಮಗದೊಂದು ಕೋಡು ಜೋಡಿಸಿದೆ.

ಹೌದು, ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಜೆಸ್ಟ್ ಎಕ್ಸ್‌ಟಿಎ ವೆರಿಯಂಟ್ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 8.07 ಲಕ್ಷ ರು.ಗಳಾಗಿರಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಟಾಟಾ ಸಂಸ್ಥೆಯು ಡೀಸೆಲ್ ವೆರಿಯಂಟ್‌ನಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಗೇರ್ ಬಾಕ್ಸ್ ಪರಿಚಯಿಸಿತ್ತು. ಬಿಡುಗಡೆ ಸಂದರ್ಭದಲ್ಲಿ ಇದು ಮಿಡ್ ಲೆವೆಲ್‌ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಿತ್ತು.

tata zest xta

ಇದರ ಕೊರತೆಯನ್ನು ನೀಗಿಸುವ ಸಲುವಾಗಿ ನೂತನ ಎಕ್ಸ್‌ಟಿಎ ಎಂಬ ಟಾಪ್ ಎಂಡ್ ವೆರಿಯಂಟ್‌ ಬಿಡುಗಡೆ ಮಾಡಿದೆ. ಟಾಟಾದ ನೂತನ ಎಕ್ಸ್‌ಟಿಎ ವೆರಿಯಂಟ್ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಅಲಾಯ್ ವೀಲ್ ಪಡೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಫೋನ್‌ ನಿಯಂತ್ರಣದ ಹರ್ಮಾನ್ ಮಾಹಿತಿ ಮನರಂಜನಾ ವ್ಯವಸ್ಥೆ, ವಾಯ್ಸ್ ಕಮಾಂಡ್ ಮುಂತಾದ ಸೌಲಭ್ಯಗಳು ಇದರಲ್ಲಿರಲಿದೆ.

ಅಂದ ಹಾಗೆ ಟಾಟಾ ಜೆಸ್ಟ್ ಎರಡು ಡೀಸೆಲ್ ಹಾಗೂ ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಡೀಸೆಲ್ ಮಾದರಿಯು ಫಿಯೆಟ್‌ನಿಂದ ಆಮದು ಮಾಡಲಾದ 1.3 ಲೀಟರ್ ಮಲ್ಟಿಜೆಟ್ ಎಂಜಿನ್‌‌ನಿಂದ ನಿಯಂತ್ರಿಸ್ಪಡಲಿದ್ದು, 90 ತಿರುಗುಬಲದಲ್ಲಿ 75 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಎಎಂಟಿ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುತ್ತದೆ. ಹಾಗೆಯೇ ಪ್ರತಿ ಲೀಟರ್‌ಗೆ 21.58 ಮೈಲೇಜ್ ನೀಡುವ ಸಾಮರ್ಥ್ಯ ಇದರಲ್ಲಿದೆ.

ಇನ್ನು 1.2 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಗರಿಷ್ಠ 90 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುತ್ತದೆ.

More from DriveSpark

Article Published On: Tuesday, March 10, 2015, 7:32 [IST]
English summary
Tata Motors Zest Compact Sedan XTA Variant Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+