ದೇಶದ 10 ರೋಚಕ ಬೈಕ್ ಬ್ರಾಂಡ್ ಗಳು

By Nagaraja

ದೇಶದ ವಾಹನೋದ್ಯಮದಲ್ಲಿ ಕಾರುಗಳಿಗೆ ಎಷ್ಟು ಬೇಡಿಕೆಯಿದೆಯೋ ಅದಕ್ಕಿಂತಲೂ ಹೆಚ್ಚು ಮೋಟಾರು ಸೈಕಲ್ ಗಳ ಮಾರಾಟ ನಡೆಯುತ್ತಿದೆ. ದೈನಂದಿನ ಸವಾರಿ ಹಾಗೂ ಸಣ್ಣ ಪುಟ್ಟ ವ್ಯಾಪಾರಗಳಿಗೂ ಜನರು ದ್ವಿಚಕ್ರ ವಾಹನಗಳನ್ನೇ ಅತಿ ಹೆಚ್ಚು ನೆಚ್ಚಿಕೊಂಡಿರುತ್ತಾರೆ.

ಅಂತೆಯೇ ನಮ್ಮ ಇಂದಿನ ಲೇಖನದಲ್ಲಿ 2015ನೇ ಸಾಲಿನ 10 ರೋಚಕ ದ್ವಿಚಕ್ರ ಬ್ರಾಂಡ್ ಗಳ ಬಗ್ಗೆ ಹೇಳಿ ಕೊಡಲಿದ್ದೇವೆ. ಇದನ್ನು ನೀವು ಕೂಡಾ ಇಷ್ಟಪಟ್ಟು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳುವ ಭರವಸೆ ನಮ್ಮದ್ದು.

 10. ಕವಾಸಕಿ

10. ಕವಾಸಕಿ

ದೇಶದ 10 ಜನಪ್ರಿಯ ಸಂಸ್ಥೆಗಳ ಪೈಕಿ ಕ್ರೀಡಾ ಬೈಕ್ ಆಗಿರುವ ಕವಾಸಕಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಕವಾಸಕಿ ಸಂಸ್ಥೆಯು 250ಸಿಸಿಗಿಂತಲೂ ಮೇಲ್ಪಟ್ಟ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ. ನಿರ್ವಹಣಾ ಬೈಕ್ ಗಳಲ್ಲಿ ಕವಾಸಕಿ ನಿಜಕ್ಕೂ ಅದ್ಭುತ ಚಾಲನಾ ಅನುಭವ ನೀಡುತ್ತದೆ.

09. ರಾಯಲ್ ಎನ್ ಫೀಲ್ಡ್

09. ರಾಯಲ್ ಎನ್ ಫೀಲ್ಡ್

ದೇಶದ ಐಕಾನಿಕ್ ಹಾಗೂ ಅತಿ ಹೆಚ್ಚು ಹೆಸರು ಮಾಡಿದ ಸಂಸ್ಥೆಗಳಲ್ಲಿ ರಾಯಲ್ ಎನ್ ಫೀಲ್ಡ್ ಒಂದಾಗಿದೆ. ಮಾರಾಟ ವೃದ್ಧಿಗಾಗಿ ರಫ್ತು ಪ್ರಕ್ರಿಯೆಯನ್ನು ಹೆಸರು ಮಾಡಿರುವ ಎನ್ ಫೀಲ್ಡ್ ಟೂರಿಂಗ್ ಬೈಕಿಂಗ್ ಗಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ನಿರ್ಮಾಣ ಗುಣಮಟ್ಟತೆ ಈಗಲೂ ಎನ್ ಫೀಲ್ಡ್ ಮಾದರಿಗಳನ್ನು ಒಂದು ಹೆಜ್ಜೆ ಮುಂದೆ ಗುರುತಿಸಲು ನೆರವಾಗಿದೆ.

08. ಕೆಟಿಎಂ

08. ಕೆಟಿಎಂ

ಆಸ್ಟ್ರೀಯಾದ ಮೋಟಾರು ಸೈಕಲ್ ತಯಾರಿಕ ಸಂಸ್ಥೆಯಾಗಿರುವ ಕೆಟಿಎಂ ಇತ್ತೀಚೆಗಿನ ಕೆಲವು ಸಮಯಗಳಿಂದ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದರ ಕೆಟಿಎಂ ಬೈಕ್ ಗಳು ಯುವ ಜನಾಂಗದ ನೆಚ್ಚಿನ ಬೈಕ್ ಆಗಿ ಮಾರ್ಪಾಡುಗೊಂಡಿದೆ. ಸಕತ್ ಲುಕ್, ನಿರ್ವಹಣೆ ಹಾಗೂ ಕಪ್ಪು, ಕೇಸರಿ ಬಣ್ಣಗಳ ಮಿಶ್ರಣವು ನಿಜಕ್ಕೂ ಹೊಸತನವನ್ನು ನೀಡುತ್ತದೆ.

 07. ಸುಜುಕಿ

07. ಸುಜುಕಿ

ಜಪಾನ್ ನ ಮಗದೊಂದು ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಜಿಕ್ಸರ್ ಶ್ರೇಣಿಯ ಬೈಕ್ ಗಳ ಪರಿಚಯದೊಂದಿಗೆ ಭರ್ಜರಿ ರಿ ಎಂಟ್ರಿ ಕೊಟ್ಟಿದೆ. ಇದರ ಫ್ಲ್ಯಾಗ್ ಶಿಪ್ ಮಾದರಿ ಹಯಾಬುಸ ಹೆಸರು ಕೇಳಿದಾಕ್ಷಣ ಈಗಲೂ ಹೃದಯದಲ್ಲಿ ಢವ ಢವ ಸದ್ದು ಕೇಳಿಸುತ್ತದೆ.

 06. ಹಾರ್ಲೆ ಡೇವಿಡ್ಸನ್

06. ಹಾರ್ಲೆ ಡೇವಿಡ್ಸನ್

ದೇಶದ ಮಾರುಕಟ್ಟೆಯಲ್ಲಿ ನಿಧಾನವಾಗಿ ತನ್ನ ಸ್ಥಾನ ಗಟ್ಟಿಪಡಿಸುತ್ತಿರುವ ಅಮೆರಿಕ ಬ್ರಾಂಡ್ ಗಳಲ್ಲಿ ಹಾರ್ಲೆಗೆ ಮೊದಲ ಸ್ಥಾನ. ದೇಶದಲ್ಲಿ ತನ್ನದೇ ನಿರ್ಮಾಣ ಘಟಕ ಹೊಂದಿರುವ ಹಾರ್ಲೆ ಭವಿಷ್ಯದತ್ತ ದಿಟ್ಟ ಯೋಜನೆಯನ್ನು ಹೊಂದಿದ್ದು, ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದುಕೊಂಡಿದೆ.

05. ವೆಸ್ಪಾ

05. ವೆಸ್ಪಾ

ವೆಸ್ಪಾ ಪ್ರೀಮಿಯಂ ಜೀವನ ಶೈಲಿಯ ಭಾಗವಾಗಿದೆ. ಸಾಂಪ್ರಾದಾಯಿಕ ವಿನ್ಯಾಸ ಹಾಗೂ ಸರಳ ಸುಲಭ ಚಾಲನೆಯು ಐಕಾನಿಕ್ ವೆಸ್ಪಾ ಸ್ಕೂಟರ್ ಗಳ ವಿಶಿಷ್ಟತೆಯಾಗಿದೆ. ಗುಣಮಟ್ಟತೆಯಲ್ಲೂ ವೆಸ್ಪಾ ಹಿಂದಿಕ್ಕುವುದು ಸ್ವಲ್ಪ ಕಷ್ಟಕರವೇ ಸರಿ.

04. ಬಜಾಜ್

04. ಬಜಾಜ್

ಪ್ರತಿಸ್ಪರ್ಧಿಗಳ ಅಪಾಯವನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ಬಜಾಜ್ ತನ್ನ ಶ್ರೇಣಿಯ ಬೈಕ್ ಗಳನ್ನು ಸಂಪೂರ್ಣವಾಗಿ ಪರಿಷ್ಕೃತಗೊಳಿಸುತ್ತದೆ. ಇದರ ಭಾಗವಾಗಿಯೇ ಹೊಸ ಹೊಸ ವಿನ್ಯಾಸದ ಪಲ್ಸರ್ ಬೈಕ್ ಗಳ ಆಗಮನವಾಗಿತ್ತು. ದೇಶದ ನಂ.1 ಕ್ರೀಡಾ ಬೈಕ್ ತಯಾರಕರು ಆಗಿರುವ ಬಜಾಜ್ ಈಗ ಅಡ್ವೆಂಚರ್ ವಿಭಾಗದತ್ತವೂ ತನ್ನ ಗಮನ ಕೇಂದ್ರಿಕರಿಸಿದೆ.

03. ಯಮಹಾ

03. ಯಮಹಾ

ನೀವು ಕ್ರೀಡಾ ಬೈಕ್ ಗಳನ್ನು ಹುಡುಕುತ್ತಿದ್ದಲ್ಲಿ ನಿಮ್ಮ ಶೋಧನೆ ಇಲ್ಲಿ ಕೊನೆಗೊಳ್ಳಲಿದೆ. ಎಫ್ ಝಡ್ ಹಾಗೂ ಆರ್ ಶ್ರೇಣಿಯ ಜನಪ್ರಿಯ ಮಾದರಿಗಳನ್ನು ನಿರ್ಮಿಸಿರುವ ಯಮಹಾ ಎಂಟ್ರಿ ಲೆವೆಲ್ ಕ್ರೀಡಾ ಪ್ರೇಮಿಗಳ ಬಯಕೆಗಳನ್ನು ಈಡೇರಿಸಿದೆ.

02. ಹೀರೊ ಮೊಟೊಕಾರ್ಪ್

02. ಹೀರೊ ಮೊಟೊಕಾರ್ಪ್

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ದೇಶದ ಅತ್ಯಂತ ರೋಚಕ ಬೈಕ್ ಬ್ರಾಂಡ್ ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ಹೀರೊ ಈಗಲೂ ಅತ್ಯುತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟದ ದ್ವಿಚಕ್ರ ಬ್ರಾಂಡ್ ಎಂಬ ಪಟ್ಟವನ್ನು ಕಟ್ಟಿಕೊಂಡಿರುವ ಹೀರೊ ಸ್ಪ್ಲೆಂಡರ್ ಗಳಂತಹ ಜನಪ್ರಿಯ ಬ್ರಾಂಡ್ ಗಳನ್ನು ಹೊಂದಿದೆ.

01. ಹೋಂಡಾ

01. ಹೋಂಡಾ

ಹೀರೊ ಜೊತೆಗಿನ ಬಾಂಧವ್ಯ ಕಳೆದುಕೊಂಡ ಬಳಿಕ ತನ್ನದೇ ಆದ ಮಾರಾಟ ವಲಯವನ್ನು ರೂಪಿಸಿರುವ ಹೋಂಡಾ, ವಿಶ್ವಾಸಾರ್ಹ ಎಂಜಿನ್ ಗಳಲ್ಲಿ ಮೊದಲನೇಯ ಸ್ಥಾನದಲ್ಲಿದೆ. ಸ್ಪ್ಲೆಂಡರ್ ಗಳಂತಹ ಜನಪ್ರಿಯ ಮಾದರಿಗಳನ್ನು ಮಾರಾಟದ ಅಂಕಿಅಂಶದಲ್ಲಿ ಸೋಲಿಸಿರುವ ಆಕ್ಟಿವಾ ಸ್ಕೂಟರ್ ಸಂಸ್ಥೆಯ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಹೋಂಡಾ ಕೇವಲ ಪ್ರಯಾಣಿಕ ಮಾತ್ರವಲ್ಲದೆ ಗರಿಷ್ಠ ನಿರ್ವಹಣಾ ಬೈಕ್ ಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.

ದೇಶದ 10 ರೋಚಕ ಬೈಕ್ ಬ್ರಾಂಡ್ ಗಳು

ಈಗ ನಿಮ್ಮ ನೆಚ್ಚಿನ ದ್ವಿಚಕ್ರ ವಾಹನದ ಬಗ್ಗೆ ಇಲ್ಲಿ ಚರ್ಚಿಸಿರಿ.

More from DriveSpark

Article Published On: Monday, May 18, 2015, 6:02 [IST]
English summary
So what are the most popular two-wheeler brands in India? Well, here it is-Top 10 most popular two-wheeler brands in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+