ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಪೆಟ್ರೋಲ್ ಮಾದರಿ ಎಂಟ್ರಿ

By Nagaraja

ಕಳೆದ ಸಾಲಿನಲ್ಲಿ ಕ್ರಾಸೋವರ್ ಎಂಬ ಹೊಸ ಸೆಗ್ಮೆಂಟ್‌ನಲ್ಲಿ ಜರ್ಮನಿಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಹೊಸತಾದ ಕ್ರಾಸ್ ಪೊಲೊ ಎಂಬ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

ಅಂದ ಹಾಗೆ ಕ್ರಾಸ್ ಪೊಲೊ ಇದುವರೆಗೆ 1.2 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಲಭ್ಯವಾಗಿತ್ತು. ಈಗ ಹೊಸ ವರ್ಷದಲ್ಲಿ ಹೊಸತನದೊಂದಿಗೆ ಮುಂದೆ ಬಂದಿರುವ ಸಂಸ್ಥೆಯು ಹೊಸತಾದ 1.2 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಅನ್ನು ಸಹ ಪರಿಚಯಿಸಿದೆ.

volkswagen cross polo

ಹೊಸ ಎಂಜಿನ್ ಆಯ್ಕೆಯೊಂದಿಗೆ ಕ್ರಾಸ್ ಪೊಲೊ ಕ್ರಾಸೋವರ್ ಮಾದರಿಯ ಮುಂಬೈ ಎಕ್ಸ್ ಶೋ ರೂಂ ಬೆಲೆ 6.94 ಲಕ್ಷ ರು.ಗಳಿಷ್ಟಿರಲಿದೆ. ಅಂತೆಯೇ ಸಂಕ್ರಾಂತಿ ಹಬ್ಬದ ಸುಸಂದರ್ಭದಲ್ಲಿ ಜನವರಿ 15ರಿಂದಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಎಂಜಿನ್
ಹೊಸತಾದ 1.2 ಎಂಪಿಐ ಪೆಟ್ರೋಲ್ ಎಂಜಿನ್ 74 ಅಶ್ವಶಕ್ತಿ (110 ಎನ್ಎಂ ಟಾರ್ಕ್) ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಅಲ್ಲದೆ ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 16.47 ಕೀ.ಮೀ. ಮೈಲೇಜ್ ನೀಡಲಿದೆ.

volkswagen cross polo

ಇನ್ನು ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಏಕ ಮಾತ್ರ ವೆರಿಯಂಟ್‌ಗಳಲ್ಲಿ ಲಭ್ಯವಿರುವ ನೂತನ ಕ್ರಾಸ್ ಪೊಲೆ ಎಬಿಎಸ್, ಆಡಿಯೋ ಸಿಸ್ಟಂ ಜೊತೆಗೆ ಸಿಡಿ ಆಕ್ಸ್, ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಗ್, ಫ್ರಂಟ್ ಪ್ಯಾಸೆಂಜರ್, ಪವರ್ ವಿಂಡೋಸ್, ಫ್ಲ್ಯಾಟ್ ಬಾಟಂ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ಕಂಟ್ರೋಲ್ ಹಾಗೂ ಎಲ್ಲ ಕಪ್ಪು ವರ್ಣದ ಇಂಟಿರಿಯರ್ ಜೊತೆಗೆ ಹೊರಮೈಯಲ್ಲಿ ಹೊಸತಾದ ಅಲಾಯ್ ವೀಲ್, ಬಾಡಿ ಕ್ಲಾಡಿಂಗ್, ಬಂಪರ್ ಮತ್ತು ರೂಫ್ ರೈಲ್ ಪಡೆದುಕೊಳ್ಳಲಿದೆ.

ಅಂತೆಯೇ ಕ್ರಾಸೋವರ್ ವಿಭಾಗದಲ್ಲಿ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಯು ಫಿಯೆಟ್ ಅವೆಂಚ್ಯುರಾ ಹಾಗೂ ಟೊಯೊಟಾ ಎಟಿಯೋಸ್ ಕ್ರಾಸ್ ಸವಾಲನ್ನು ಎದುರಿಸಲಿದೆ.

More from DriveSpark

Article Published On: Thursday, January 15, 2015, 10:29 [IST]
English summary
German automobile giant Volkswagen had introduced its Cross Polo in India last year. The vehicle was based on their Polo hatchback and tried to fit into another segment of vehicles. Previously the Cross Polo was offered only with a diesel mill.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+