ಟಾಪ್ 10 ಕಾರುಗಳ ಪಟ್ಟಿ; ಅಗ್ರ ನಾಲ್ಕು ಸ್ಥಾನಗಳಲ್ಲಿ ಮಾರುತಿ ಭದ್ರ!

By Nagaraja

ದೇಶದ ಒಟ್ಟಾರೆ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಬಹುತೇಕ ಶೇಕಡಾ 50ರಷ್ಟು ಮಾರಾಟವನ್ನು ವಶಪಡಿಸಿಕೊಂಡಿರುವ ಮಾರುತಿ ಸುಜುಕಿ, ಅಗ್ರ ನಾಲ್ಕು ಸ್ಥಾನಗಳಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿದೆ.

ಮಾರುತಿ ಜನಪ್ರಿಯ ಮಾದರಿಗಳಾಗಿರುವ ಸ್ವಿಫ್ಟ್ ಡಿಜೈರ್, ಆಲ್ಟೊ, ಸ್ವಿಫ್ಟ್ ಹಾಗೂ ವ್ಯಾಗನಾರ್ ಮಾದರಿಗಳು ಎಂದಿನಂತೆ ಮಾರುಕಟ್ಟಯಲ್ಲಿ ಅತ್ಯುತ್ತಮ ಮಾರಾಟವನ್ನು ಮುಂದುವರಿಯಿಸಿದೆ. ಮುಂದಿನ ದಿನಗಳಲ್ಲಿ ಈ ಪಟ್ಟಿ ಹೊಸ ಎಂಟ್ರಿಯಾಗುವ ಸಾಧ್ಯತೆಯಿದೆ. ಅದ್ಯಾವ ಕಾರು ಗೊತ್ತೇ ? ಈ ಎಲ್ಲದಕ್ಕೆ ಸಂಬಂಧಿಸಿದಂದ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

10. ಮಾರುತಿ ಸುಜುಕಿ ಸೆಲೆರಿಯೊ

10. ಮಾರುತಿ ಸುಜುಕಿ ಸೆಲೆರಿಯೊ

ಏಳನೇ ಸ್ಥಾನದಲ್ಲಿದ್ದ ಮಾರುತಿ ಸೆಲೆರಿಯೊ 2015 ಅಕ್ಟೋಬರ್ ತಿಂಗಳಲ್ಲಿ 6664 ಯುನಿಟ್ ಗಳ ಮಾರಾಟದೊಂದಿಗೆ ಕನಿಷ್ಠ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಸೆಲೆರಿಯೊ ಎಎಂಟಿ ಮಾದರಿಯು ಅತಿ ಹೆಚ್ಚಿನ ಯಶಸ್ಸನ್ನು ಕಂಡಿತ್ತು.

09. ಹೋಂಡಾ ಅಮೇಜ್

09. ಹೋಂಡಾ ಅಮೇಜ್

ಮಾರುಕಟ್ಟೆಯಲ್ಲಿ ನಿಶಬ್ದವಾಗಿ ತನ್ನ ಜನಪ್ರಿಯತೆಯನ್ನು ಮುಂದುವರಿಯಿಸಿರುವ ಅಮೇಜ್ ಒಂಬತ್ತನೇ ಸ್ಥಾನದಲ್ಲಿದ್ದು, 2015 ಅಕ್ಟೋಬರ್ ತಿಂಗಳಲ್ಲಿ 6971 ಯುನಿಟ್ ಗಳ ಮಾರಾಟ ದಾಖಲಿಸಿದೆ. ಈ ಮೂಲಕ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಆಯ್ಕೆಗೆ ಕಾರಣವಾಗಿತ್ತು.

08. ಹೋಂಡಾ ಸಿಟಿ

08. ಹೋಂಡಾ ಸಿಟಿ

ಮಧ್ಯಮ ಗಾತ್ರದ ಸಿಟಿ ಸೆಡಾನ್ ಕಾರಿನ ಮೂಲಕ ಹೋಂಡಾ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು. ಪ್ರಸ್ತುತ ಹೋಂಡಾ ಸಿಟಿ 2015 ಅಕ್ಟೋಬರ್ ತಿಂಗಳಲ್ಲಿ 7022 ಯುನಿಟ್ ಗಳ ಮಾರಾಟ ದಾಖಲಿಸಿದೆ.

07. ಹ್ಯುಂಡೈ ಕ್ರೆಟಾ

07. ಹ್ಯುಂಡೈ ಕ್ರೆಟಾ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹ್ಯುಂಡೈ ಕ್ರೆಟಾ ಅಗ್ರ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, 7225 ಯುನಿಟ್ ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ. ಇಲ್ಲಿ ಮಹೀಂದ್ರ ಬೊಲೆರೊ ಮಾರಾಟ ಸಂಖ್ಯೆಯಲ್ಲಿ ಮುಂದಿದ್ದರೂ ಉಪಯುಕ್ತ ವಿಭಾಗದಲ್ಲಿ ಕಾಣಿಸಿಕೊಂಡಿರುವುದರಿಂದ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

06. ಹ್ಯುಂಡೈ ಎಲೈಟ್ ಐ20

06. ಹ್ಯುಂಡೈ ಎಲೈಟ್ ಐ20

ಕಳೆದ ತಿಂಗಳಿನ ಐದನೇ ಸ್ಥಾನವನ್ನು ಹ್ಯುಂಡೈ ಎಲೈಟ್ ಐ20 ಉಳಿಸಿಕೊಂಡಿರುವುದು ಗಮನಾರ್ಹವೆನಿಸಿದೆ. ಮಾರುತಿ ಬಲೆನೊ ಪೈಪೋಟಿಯ ನಡುವೆಯೂ ಎಲೈಟ್ ಐ20, 11,019 ಯುನಿಟ್ ಗಳ ಮಾರಾಟ ದಾಖಲಿಸಿದೆ.

05. ಹ್ಯುಂಡೈ ಗ್ರಾಂಡ್ ಐ10

05. ಹ್ಯುಂಡೈ ಗ್ರಾಂಡ್ ಐ10

ಐದನೇ ಸ್ಥಾನದಲ್ಲಿ ಐ20 ಕಿರಿಯ ಸೋದರ ಸ್ಥಾನದಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ಕಾಣಿಸಿಕೊಂಡಿದೆ. ಇದು ಅಕ್ಟೋಬರ್ ತಿಂಗಳಲ್ಲಿ 14,079 ಯುನಿಟ್ ಗಳ ಮಾರಾಟ ದಾಖಲಿಸಿದೆ.

04. ವ್ಯಾಗನಾರ್

04. ವ್ಯಾಗನಾರ್

ಈಗಾಗಲೇ ತಿಳಿಸಿರುವಂತೆಯೇ ಅಗ್ರ ನಾಲ್ಕು ಸ್ಥಾನಗಳನ್ನು ಮಾರುತಿ ತನ್ನ ಶ್ರೇಣಿಯ ಕಾರುಗಳನ್ನು ಹಂಚಿಕೊಂಡಿದೆ. ಈ ಪೈಕಿ 14,734 ಯುನಿಟ್ ಗಳ ಮಾರಾಟ ದಾಖಲಿಸಿರುವ ವ್ಯಾಗನಾರ್ ನಾಲ್ಕನೇ ಸ್ಥಾನದಲ್ಲಿದೆ.

03. ಸ್ವಿಫ್ಟ್

03. ಸ್ವಿಫ್ಟ್

ದೇಶದ ಅತ್ಯಂತ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರಾಗಿರುವ ಸ್ವಿಫ್ಟ್ 2015 ಅಕ್ಟೋಬರ್ ತಿಂಗಳ್ಲಿ 17669 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಅಲ್ಲದೆ ಈ ಹಬ್ಬದ ಆವೃತ್ತಿಯಲ್ಲಿ ಮತ್ತಷ್ಟು ಮಾರಾಟ ಏರಿಕೆಗಾಗಿ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

02. ಮಾರುತಿ ಆಲ್ಟೊ

02. ಮಾರುತಿ ಆಲ್ಟೊ

ಮೊದಲೆರಡು ಸ್ಥಾನಗಳು ಸದಾ ಬದಲಾಗುತ್ತಲೇ ಇರುತ್ತದೆ. ಈ ಬಾರಿ ಮಾರುತಿ ಆಲ್ಟೊ 22,861 ಯುನಿಟ್ ಗಳ ಮಾರಾಟದೊಂದಿಗೆ ಎರಡನೇ ಸ್ಥಾನ ಆಲಂಕರಿಸಿದೆ.

01. ಮಾರುತಿ ಸ್ವಿಫ್ಟ್ ಡಿಜೈರ್

01. ಮಾರುತಿ ಸ್ವಿಫ್ಟ್ ಡಿಜೈರ್

ಮಧ್ಯಮ ವರ್ಗದ ಜನರಿಗೆ ಪರಿಪೂರ್ಣ ಆಯ್ಕೆಯಾಗಿರುವ ಸ್ವಿಫ್ಟ್ ಡಿಜೈರ್, ಅತ್ಯುತ್ತಮ ಕ್ಯಾಬಿನ್ ಹಾಗೂ ಢಿಕ್ಕಿ ಹಾಗೂ ಭದ್ರತೆಯನ್ನು ಒದಗಿಸುತ್ತದೆ. ಇದು ಮಾರಾಟದಲ್ಲೂ ಪ್ರತಿಫಲಿಸುತ್ತಿದ್ದು, 24502 ಯುನಿಟ್ ಗಳ ಮಾರಾಟದೊಂದಿಗೆ ಅಗ್ರ ಸ್ಥಾನ ಆಲಂಕರಿಸಿದೆ.

ಟಾಪ್ 10 ಕಾರುಗಳ ಪಟ್ಟಿ; ಅಗ್ರ ನಾಲ್ಕು ಸ್ಥಾನಗಳಲ್ಲಿ ಮಾರುತಿ ಭದ್ರ!

ಸದ್ಯದಲ್ಲೇ ಈ ಪಟ್ಟಿಗೆ ರೆನೊ ಕ್ವಿಡ್ ಸೇರ್ಪಡೆಯಾಗಲಿದ್ದು, ಈಗಾಗಲೇ 50,000 ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿರುವ ಕ್ವಿಡ್ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸುವ ಸಾಧ್ಯತೆಯಿದೆ.

More from DriveSpark

Article Published On: Saturday, November 7, 2015, 11:15 [IST]
English summary
Top 10 Best Selling Cars In October — Has The Kwid Made An Entry?
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+