ಭಾರತದಲ್ಲೂ ಬಯಲಾಯ್ತು ಫೋಕ್ಸ್‌ವ್ಯಾಗನ್ ಮೋಸ; 32 ಕೋಟಿ ರು. ದಂಡ?

By Nagaraja

ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು ಭಾರತದಲ್ಲೂ ಭಾರಿ ಪ್ರಮಾಣದ ಮಾಲಿನ್ಯ ಮೋಸ ಮಾಡಿರುವುದು ಕಂಡುಬಂದಿದೆ. ಇದಾದ ಬೆನ್ನಲ್ಲೇ 32 ಕೋಟಿ ರು.ಗಳ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ವಾಹನ ಮೂಲಗಳು ತಿಳಿಸಿವೆ.

ಅಮೆರಿಕ ಹಾಗೂ ಯುರೋಪ್ ನಲ್ಲಿ ಕಂಡುಬಂದಿರುವ ವ್ಯಾಪಕ ಮಾಲಿನ್ಯ ತಪಾಸಣಾ ಮಟ್ಟದ ಮೋಸದ ಬಳಿಕ ಭಾರತದಲ್ಲೂ ತನಿಖೆ ನಡೆಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.

ಫೋಕ್ಸ್‌ವ್ಯಾಗನ್

ಇದಾದ ಬಳಿಕ ಭಾರತದಲ್ಲೂ ಇಎ189 ಡೀಸೆಲ್ ಎಂಜಿನ್ ಗಳಲ್ಲಿ ಮಾಲಿನ್ಯ ಮೋಸ ನಡೆದಿರುವುದು ಬಯಲಾಗಿದೆ. ಇದರಲ್ಲಿ ಫೋಕ್ಸ್ ವ್ಯಾಗನ್ ಸೇರಿದಂತೆ ಉಪ ಬ್ರಾಂಡ್ ಗಳಾದ ಆಡಿ ಹಾಗೂ ಸ್ಕೋಡಾ ಸೇರಿದಂತೆ ಒಟ್ಟು 3.23 ಲಕ್ಷ ವಾಹನಗಳಲ್ಲಿ ಮಾಲಿನ್ಯ ಮೋಸ ನಡೆದಿದೆ ಎಂಬುದು ಕಂಡುಬಂದಿದೆ.

ವರದಿಗಳ ಪ್ರಕಾರ 2008ನೇ ಇಸವಿಯ ಬಳಿಕ ಇಲ್ಲಿಯ ವರೆಗೆ ನಿರ್ಮಾಣವಾಗಿರುವ 198500 ಫೋಕ್ಸ್ ವ್ಯಾಗನ್, 88,700 ಸ್ಕೋಡಾ ಹಾಗೂ 36,500ರಷ್ಟು ಆಡಿ ಕಾರುಗಳಲ್ಲಿ ಆಳವಡಿಸಲಾಗಿರುವ ಇಎ 189 ಎಂಜಿನ್ ಗಳಲ್ಲಿ ದೋಷ ಪತ್ತೆಹಚ್ಚಲಾಗಿದೆ. ಇದರಲ್ಲಿ 1.2 ಲೀಟರ್, 1.5 ಲೀಟರ್, 1.6 ಲೀಟರ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಗಳು ಒಳಗೊಂಡಿದೆ.

More from DriveSpark

Article Published On: Saturday, December 5, 2015, 15:24 [IST]
English summary
VW Could Be Fined Rs 32 Crore Over Emissions Scandal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+