ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್ ಬೀಟ್ಲ್ ಕ್ಲಾಸಿಕ್ ಕಾರು ಭಾರತಕ್ಕೆ
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಫೋಕ್ಸ್ ವ್ಯಾಗನ್ ಅತಿ ಶೀಘ್ರದಲ್ಲೇ ಹೊಸ ಬೀಟ್ಲ್ ಲಗ್ಷುರಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ಈ ಚೊಕ್ಕದಾದ ಕಾರು ಡಿಸೆಂಬರ್ 19ರಂದು ಮಾರುಕಟ್ಟೆ ತಲುಪಲಿದೆ.
ನೂತನ ಫೋಕ್ಸ್ ವ್ಯಾಗನ್ ಬೀಟ್ಲ್ 1.4 ಲೀಟರ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 149 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್ ಬಾಕ್ಸ್ ಕಂಡಬರಲಿದೆ.

ನಾಲ್ಕು ದೇಹ ಬಣ್ಣಗಳಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಆಗಮನವಾಗಲಿದೆ. ಇದರಲ್ಲಿ ಕಿತ್ತಳೆ, ನೀಲಿ, ಕೆಂಪು ಹಾಗೂ ಬಿಳಿ ಬಣ್ಣಗಳು ಆಕರ್ಷಕವಾಗಿರಲಿದೆ. ಈ ಎಲ್ಲ ನಾಲ್ಕು ಬಣ್ಣಗಳಿಗೂ ವಿಶೇಷ ನಾಮಕರಣವನ್ನು ಫೋಕ್ಸ್ ವ್ಯಾಗನ್ ಮಾಡಲಿದೆ.
ಉಳಿದಂತೆ ನೂತನ ಬೀಟ್ಲ್ 16 ಇಂಚುಗಳ ಅಲಾಯ್ ವೀಲ್, ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ರನ್ನಿಂಗ್ ಲೈಟ್ಸ್, ಕ್ರೋಮ್ ಪ್ಯಾಕೇಜ್ ಮುಂತಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಕಾರಿನೊಳಗೂ ಮೂರು ವಿಶೇಷ ಬಣ್ಣಗಳ ಆಯ್ಕೆಗಳನ್ನು ಹೊಡಲಾಗುವುದು. ಇನ್ನು ಕೀಲೆಸ್ ಆಸೆಸ್, ಪುಶ್ ಬಟನ್ ಸ್ಟ್ಯಾರ್ಟ್, ಪ್ಯಾನರಾಮಿಕ್ ಸನ್ ರೂಫ್, ಲೆಥರ್ ಇಂಟಿರಿಯರ್ ಹೆಚ್ಚು ಐಷಾರಾಮಿ ಅನುಭವ ನೀಡಲಿದೆ.
ಅಂದ ಹಾಗೆ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತ ತಲುಪಲಿರುವ ಹೊಸ ಬೀಟ್ಲ್, ಹೊಸ ವರ್ಷದಲ್ಲಿ ಐಷಾರಾಮಿ ಗ್ರಾಹಕರಿಗೆ ಅದ್ಬುತ ಆಯ್ಕೆಯಾಗಿರಲಿದೆ. ಇದು 25 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








