ಫೋಕ್ಸ್‌ವ್ಯಾಗನ್ ಮಾಲಿನ್ಯ ಮೋಸ; ಭಾರತದಲ್ಲೂ 1 ಲಕ್ಷ ಕಾರುಗಳು ಹಿಂದಕ್ಕೆ?

By Nagaraja

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವ ಕಳೆದೊಂದು ಶತಮಾನದ ಅತಿ ದೊಡ್ಡ ವಾಹನ ಹಗರಣ ಫೋಕ್ಸ್ ವ್ಯಾಗನ್ ಮಹಾ ಮೋಸ ಪ್ರಕರಣ ಇನ್ನು ಹಚ್ಚ ಹಸಿರಾಗಿರುವಂತೆಯೇ ಭಾರತದಲ್ಲೂ ಸಂಸ್ಥೆಯ ಒಂದು ಲಕ್ಷದಷ್ಟು ಡೀಸೆಲ್ ಕಾರುಗಳಿಗೂ ಸಮಸ್ಯೆ ತಟ್ಟಿದೆಯೇ ಎಂಬ ಭೀತಿ ಕಾಡುತ್ತಿದೆ.

Also Read: ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು? ಮುಂದಕ್ಕೆ ಓದಿ

ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಫೋಕ್ಸ್ ವ್ಯಾಗನ್ ಇಂಡಿಯಾ ದೇಶದಲ್ಲೂ ಒಂದು ಲಕ್ಷ ಡೀಸೆಲ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡುವ ಸಾಧ್ಯತೆಯಿದೆ. ಈ ಬೆಳವಣಿಗೆಯೂ ನವೆಂಬರ್ 08ರೊಳಗೆ ಕಂಡುಬರುವ ಸಾಧ್ಯತೆಯಿದೆ.

ಫೋಕ್ಸ್ ವ್ಯಾಗನ್

ಅಮೆರಿಕ ಹಾಗೂ ಯುರೋಪ್ ಗಳಲ್ಲಿ ನಡೆದ ಫೋಕ್ಸ್ ವ್ಯಾಗನ್ ಮಾಲಿನ್ಯ ಮೋಸ ಪ್ರಕರಣದ ಬೆನ್ನಲ್ಲೇ ಭಾರತದಲ್ಲೂ ತನಿಖೆ ನಡೆಸುವಂತೆಯೇ ಭಾರತೀಯ ವಾಹನ ತಯಾರಕರ ಒಕ್ಕೂಟಕ್ಕೆ (ಎಆರ್‌ಎಐ) ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.

ಸಂಸ್ಥೆಯ ವಿದೇಶದ ಘಟಕದಿಂದ ಹಲವಾರು ಎಂಜಿನ್ ಗಳನ್ನು ದೇಶಕ್ಕೆ ಆಮದು ಮಾಡಲಾಗಿದೆ. ಈ ಎಲ್ಲ ಎಂಜಿನ್ ಗಳು ಮಾಲಿನ್ಯ ಮಟ್ಟ ಮೀರಿದ್ದಲ್ಲಿ ಹಿಂದಕ್ಕೆ ಕರೆ ಆದೇಶ ಹೊರಡಿಸಬೇಕಾಗುತ್ತದೆ. ಇನ್ನು ಭಾರತದಲ್ಲೇ ನಿರ್ಮಾಣವಾಗಿರುವ 20,000ದಷ್ಟು ಫೋಕ್ಸ್ ವ್ಯಾಗನ್ ಎಂಜಿನ್ ಗಳಲ್ಲೂ ಸಮಸ್ಯೆಯಿಂದ ಎಂಬುದು ಸಹ ತಿಳಿದು ಬಂದಿದೆ.

Also Read: ಫೋಕ್ಸ್‌ವ್ಯಾಗನ್ ಮೋಸದಾಟ ಬಯಲಿಗೆಳೆದಿದ್ದು ಭಾರತೀಯ! ಮುಂದಕ್ಕೆ ಓದಲು ಕ್ಲಿಕ್ಕಿಸಿ

ಪ್ರಸ್ತುತ ಸಂಸ್ಥೆಯು ದೇಶದಲ್ಲಿ ಪೊಲೊ, ಪೊಲೊ ಜಿಟಿ, ಕ್ರಾಸ್ ಪೊಲೊ, ಹೊಸ ವೆಂಟೊ ಹಾಗೂ ಜೆಟ್ಟಾ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಲದೆ ಈ ಹಬ್ಬದ ಆವೃತ್ತಿಯಲ್ಲಿ ಹೆಚ್ಚಿನ ಆಫರ್ ಗಳನ್ನು ಗ್ರಾಹಕರ ಮುಂದಿಟ್ಟಿದೆ.

ಏನಿದು ಘಟನೆ ?
ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ಮಾಲಿನ್ಯ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿದ್ದವು. ಫೋಕ್ಸ್ ವ್ಯಾಗನ್ ಸಂಸ್ಥೆಯ ಈ ಮಹಾ ಮೋಸ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಅಮೆರಿಕನ್ ಸಂಶೋಧಕರು ಯಶ ಕಂಡಿದ್ದರು.

More from DriveSpark

Article Published On: Friday, October 30, 2015, 10:39 [IST]
English summary
Volkswagen Likely To Recall 1 Lakh Cars In India #DieselGate Scandal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+