ಮಾರಾಟ ಸಂಖ್ಯೆಗಿಂತಲೂ ಸುರಕ್ಷತೆಯೇ ಮುಖ್ಯ: ಟೊಯೊಟಾ
ಭಾರತದಲ್ಲಿ ಅನೇಕ ವಿಭಾಗಗಳಲ್ಲಾಗಿ ವಿವಿಧ ಶ್ರೇಣಿಯ ವಾಹನಗಳನ್ನು ಟೊಯೊಟಾ ಮಾರಾಟ ಮಾಡುತ್ತಿದೆ. ವಾಹನ ಜಗತ್ತಿನಲ್ಲಿ ಮಾರಾಟ ಪೈಪೋಟಿ ಏರ್ಪಡುತ್ತಿರುವ ಸಮಕಾಲೀನ ಮಾರುಕಟ್ಟೆಯಲ್ಲಿ ವಾಹನಗಳ ಗುಣಮಟ್ಟತೆ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಆದರೆ ಇವೆಲ್ಲಗಿಂತಲೂ ವಿಭಿನ್ನ ಹೇಳಿಕೆ ಕೊಟ್ಟಿರುವ ಟೊಯೊಟಾ, ತಮ್ಮ ಸಂಸ್ಥೆಗೆ ಮಾರಾಟ ಏರಿಕೆಗಿಂತಲೂ ವಾಹನಗಳ ಸುರಕ್ಷತೆಯೇ ಹೆಚ್ಚು ಮುಖ್ಯ ಎಂದಿದೆ.

ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ 2015 ಜನವರಿಯಿಂದಲೇ ದೇಶದಲ್ಲಿ ಲಭ್ಯವಿರುವ ಎಲ್ಲ ಟೊಯೊಟಾ ವಾಹನಗಳಿಗೂ ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಆಳವಡಿಕೆಯಾಗಲಿದೆ. ಭಾರತ ಸರಕಾರವು ಎಲ್ಲ ಕಾರುಗಳಿಗೂ ಏರ್ ಬ್ಯಾಗ್ ಕಡ್ಡಾಯಗೊಳಿಸುವ ಯೋಚನೆಯಲ್ಲಿರುವಂತೆಯೇ ಇದಕ್ಕೂ ಮುಂಚಿತವಾಗಿ ಟೊಯೊಟಾ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ.
ಟೊಯೊಟಾ ಸಂಸ್ಥೆಯು ಇತ್ತೀಚೆಗಷ್ಟೇ ಪರಿಷ್ಕೃತ ಇಟಿಯೋಸ್ ಲಿವಾ ಮತ್ತು ಇಟಿಯೋಸ್ ಮಾದರಿಗಳನ್ನು ಪರಿಚಯಿಸಿತ್ತು. ಸದ್ಯ ದೇಶದಲ್ಲಿ ಟೊಯೊಟಾದಿಂದ 11 ಮಾದರಿಗಳು ಮಾರಾಟದಲ್ಲಿದೆ. ಅವುಗಳೆಂದರೆ,
- ಟೊಯೊಟಾ ಇಟಿಯೋಸ್ ಲಿವಾ,
- ಟೊಯೊಟಾ ಎಟಿಯೋಸ್ ಕ್ರಾಸ್,
- ಟೊಯೊಟಾ ಎಟಿಯೋಸ್,
- ಟೊಯೊಟಾ ಕರೊಲ್ಲಾ ಆಲ್ಟೀಸ್,
- ಟೊಯೊಟಾ ಕ್ಯಾಮ್ರಿ,
- ಟೊಯೊಟಾ ಕ್ಯಾಮ್ರಿ ಹೈಬ್ರಿಡ್,
- ಟೊಯೊಟಾ ಪ್ರಯಸ್,
- ಟೊಯೊಟಾ ಇನ್ನೋವಾ,
- ಟೊಯೊಟಾ ಫಾರ್ಚ್ಯುನರ್,
- ಟೊಯೊಟಾ ಎಲ್‌ಸಿ ಪ್ರಾಡೊ,
- ಟೊಯೊಟಾ ಎಲ್‌ಸಿ 200


Click it and Unblock the Notifications








