ಅತಿ ಹೆಚ್ಚು ಮೈಲೇಜ್ ನೀಡುವ ಪೆಟ್ರೋಲ್ ಕಾರು ಯಾವುದು ಗೊತ್ತಾ?

By Nagaraja

ಭಾರತೀಯ ಗ್ರಾಹಕರು ಹೊಸ ಕಾರನ್ನು ಕೊಳ್ಳುವಾಗ ಬೆಲೆ ಬಳಿಕ ಮೈಲೇಜ್ ಮೇಲೂ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರಮುಖವಾಗಿಯೂ ಬಜೆಟ್ ಕಾರು ಖರೀದಿಸುವಾಗ ಇದು ಹೆಚ್ಚು ಗಮನಕ್ಕೆ ಬರುತ್ತದೆ.

Also Read: ದೇಶದ ಐದು ಅತ್ಯುತ್ತಮ ಮೈಲೇಜ್ ಕಾರುಗಳು

ಇತ್ತೀಚೆಗಷ್ಟೇ ದೇಶದ ಐದು ಇಂಧನ ಕ್ಷಮತೆಯ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು. ಇಂದಿನ ಈ ಲೇಖನದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಅಗ್ರ ಪೆಟ್ರೋಲ್ ಕಾರುಗಳ ಬಗ್ಗೆ ವಿವರವನ್ನು ಕೊಡಲಿದ್ದೇವೆ. ಪ್ರಸ್ತುತ ಪಟ್ಟಿಯು ಅತಿ ಶೀಘ್ರದಲ್ಲೇ ಬದಲಾವಣೆಯಾಗಲಿದ್ದು, ಹೊಸ ಕಾರೊಂದು ಈ ಪಟ್ಟಿಗೆ ಸೇರ್ಪಡೆಯಾಗಲಿದೆ. ಅದು ಯಾವ ಕಾರಾಗಿರಬಹುದು? ವಿವರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ವಿ.ಸೂ: ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಮೈಲೇಜ್ ಅಂಕಿಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಆಲ್ಟೊ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಹ್ಯುಂಡೈ ಇಯಾನ್ ಸರಾಸರಿ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹ್ಯುಂಡೈ ಇಯಾನ್ - ಮೈಲೇಜ್ 21.1

ಹ್ಯುಂಡೈ ಇಯಾನ್ - ಮೈಲೇಜ್ 21.1

ಹ್ಯುಂಡೈ ಇಯಾನ್ ಪ್ರತಿ ಲೀಟರ್ ಪೆಟ್ರೋಲ್ ಗೆ 21.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಂಜಿನ್: 0.8 ಲೀಟರ್ ಐಆರ್‌ಡಿಐ

ಅಶ್ವಶಕ್ತಿ: 56

ಗೇರ್ ಬಾಕ್ಸ್: 5 ಸ್ಪೀಡ್

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಆಲ್ಟೊ ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿದೆ. ಕೈಗೆಟುಕುವ ಬೆಲೆ, ಮೈಲೇಜ್ ಹಾಗೂ ಸೇಲ್ಸ್ ಮತ್ತು ಸರ್ವಿಸ್ ವಿಚಾರದಲ್ಲಿ ಮಾರುತಿ ಉಳಿಸಿಕೊಂಡು ಬಂದಿರುವ ನಂಬಿಕೆಯು ದೇಶದ ನಂ.1 ಕಾರೆನಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

ಮಾರುತಿ ಆಲ್ಟೊ 800 - ಮೈಲೇಜ್ 22.74

ಮಾರುತಿ ಆಲ್ಟೊ 800 - ಮೈಲೇಜ್ 22.74

ಮಾರುತಿ ಆಲ್ಟೊ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್ ಗೆ 22.74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಂಜಿನ್: 796 ಸಿಸಿ

ಅಶ್ವಶಕ್ತಿ: 48

ತಿರುಗುಬಲ: 69 ಎನ್‌ಎಂ

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ

ಮಾರುತಿಯ ಹಳೆಯ ಎ-ಸ್ಟಾರ್ ಹಾಗೂ ಎಸ್ಟಿಲೊ ಸ್ಥಾನವನ್ನು ತುಂಬಿರುವ ಮಾರುತಿ ಸೆಲೆರಿಯೊ ಎಎಂಟಿ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲವೂ ವ್ಯಕ್ತವಾಗಿತ್ತು.

ಮಾರುತಿ ಸೆಲೆರಿಯೊ - ಮೈಲೇಜ್ 23.1

ಮಾರುತಿ ಸೆಲೆರಿಯೊ - ಮೈಲೇಜ್ 23.1

ಪ್ರಸ್ತುತ ಸೆಲೆರಿಯೊ ಪೆಟ್ರೋಲ್ ವೆರಿಯಂಟ್ ಪ್ರತಿ ಲೀಟರ್‌ಗೆ 23.1 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಂಜಿನ್: 1.0 ಲೀಟರ್, 3 ಸಿಲಿಂಡರ್ ಕೆ ಸಿರೀಸ್

ಅಶ್ವಶಕ್ತಿ: 68

ತಿರುಗುಬಲ: 90 ಎನ್‌ಎಂ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್/ಎಎಂಟಿ

ಟಾಟಾ ಜೆನ್‌ಎಕ್ಸ್ ನ್ಯಾನೋ

ಟಾಟಾ ಜೆನ್‌ಎಕ್ಸ್ ನ್ಯಾನೋ

ತೀರಾ ಕಳಪೆ ಮಟ್ಟದ ಮಾರಾಟದ ಬಳಿಕ ಟಾಟಾ ನ್ಯಾನೋ ಜೆಕ್ಸ್ ಎಕ್ಸ್ ಮಾದರಿಯೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಂಡಿತ್ತು. ನ್ಯಾನೋ ಜೆನ್ ಎಕ್ಸ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯೊಂದಿಗೆ ಲಭ್ಯವಿದ್ದು, ದೇಶದ ಅತಿ ಅಗ್ಗದ ಎಎಂಟಿ ಕಾರೆನಿಸಿಕೊಂಡಿದೆ.

ಟಾಟಾ ಜೆನ್‌ಎಕ್ಸ್ ನ್ಯಾನೋ - 23.60

ಟಾಟಾ ಜೆನ್‌ಎಕ್ಸ್ ನ್ಯಾನೋ - 23.60

ನೂತನ ನ್ಯಾನೋ ಜೆನ್ ಎಕ್ಸ್ ಮ್ಯಾನುವಲ್ ಹಾಗೂ ಎಎಂಟಿ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 23.60 ಹಾಗೂ 21.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಂಜಿನ್: 624 ಸಿಸಿ, 2 ಸಿಲಿಂಡರ್ ಪೆಟ್ರೋಲ್ ಎಂಪಿಎಫ್‌ಐ

ಅಶ್ವಶಕ್ತಿ: 38

ತಿರುಗುಬಲ: 51 ಎನ್‌ಎಂ

ಗೇರ್ ಬಾಕ್ಸ್: ಮ್ಯಾನುವಲ್ ಈಸಿ ಶಿಫ್ಟ್

ಮಾರುತಿ ಆಲ್ಟೊ ಕೆ10

ಮಾರುತಿ ಆಲ್ಟೊ ಕೆ10

ಆಲ್ಟೊದ ಶಕ್ತಿಶಾಲಿ ವರ್ಷನ್ ಆಗಿರುವ ಆಲ್ಟೊ ಕೆ10 ಯುವ ಜನಾಂಗವನ್ನು ಹೆಚ್ಚು ಆಕರ್ಷಿಸುತ್ತಿದೆ. ಅಲ್ಲದೆ ದೇಶದ ಅಗ್ರ ಐದು ಪೆಟ್ರೋಲ್ ಮೈಲೇಜ್ ಪಟ್ಟಿಯಲ್ಲಿ ತನ್ನ ಸ್ಥಾನವ್ನನು ಭದ್ರವಾಗಿರಿಸಿಕೊಂಡಿದೆ.

ಮಾರುತಿ ಆಲ್ಟೊ ಕೆ10 - ಮೈಲೇಜ್ 24.07

ಮಾರುತಿ ಆಲ್ಟೊ ಕೆ10 - ಮೈಲೇಜ್ 24.07

ಮಾರುತಿ ಆಲ್ಟೊ ಕೆ10 ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 24.07 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಎಂಜಿನ್: 1 ಲೀಟರ್ ಕೆ10

ಅಶ್ವಶಕ್ತಿ: 68

ಗೇರ್ ಬಾಕ್ಸ್: ಮ್ಯಾನುವಲ್/ಎಎಂಟಿ

ನ್ಯಾನೋ ಟ್ವಿಸ್ಟ್

ನ್ಯಾನೋ ಟ್ವಿಸ್ಟ್

ಪ್ರಸ್ತುತ ದೇಶದ ಅತ್ಯುತ್ತಮ ಪೆಟ್ರೋಲ್ ಮೈಲೇಜ್ ಕಾರೆಂಬ ಪಟ್ಟವನ್ನು ನ್ಯಾನೋ ಟ್ವಿಸ್ಟ್ ಕಟ್ಟಿಕೊಂಡಿದೆ. ಇದು ಎಕ್ಸ್‌ಟಿ ಮತ್ತು ಎಕ್ಸ್‌ಇ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ.

ನ್ಯಾನೋ ಟ್ವಿಸ್ಟ್ - ಮೈಲೇಜ್ 25.35

ನ್ಯಾನೋ ಟ್ವಿಸ್ಟ್ - ಮೈಲೇಜ್ 25.35

ದೇಶದ ಅತ್ಯುತ್ತಮ ಮೈಲೇಜ್ ಕಾರೆನಿಸಿಕೊಂಡಿರುವ ನ್ಯಾನೋ ಟ್ವಿಸ್ಟ್ ಪ್ರತಿ ಲೀಟರ್‌ಗೆ 25.35 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಂಜಿನ್: 624 ಸಿಸಿ, 2 ಸಿಲಿಂಡರ್, ಎಂಪಿಎಫ್‌ಐ

ಅಶ್ವಶಕ್ತಿ: 38

ತಿರುಗುಬಲ: 51 ಎನ್‌ಎಂ

ಗೇರ್ ಬಾಕ್ಸ್: ಮ್ಯಾನುವಲ್

ರೆನೊ ಕ್ವಿಡ್

ರೆನೊ ಕ್ವಿಡ್

ಪ್ರಸ್ತುತ ಈ ಪಟ್ಟಿಗೆ ಸದ್ಯದಲ್ಲೇ ಮಗದೊಂದು ಆಕರ್ಷಕ ಕಾರಿನ ಪ್ರವೇಶವಾಗಲಿದೆ. ಈಗಾಗಲೇ ಭಾರಿ ನಿರೀಕ್ಷೆಗೆ ಕಾರಣವಾಗಿರುವ ರೆನೊ ಕ್ವಿಡ್ ದೇಶದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸುವ ಸಾಧ್ಯತೆಯಿದೆ.

ರೆನೊ ಕ್ವಿಡ್ - ಮೈಲೇಜ್ 25.17

ರೆನೊ ಕ್ವಿಡ್ - ಮೈಲೇಜ್ 25.17

ಬಹುನಿರೀಕ್ಷಿತ ರೆನೊ ಕ್ವಿಡ್ ಪ್ರತಿ ಲೀಟರ್‌ಗೆ 25.17 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಎಂಜಿನ್: 799 ಸಿಸಿ 3 ಸಿಲಿಂಡರ್

ಅಶ್ವಶಕ್ತಿ: 54

ತಿರುಗುಬಲ: 72 ಎನ್‌ಎಂ

ಮತ್ತಷ್ಟು

ಗರಿಷ್ಠ ಮೈಲೇಜ್ ನೀಡುವ ದೇಶದ 5 ಡೀಸೆಲ್ ಕಾರುಗಳು

ದೇಶದ ಟಾಪ್ 7 ಬಜೆಟ್-ಮೈಲೇಜ್ ಬೈಕ್ ಗಳು

ಕಾರು ಮೈಲೇಜ್ ಮಿಥ್ಯ ಕಲ್ಪನೆ ಹಾಗೂ ಸತ್ಯಗಳು


More from DriveSpark

Article Published On: Monday, September 21, 2015, 12:24 [IST]
English summary
Top Most Fuel Efficient Petrol Cars In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+