ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಕೊರತೆಯಿಂದಾಗಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಏರಿಳಿತ ಅನುಭವಿಸುತ್ತಿದ್ದು, ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಬಿಡಿಭಾಗಗಳ ಕೊರತೆಯಿಂದಾಗಿ ಈ ವರ್ಷದ ಆರಂಭದಲ್ಲಿ ಪ್ರಮುಖ ಹೊಸ ಕಾರು ಕಂಪನಿಗಳು ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಕಳೆದ ತಿಂಗಳು ಫೆಬ್ರವರಿಯಲ್ಲೂ ಕೂಡಾ ಹಲವಾರು ಹೊಸ ಕಾರು ಮಾದರಿಗಳು ಬಿಡುಗಡೆಯಾಗಿವೆ. ಹಾಗಾದರೆ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಹೊಸ ಕಾರುಗಳು ಯಾವುವು? ಹೊಸ ಕಾರುಗಳ ಬೆಲೆ ಮತ್ತು ಎಂಜಿನ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹೊಸ ಕಾರೆನ್ಸ್ ಎಂಯುವಿ

ಕಿಯಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಕಾರೆನ್ಸ್ ಎಂಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.99 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹೊಸ ಕಾರೆನ್ಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರಲಿದ್ದು, ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳೊಂದಿಗೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಸ್ಕೋಡಾ ಸ್ಲಾವಿಯಾ 1.0 ಲೀಟರ್ ವರ್ಷನ್

ಭಾರತದಲ್ಲಿ ರ‍್ಯಾಪಿಡ್ ಸೆಡಾನ್ ಮಾದರಿಯ ಮಾರಾಟವನ್ನು ಕೊನೆಗೊಳಿಸುವ ಉದ್ದೇಶದಿಂದ ಸ್ಕೋಡಾ ಕಂಪನಿಯು ಹೊಸ ಸ್ಲಾವಿಯಾ ಪರಿಚಯಿಸಿದೆ. ಸ್ಲಾವಿಯಾ ಸದ್ಯ 1.0 ಲೀಟರ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದು, ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹೊಸ ಕಾರು 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

2022ರ ಮಾರುತಿ ಸುಜುಕಿ ಬಲೆನೊ

ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯು ಈ ಹಿಂದಿನ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದರೂ ಪ್ರೀಮಿಯಂ ಫೀಚರ್ಸ್ ಮತ್ತು ಬದಲಾವಣೆಗೊಳಿಸಲಾದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಬಲೆನೊ ಮಾದರಿಯು ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಪ್ರೇರಿತ 1.2 ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಹೊಸ ಕಾರು 6 ಏರ್‌ಬ್ಯಾಗ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

2022ರ ಮಾರುತಿ ಸುಜುಕಿ ವ್ಯಾಗನ್‌ಆರ್

ಹೊಸ ವ್ಯಾಗನ್ಆರ್ ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಎನ್ನುವ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 5.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.10 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಮಾರುತಿ ಸುಜುಕಿ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಈ ಬಾರಿ ಸಿಎನ್‌ಜಿ ಆವೃತ್ತಿಗಳ ಆಯ್ಕೆ ಹೆಚ್ಚಿಸಿದ್ದು, ವ್ಯಾಗನ್ಆರ್ ಮಾದರಿಯಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿವೆ. 1.0 ಲೀಟರ್ ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರ ಬೇಡಿಕೆ ಅನುಸಾರವಾಗಿ ಸಿಎನ್‌ಜಿ ಮಾದರಿಯಲ್ಲಿ ವಿಶೇಷವಾಗಿ ಎಲ್ಎಕ್ಸ್ಐ ಸಿಎನ್‌ಜಿ ಟೂರ್ ಹೆಚ್3 ಎನ್ನುವ ವೆರಿಯೆಂಟ್ ಅಭಿವೃದ್ದಿಪಡಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು

ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47.20 ಲಕ್ಷವಾಗಿದೆ. ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಸಿಬಿಯು ಮಾದರಿಯಾಗಿ ಭಾರತದಲ್ಲಿ ಮಾರಾಟವಾಗಲಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು 32.6 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, 150 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡಬ್ಲ್ಯುಎಲ್‌ಟಿಪಿ ಪ್ರಕಾರ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಒಂದು ಭಾರೀ ಪೂರ್ತಿ ಚಾರ್ಜ್‌ನೊಂದಿಗೆ ಗರಿಷ್ಠ 270 ಕಿಲೋಮೀಟರ್‌ಗಳ ವರೆಗೆ ಚಲಿಸುತ್ತದೆ. ಗ್ರಾಹಕರು 50kW DC ಫಾಸ್ಟ್ ಚಾರ್ಜರ್ ಅನ್ನು ಸಹ ಬಳಸಬಹುದಾಗಿದ್ದು, ಕೇವಲ 36 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಟಾಟಾ ಕಾಜಿರಂಗ ಎಡಿಷನ್ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಕಾರು ಮಾದರಿಗಳಿಗಾಗಿ ಕಾಜಿರಂಗ ಎಡಿಷನ್ ಪರಿಚಯಿಸಿದ್ದು, ಹೊಸ ಕಾರುಗಳು ವಿನೂತನ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಕಾಜಿರಂಗ ಎಡಿಷನ್ ಹೊಂದಿರುವ ಪಂಚ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.59 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 9.49 ಲಕ್ಷ ಬೆಲೆ ಹೊಂದಿದ್ದರೆ ನೆಕ್ಸಾನ್ ಕಾಜಿರಂಗ ಎಡಿಷನ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.74 ಲಕ್ಷ ಬೆಲೆ ಹೊಂದಿವೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹ್ಯಾರಿಯರ್ ಕಾಜಿರಂಗ ಎಡಿಷನ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.41 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21.71 ಲಕ್ಷಕ್ಕೆ ದರ ನಿಗದಿಪಡಿಸಿದ್ದರೆ ಸಫಾರಿ ಕಾಜಿರಂಗ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 21 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.40 ಲಕ್ಷ ಬೆಲೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

2022ರ ಆಡಿ ಕ್ಯೂ7 ಎಸ್‍ಯುವಿ

ಆಡಿ ಇಂಡಿಯಾ ಕಂಪನಿಯು ಹೊಸ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.79.99 ಲಕ್ಷವಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹೊಸ ಕಾರು ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಈ ಹೊಸ ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್

ಇಟಲಿ ಮೂಲದ ಐಷಾರಾಮಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ ತನ್ನ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಹುರಾಕನ್ ಇವೊ ಫ್ಲೂ ಕ್ಯಾಪ್ಸುಲ್ ಕಾರು ಐದು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಸುಧಾರಿತ ಒಳಾಂಗಣ ನವೀಕರಣ ಹೊಂದಿದ್ದು, ಹೊಸ ಕಾರಿನಲ್ಲಿ 5.2-ಲೀಟರ್ V10 ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 631 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹಲವು ಕಸ್ಟಮೈಜ್ಡ್ ಸೌಲಭ್ಯ ಹೊಂದಿರುವ ಈ ಕಾರು ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ.50 ಲಕ್ಷ ಹೆಚ್ಚುವರಿ ಮೊತ್ತದೊಂದಿಗೆ ರೂ. 3.80 ಕೋಟಿ ಬೆಲೆ ಹೊಂದಿರಬಹುದು ಎನ್ನಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2022ರ ಎಕ್ಸ್3 ಎಸ್‍ಯುವಿಯ ಎರಡು ಪೆಟ್ರೋಲ್ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯ ಡೀಸೆಲ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.65.50 ಲಕ್ಷವಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

2022ರ ಬಿಎಂಡಬ್ಲ್ಯು ಎಕ್ಸ್3 ಡೀಸೆಲ್ ರೂಪಾಂತರದದಲ್ಲಿ 2.0-ಲೀಟರ್ ನಾಲ್ಕು-ಸಿಲಿಂಡರ್, ಟ್ವಿನ್ ಟರ್ಬೂ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿ ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯುತ್ತದೆ ಇನ್ನು ಈ ಎಸ್‍ಯುವಿ 213 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಪೋರ್ಷೆ 911 ಜಿಟಿ3 ಮತ್ತು ಜಿಟಿ3 ಟೂರಿಂಗ್

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಜರ್ಮನ್ ಬ್ರಾಂಡ್ ಪೋರ್ಷೆ ತನ್ನ ಜನಪ್ರಿಯ ಐಷಾರಾಮಿ ಸ್ಪೋರ್ಟ್ ಕಾರು ಮಾದರಿಗಳಾದ 911 ಜಿಟಿ3 ಮತ್ತು ಟೂರಿಂಗ್ ಆವೃತ್ತಿಯಾದ ಜಿಟಿ3 ಟೂರಿಂಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರುಗಳು ಹಳೆಯ ಮಾದರಿಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಪೋರ್ಷೆ ಕಂಪನಿಯು ಹೊಸ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳಲ್ಲಿ 4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಜೋಡಣೆ ಮಾಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ ಪೋರ್ಷೆ ನಿರ್ಮಾಣದದ ಹೊಸ ಪಿಡಿಕೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.1.43 ಕೋಟಿಯಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ 10 ಕಾರು ಮಾದರಿಗಳಿವು!

ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಮಾದರಿಯು 4 ಸೀರಿಸ್ ಮಾದರಿಯ ವಿನ್ಯಾಸ ಶೈಲಿಯನ್ನು ಆಧರಿಸಿದೆ, ಎರಡರ ನಡುವೆ ವ್ಯತ್ಯಾಸವನ್ನುಂಟುಮಾಡಲು ಎಂ ನಿರ್ದಿಷ್ಟ ಬದಲಾವಣೆಗಳೊಂದಿಗೆ, ಇದು ಅದರ ಸ್ಟ್ಯಾಂಡರ್ಡ್ ಮಾದರಿಯ ಅನುಪಾತದಲ್ಲಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ 3.0-ಲೀಟರ್, ಟ್ವಿನ್-ಟರ್ಬೊ, ನೇರ-ಆರು ಎಂಜಿನ್ ಅನ್ನು ಹೊಂದಿದೆ.

Most Read Articles

Kannada
English summary
New launched cars in february 2022 skoda slavia kia carens new baleno and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X