ಟಾಪ್ 10 ಉಪಯುಕ್ತ ಕಾರುಗಳು; ಬಿಡುಗಡೆಗೂ ಮೊದಲೇ ಕ್ರೆಟಾ ಮಿಂಚಿಂಗ್

By Nagaraja

ಭಾರತದಲ್ಲಿ ಉಪಯುಕ್ತ ವಾಹನಗಳು ಬೇಡಿಕೆ ಹೆಚ್ಚುತ್ತಲೇ ಇದೆ. ಇದನ್ನು ಗಮನಿಸಿರುವ ದಕ್ಷಿಣ ಕೊರಿಯಾ ಮೂಲದ ಎರಡನೇ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಅತಿ ನೂತನ ಹ್ಯುಂಡೈ ಕ್ರೆಟಾ ಕಾರನ್ನು ಬಿಡುಗಡೆಗೊಳಿಸಿತ್ತು.

ಈಗ ಬಂದಿರುವ ಮಾಹಿತಿಗಳ ಪ್ರಕಾರ ಬಿಡುಗಡೆಗೂ ಮೊದಲೇ ಟಾಪ್ 10 ಪಟ್ಟಿಯನ್ನು ಬೇಧಿಸುವಲ್ಲಿ ಕ್ರೆಟಾ ಎಸ್ ಯುವಿ ಯಶಸ್ವಿಯಾಗಿದೆ. 2015 ಜೂನ್ ತಿಂಗಳಲ್ಲಿ ಮಾರಾಟವಾದ ಉಪಯುಕ್ತ ವಾಹನಗಳ ಅಂಕಿಅಂಶಗಳಲ್ಲಿ ಇದು ದಾಖಲಾಗಿದೆ. ಈಗ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ 10 ಕಾರುಗಳ ಬಗ್ಗೆ ತಿಳಿಯೋಣವೇ...

01. ಮಹೀಂದ್ರ ಬೊಲೆರೊ

01. ಮಹೀಂದ್ರ ಬೊಲೆರೊ

ನಿರೀಕ್ಷಿತವೆಂಬಂತೆ ಯುಟಿಲಿಟಿ ವಿಭಾಗದಲ್ಲಿ ಭರ್ಜರಿ ಓಟ ಮುಂದುವರಿಯಿಸಿರುವ ಮಹೀಂದ್ರ ಬೊಲೆರೊ 2015 ಜೂನ್ ತಿಂಗಳಲ್ಲಿ 6093 ಯುನಿಟ್ ಗಳ ಮಾರಾಟ ದಾಖಲಿಸಿದೆ. ಆದರೂ ಕಳೆದ ವರ್ಷ ಇದೇ ಅವಧಿಯ ಮಾರಾಟ ಸಂಖ್ಯೆಯನ್ನು (7909) ಮೀರಿಸಲು ವಿಫಲವಾಗಿದೆ.

02. ಮಾರುತಿ ಸುಜುಕಿ ಎರ್ಟಿಗಾ

02. ಮಾರುತಿ ಸುಜುಕಿ ಎರ್ಟಿಗಾ

ದೇಶದ ನಂಬಿಕೆಗ್ರಸ್ತ ಬ್ರಾಂಡ್ ಎಂಬುದನ್ನು ಸಾಬೀತುಪಡಿಸಿರುವ ಮಾರುತಿ ಸುಜುಕಿಯ ಜನಪ್ರಿಯ ಎರ್ಟಿಗಾ ಎಂಪಿವಿ ಕಾರು ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಲ್ಲದೆ 2014 ಜೂನ್ ತಿಂಗಳಲ್ಲಿದ್ದ 4,875 ಯುನಿಟ್ ಗಳಿಂದ 2015 ಜೂನ್ ವೇಳೆಯಾಗುವ ಒಟ್ಟು ಮಾರಾಟಗಳ ಸಂಖ್ಯೆ 5,395ಕ್ಕೆ ಏರಿಕೆಯಾಗಿದೆ.

03. ಟೊಯೊಟಾ ಇನ್ನೋವಾ

03. ಟೊಯೊಟಾ ಇನ್ನೋವಾ

ಈ ನಡುವೆ ಎರಡನೇ ಸ್ಥಾನದಲ್ಲಿದ್ದ ಟೊಯೊಟಾ ಇನ್ನೋವಾ ಮೂರನೇ ಸ್ಥಾನಕ್ಕೆ ಕುಸಿದಿದೆ.

2015 ಜೂನ್ ತಿಂಗಳ ಮಾರಾಟ - 4,144

2014 ಜೂನ್ ತಿಂಗಳ ಮಾರಾಟ - 5,377

04. ಮಹೀಂದ್ರ ಸ್ಕಾರ್ಪಿಯೊ

04. ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರದ ಮಗದೊಂದು ಜನಪ್ರಿಯ ಮಾದರಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಸ್ಕಾರ್ಪಿಯೊ ಎಸ್ ಯುವಿ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ.

2015 ಜೂನ್ ತಿಂಗಳ ಮಾರಾಟ - 3,666

2014 ಜೂನ್ ತಿಂಗಳ ಮಾರಾಟ - 3,849

05. ಫೋರ್ಡ್ ಇಕೊಸ್ಪೋರ್ಟ್

05. ಫೋರ್ಡ್ ಇಕೊಸ್ಪೋರ್ಟ್

ಮಾರಾಟದಲ್ಲಿ ಶೇಕಡಾ 29.2ರಷ್ಟು ಕುಸಿತ ಕಂಡೂ ಫೋರ್ಡ್ ಇಕೊಸ್ಪೋರ್ಟ್ ಅಗ್ರ ಐದರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿದೆ. ಕಳೆದ ವರ್ಷ ಇಕೊಸ್ಪೋರ್ಟ್ ಮೂರನೇ ಸ್ಥಾನದಲ್ಲಿತ್ತು ಎಂಬುದು ಇಲ್ಲಿ ಗಮನಾರ್ಹ.

2015 ಜೂನ್ ತಿಂಗಳ ಮಾರಾಟ - 3,664

2014 ಜೂನ್ ತಿಂಗಳ ಮಾರಾಟ - 5,176

06. ಎಕ್ಸ್‌ಯುವಿ500

06. ಎಕ್ಸ್‌ಯುವಿ500

ಎಕ್ಸ್ ಯುವಿ500 ಸಹ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಉಪಯುಕ್ತ ವಾಹನಗಳ ವಿಭಾಗದಲ್ಲಿ ತಮ್ಮನ್ನು ಮೀರಿಸುವವರು ಯಾರು ಇಲ್ಲ ಎಂಬುದನ್ನು ಮಹೀಂದ್ರ ಸಾಬೀತುಪಡಿಸಿದಂತಾಗಿದೆ.

2015 ಜೂನ್ ತಿಂಗಳ ಮಾರಾಟ - 3,326

2014 ಜೂನ್ ತಿಂಗಳ ಮಾರಾಟ - 3,035

07. ರೆನೊ ಡಸ್ಟರ್

07. ರೆನೊ ಡಸ್ಟರ್

ಫ್ರಾನ್ಸ್ ಮೂಲದ ರೆನೊ ಸಂಸ್ಥೆಯ ಜನಪ್ರಿಯ ಮಾದರಿಯಾಗಿರುವ ಡಸ್ಟರ್ ಮಾರಾಟದಲ್ಲಿ ಸ್ವಲ್ಪ ಹಿನ್ನಡೆ ಕಂಡಿದೆ.

2015 ಜೂನ್ ತಿಂಗಳ ಮಾರಾಟ - 2,310

2014 ಜೂನ್ ತಿಂಗಳ ಮಾರಾಟ - 3,814

08. ರೆನೊ ಲೊಡ್ಜಿ

08. ರೆನೊ ಲೊಡ್ಜಿ

ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿಗೆ ಲಗ್ಗೆಯಿಟ್ಟಿರುವ ರೆನೊ ಲೊಡ್ಜಿ, ಸಂಸ್ಥೆಯ ಪಾಲಿಗೆ ಹೆಚ್ಚು ಭರವಸೆಗಳನ್ನು ಮೂಡಿಸಿದೆ.

2015 ಜೂನ್ ತಿಂಗಳ ಮಾರಾಟ - 1,708

09. ಹ್ಯುಂಡೈ ಕ್ರೆಟಾ

09. ಹ್ಯುಂಡೈ ಕ್ರೆಟಾ

ಈ ಮೊದಲೇ ತಿಳಿಸಿರುವಂತೆಯೇ 2015 ಜೂನ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ 1,641 ಯುನಿಟ್ ಗಿಂತಲೂ ಹೆಚ್ಚಿನ ಮಾರಾಟವನ್ನು ಗಿಟ್ಟಿಸಿಕೊಂಡಿದೆ ಎಂದು ಅಧಿಕೃತ ವರದಿಗಳು ತಿಳಿಸಿದೆ.

10. ಟೊಯೊಟಾ ಫಾರ್ಚ್ಯುನರ್

10. ಟೊಯೊಟಾ ಫಾರ್ಚ್ಯುನರ್

ಒಂದು ಪ್ರೀಮಿಯಂ ಎಸ್ ಯುವಿ ಆಗಿರುವ ಹೊರತಾಗಿಯೂ ಟೊಯೊಟಾ ಫಾರ್ಚ್ಯುನರ್ ಕ್ರೀಡಾ ಬಳಕೆಯ ವಾಹನದ ಸಾಧನೆಯನ್ನು ಎತ್ತಿ ಹಿಡಿಯಲೇಬೇಕಾಗುತ್ತದೆ. ಕಳೆದ ವರ್ಷ ಒಂಬತ್ತನೇ ಸ್ಥಾನದಲ್ಲಿದ್ದ ಫಾರ್ಚ್ಯುನರ್ ಒಂದು ಸ್ಥಾನ ಕುಸಿದರೂ ಅಗ್ರ 10ರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ.

2015 ಜೂನ್ ತಿಂಗಳ ಮಾರಾಟ - 1,390

2014 ಜೂನ್ ತಿಂಗಳ ಮಾರಾಟ - 1434

2015 ಜೂನ್: ಟಾಪ್ 10 ಉಪಯುಕ್ತ ಕಾರುಗಳು

ಒಟ್ಟಿನಲ್ಲಿ ಇನ್ನು ಹಲವಾರು ಹೊಸ ಮಾದರಿಗಳು ಉಪಯುಕ್ತ ವಿಭಾಗದಲ್ಲಿ ಬಿಡುಗಡೆಯಾಗಲಿರುವುದರಿಂದ ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಮತ್ತಷ್ಟು ರೋಚಕವೆನಿಸಲಿದೆ.

More from DriveSpark

Article Published On: Thursday, July 30, 2015, 12:48 [IST]
English summary
Top 10 selling utility vehicles in June 2015
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+