ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ಮಿನಿ ಎಸ್‌ಯುವಿ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಂದು ಆಕರ್ಷಕ ಕಾರಿನ ತಯಾರಿಯಲ್ಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಟಾಟಾ ನೆಕ್ಸನ್ ನಿಕಟ ಭವಿಷ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

Also Read: "ನಮಸ್ತೆ ಇಂಡಿಯಾ" ಭಾರತೀಯರಿಗೆ ವಿಷ್ ಮಾಡಿದ ಮೆಸ್ಸಿ ಮುಂದಕ್ಕೆ ಓದಿ

ಜನಪ್ರಿಯ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಸಂಸ್ಥೆಯ ಮುಖ್ಯ ರಾಯಭಾರಿಯನ್ನಾಗಿ ನೇಮಕಗೊಳಿಸಿದ ಬಳಿಕ ಹೊಸ ಹುಮ್ಮಸ್ಸಿನಲ್ಲಿರುವ ಟಾಟಾ ಸಂಸ್ಥೆಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆ ಗುರಿಯಾಗಿರಿಸಿಕೊಂಡಿರುವ ನಾವೀನ್ಯ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

2016 ದೆಹಲಿ ಆಟೋ ಎಕ್ಸ್ ಪೋ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿರುವಂತೆಯೇ ಟಾಟಾ ನಡೆಯು ಅತ್ಯಂತ ಕುತೂಹಲ ಮೂಡಿಸಿದೆ. ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ಜೊತೆಗೆ ಕೈಟ್ ಸಣ್ಣ ಕಾರಿನ ತಯಾರಿಯಲ್ಲೂ ಸಂಸ್ಥೆ ತೊಡಗಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರ ಹಾಗೂ ವಿಡಿಯೋವನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

"Osprey" ಎಂಬ ಕೋಡ್ ಪಡೆದುಕೊಂಡಿರುವ ನೆಕ್ಸನ್ ಪರಿಷ್ಕೃತ ಎಕ್ಸ್1 ತಳಹದಿಯಲ್ಲಿ ನಿರ್ಮಾಣವಾಗಲಿದೆ. ಇದೇ ತಳಹದಿಯಲ್ಲಿ ಬೋಲ್ಟ್ ಹ್ಯಾಚ್ ಬ್ಯಾಕ್ ಹಾಗೂ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳು ನಿರ್ಮಾಣವಾಗಿದ್ದವು.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

ಎಂಜಿನ್ ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ನೆಕ್ಸನ್, ಬೋಲ್ಟ್ ಹಾಗೂ ಜೆಸ್ಟ್ ಗೆ ಸಮಾನವಾದ 1.2 ಲೀಟರ್ ರೆವೂಟ್ರಾನ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

ನೂತನ ನೆಕ್ಸನ್ ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್ ಹಾಗೂ ಮಹೀಂದ್ರ ಟಿಯುವಿ300 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಈ ಮೂಲಕ ಉಪಯುಕ್ತ ವಿಭಾಗದಲ್ಲಿ ಭರ್ಜರಿ ಪುನಾರಾಗಮನ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

ಆರರಿಂದ 10 ಲಕ್ಷ ರು.ಗಳಷ್ಟು ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಈ ನೂತನ ಕಾಂಪಾಕ್ಟ್ ಎಸ್‌ಯುವಿ 2016ನೇ ಸಾಲಿನಲ್ಲಿ ಬಿಡುಗಡೆಯಾಗುವ ಸಂಭವವಿದೆ. ಅಲ್ಲದೆ ಏಳು ಸೀಟುಗಳ ಆಯ್ಕೆಯೂ ಇದರಲ್ಲಿರುತ್ತದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

ಅದೇ ಹೊತ್ತಿಗೆ ಸಂಸ್ಥೆಯು ನೂತನ ಹೆಕ್ಸಾ ಕ್ರಾಸೋವರ್ ಕಾರಿನ ಬಿಡುಗಡೆಯ ಸಿದ್ಧತೆಯಲ್ಲಿಯೂ ತೊಡಗಿದೆ. ಈ ಎಲ್ಲದರ ಮೂಲಕ 2020ರ ವೇಳೆಯಾಗುವ ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಇರಾದೆಯಲ್ಲಿದೆ.

ಟಿಯುವಿ300, ಇಕೊಸ್ಪೋರ್ಟ್ ಪ್ರತಿಸ್ಪರ್ಧಿ ಟಾಟಾ ನೆಕ್ಸನ್ ಮಿನಿ ಎಸ್‌ಯುವಿ

ಇಷ್ಟೆಲ್ಲ ಆದರೂ ಸಂಸ್ಥೆಯಿಂದ ಇನ್ನಷ್ಟೇ ಸ್ಪಷ್ಟ ಮಾಹಿತಿಗಳು ಬರಬೇಕಾಗಿದ್ದು, Osprey ಕೋಡ್ ಪಡೆದುಕೊಂಡಿರುವ ಹೊಸ ಕಾಂಪಾಕ್ಟ್ ಎಸ್‌ಯುವಿ ನೆಕ್ಸನ್ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಇವನ್ನೂ ಓದಿ

01. ಭಾರಿ ನಿರೀಕ್ಷೆ ಹುಟ್ಟಿಸಿದ ಟಾಟಾ ಕೈಟ್ ರೇಖಾ ಚಿತ್ರ

02. ಹೊಸ ಕೈಟ್; ಇದು ಟಾಟಾ ಮೆಸ್ಸಿ ಜುಗಲ್ ಬಂದಿ

English summary
Tata's Upcoming Compact SUV For India — What To Expect?
Story first published: Saturday, November 14, 2015, 16:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark