ಜೂನ್ ಮಳೆಯಲ್ಲಿ ಮಿಂದ ಮೋಹಕ ಕಾರುಗಳು
ಪ್ರತಿಯೊಬ್ಬ ವಾಹನ ಪ್ರೇಮಿಯಲ್ಲೂ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರುಗಳ ಬಗ್ಗೆ ತಿಳಿಯುವ ಕುತೂಹಲವಿರುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಇದೇ ಕಾರಣಕ್ಕಾಗಿ ಇಂತಹದೊಂದು ಶೀರ್ಷಿಕೆಯನ್ನು ಇಲ್ಲಿ ಕೊಡಲಾಗಿದೆ.
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 2015 ಜೂನ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿರುವ ಅಗ್ರ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಇದಕ್ಕಾಗಿ ಸ್ಲೈಡ್ ನತ್ತ ಮುಂದುವರಿಯಿರಿ.

10. ಹ್ಯುಂಡೈ ಇಯಾನ್
ಕಳೆದ ವರ್ಷ (2014) ಇದೇ ಅವಧಿಗೆ ಹೋಲಿಸಿದಾಗ 2015 ಜೂನ್ ತಿಂಗಳಲ್ಲಿ ಹ್ಯುಂಡೈ ಇಯಾನ್ ಮಾರಾಟ ಕುಸಿತ ಕಂಡಿದೆ. ಹಾಗಿದ್ದರೂ ದೇಶದ ಅಗ್ರ 10 ಮಾರಾಟವಾದ ಕಾರುಗಳ ಸಾಲಿನಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2014ರ ಜೂನ್ ತಿಂಗಳಲ್ಲಿ 6,579 ಯುನಿಟ್ ಗಳಿಷ್ಟ ಮಾರಾಟವು 2015 ಜೂನ್ ವೇಳೆಯಾಗುವಾಗ 5,313 ಯುನಿಟ್ ಗಳಿಗೆ ಇಳಿಕೆಯಾಗಿದೆ.

09. ಹೋಂಡಾ ಅಮೇಜ್
ಹೋಂಡಾದ ಕಾಂಪಾಕ್ಟ್ ಸೆಡಾನ್ ಅಮೇಜ್ ಸಹ ಇಯಾನ್ ಗೆ ಸಮಾನವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2014ನೇ ಜೂನ್ ತಿಂಗಳಲ್ಲಿ 7,075 ಯುನಿಟ್ ಗಳಷ್ಟಿದ್ದ ಮಾರಾಟವು 2015 ಜೂನ್ ತಿಂಗಳ ವೇಳೆಯಾಗುವಾಗ 6,834 ಯುನಿಟ್ ಗಳಿಗೆ ಇಳಿಕೆಯಾಗಿದೆ.
ಈ ಮೂಲಕ ಶೇಕಡಾ 3.4 ರಷ್ಟು ಮಾರಾಟ ಕುಸಿತ ಕಂಡಿದೆ.

08. ಹೋಂಡಾ ಸಿಟಿ
ಮಧ್ಯಮ ಗಾತ್ರದ ಸೆಡಾನ್ ಕಾರಿಗಿರುವ ಹೊರತಾಗಿಯೂ ಹೋಂಡಾ ಸಿಟಿ ಸ್ಥಿರತೆಯ ಮಾರಾಟ ಕಾಪಾಡಲು ಯಶ ಕಂಡಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 7,723 ಯುನಿಟ್ ಗಳಷ್ಟಿದ್ದ ಹೋಂಡಾ ಸಿಟಿ ಮಾರಾಟವು 2015 ಜೂನ್ ವೇಳೆಯಾಗುವಾಗ 7,187 ಯುನಿಟ್ ಗಳಿಗೆ ಇಳಿಕೆಯಾಗಿದೆ.

07. ಮಾರುತಿ ಸುಜುಕಿ ಸೆಲೆರಿಯೊ
ಮಾರುತಿ ಸುಜುಕಿ ಸೆಲೆರಿಯೊ ಎಎಂಟಿ ಮಾದರಿಯಲ್ಲೂ ಮಾರಾಟಕ್ಕೆ ಲಭ್ಯವಾಗಿರುವುದು ಮಾರಾಟಕ್ಕೆ ಉತ್ತೇಜನ ನೀಡುವಲ್ಲಿ ಸಹಕಾರಿಯಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 4,878 ಯುನಿಟ್ ಗಳಿಷ್ಟಿದ್ದ ಸೆಲೆರಿಯೊ ಮಾರಾಟವು 2015 ಜೂನ್ ತಿಂಗಳಲ್ಲಿ 8,078 ಯುನಿಟ್ ಗಳಿಗೆ ಏರಿಕೆಯಾಗಿದೆ.

06. ಹ್ಯುಂಡೈ ಎಲೈಟ್ ಐ20
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಎಲೈಟ್ ಐ20, ಈಗಾಗಲೇ 2015 ಜೂನ್ ತಿಂಗಳಲ್ಲಿ 8,706 ಯುನಿಟ್ ಗಳ ಮಾರಾಟ ಸಾಧಿಸಿದೆ.

05. ಹ್ಯುಂಡೈ ಗ್ರಾಂಡ್ ಐ10
ಈ ನಡುವೆ ಕಳೆದ ವರ್ಷ ಜೂನ್ ತಿಂಗಳ 7901 ಯುನಿಟ್ ಗಳ ಸಾಧನೆಯನ್ನು ಹಿಂದಿಕ್ಕಿರುವ ಹ್ಯುಂಡೈ ಗ್ರಾಂಡ್ ಐ10, ಪ್ರಸಕ್ತ ಸಾಲಿನಲ್ಲಿ 8970 ಯುನಿಟ್ ಗಳ ಮಾರಾಟ ಸಾಧಿಸುವ ಮೂಲಕ ಗ್ರಾಹಕರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

04. ಮಾರುತಿ ಸುಜುಕಿ ವ್ಯಾಗನಾರ್
'ಟಾಲ್ ಬಾಯ್' ಖ್ಯಾತಿಯ ಮಾರುತಿ ಸುಜುಕಿ ವ್ಯಾಗನಾರ್ ಶೇಕಡಾ 22.8ರಷ್ಟು ಮಾರಾಟ ಕುಸಿತವನ್ನು ಅನುಭವಿಸಿದೆ. 2014 ಜೂನ್ ತಿಂಗಳಲ್ಲಿ 17,119 ಯುನಿಟ್ ಗಳಷ್ಟಿದ್ದ ವ್ಯಾಗನಾರ್ ಮಾರಾಟವು 2015 ಜೂನ್ ವೇಳೆಯಾಗುವಾಗ 13,221 ಯುನಿಟ್ ಗಳಿಗೆ ಇಳಿಕೆಯಾಗಿದೆ. ಹಾಗಿದ್ದರೂ ನಾಲ್ಕನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

03. ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿಯ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ತನ್ನ ಜೈತ್ರ ಓಟವನ್ನು ಮುಂದುವರಿಸಿದ್ದು, 2015 ಜೂನ್ ತಿಂಗಳಲ್ಲಿ 17,313 ಯುನಿಟ್ ಗಳ ಮಾರಾಟ ಸಾಧಿಸಿದೆ. ಸಂಸ್ಥೆಯು ಕಳೆದ ವರ್ಷ ಇದೇ ಸಮಯಕ್ಕೆ 16,632 ಯುನಿಟ್ ಗಳ ಮಾರಾಟ ಸಾಧಿಸಿತ್ತು.

02. ಮಾರುತಿ ಸುಜುಕಿ ಆಲ್ಟೊ
ಕಳೆದ ವರ್ಷ ನಂ.1 ಸ್ಥಾನದಲ್ಲಿದ್ದ ಮಾರುತಿ ಆಲ್ಟೊ ಎರಡನೇ ಸ್ಥಾನಕ್ಕೆ ಕುಸಿತವನ್ನು ಕಂಡಿದೆ. ಅಷ್ಟೇ ಯಾಕೆ ಮಾರಾಟದಲ್ಲಿ ಶೇಕಡಾ 30.7ರಷ್ಟು ಇಳಿಕೆಯನ್ನು ಕಂಡಿದೆ. ಅಲ್ಲದೆ 2015 ಜೂನ್ ತಿಂಗಳಲ್ಲಿ 21,115 ಯುನಿಟ್ ಗಳಷ್ಟು ಮಾರಾಟವನ್ನು ಸಾಧಿಸಿದೆ.

01. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ಈಗಷ್ಟೇ ಹೊಸ ಸ್ವರೂಪವನ್ನು ಪಡೆದುಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು 2015 ಜೂನ್ ತಿಂಗಳಲ್ಲಿ 21,866 ಯುನಿಟ್ ಗಳ ಮಾರಾಟದೊಂದಿಗೆ ಅಗ್ರಸ್ಥಾನಕ್ಕೆ ನೆಗೆತ ಕಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಡಿಜೈರ್ 15,990 ಯುನಿಟ್ ಗಳ ಮಾರಾಟವನ್ನಷ್ಟೇ ಸಾಧಿಸಿತ್ತು.


Click it and Unblock the Notifications