ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ತನ್ನ ಅತಿ ನೂತನ ಹೆಕ್ಸಾ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

ಟಾಟಾದ ಹೊಸತಾದ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನೂತನ ನೆಕ್ಸಾ ಕಾರು ನಿರ್ಮಾಣವಾಗಲಿದೆ. ಪ್ರಸ್ತುತ ಕಾರು ಜನಪ್ರಿಯ ಆರಿಯಾಗೆ ಸಮಾನವಾದ ರೂಪವನ್ನು ಪಡೆದುಕೊಂಡಿದೆ. ಅಲ್ಲದೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹನಿಕಾಂಬ್ ಮೆಶ್ ಫ್ರಂಟ್ ಗ್ರಿಲ್, ಪರಿಷ್ಕೃತ ಫಾಗ್ ಲ್ಯಾಂಪ್ ಮತ್ತು ಏರ್ ಡ್ಯಾಮ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

 ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಲಿರುವ ಟಾಟಾ ಹೆಕ್ಸಾ 2.2 ಲೀಟರ್ 4 ಸಿಲಿಂಡರ್ ವ್ಯಾರಿಕಾರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿ ಉತ್ಪಾದಿಸಲಿದೆ.

 ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ಇನ್ನು 4764 ಎಂಎಂ ಉದ್ದ, 1895 ಎಂಎಂ ಅಗಲ, 1780 ಎಂಎಂ ಎತ್ತರ ಹಾಗೂ 2850 ಎಂಎಂ ಚಂಕ್ರಾಂತರಗಳನ್ನು ಪಡೆಯಲಿದೆ.

 ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ಈಗಾಗಲೇ ಕಾನ್ಸೆಪ್ಟ್ ಮಾದರಿಯು ಪ್ರದರ್ಶನ ಕಂಡಿರುವ ಹೆಕ್ಸಾ ಎಸ್ ಯುವಿ ಆರು, ಏಳು ಹಾಗೂ ಎಂಟು ಸೀಟುಗಳ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ.

 ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ಪ್ರಮುಖವಾಗಿಯೂ ಮಹೀಂದ್ರ ಎಕ್ಸ್‌ಯುವಿ500 ಮಾದರಿಗೆ ಪ್ರತಿಸ್ಪರ್ಧಿಯಾಗಲಿರುವ ಟಾಟಾ ಹೆಕ್ಸಾದಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಟೈಲ್ ಲ್ಯಾಂಪ್ ಜೊತೆ ಡೈನಾಮಿಕ್ ಎಲ್ ಇಡಿ ಲೈಟ್ಸ್, ಎಲ್ ಇಡಿ ಇಲ್ಯೂಮಿನೇಷನ್, ಲೆಥರ್ ಸೀಟು, ಆರು ಏರ್ ಬ್ಯಾಗ್, ಕರ್ಟೈನ್ ಏರ್ ಬ್ಯಾಗ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್ ಮುಂತಾದ ಸೌಲಭ್ಯಗಳಿರಲಿದೆ.

 ಟಾಟಾ ಹೆಕ್ಸಾ ಟೆಸ್ಟಿಂಗ್; ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ಪ್ರಸ್ತುತ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಹೆಕ್ಸಾ ಗ್ರಾಂಡ್ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಇವೆಲ್ಲದಕ್ಕೂ ಸಂಬಂಧಿಸಿದ ತಾಜಾ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಬಟನ್ ಒತ್ತಿರಿ.

Most Read Articles

Kannada
English summary
Tata to Launch Hexa SUV in 2016
Story first published: Saturday, August 22, 2015, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X