ಎಲೆಕ್ಟ್ರಿಕ್ ವಾಹನವಾಗಲಿರುವ ಫೋಕ್ಸ್‌ವ್ಯಾಗನ್ ಐಕಾನಿಕ್ ಬಸ್
ಕೆಲವು ವರ್ಷಗಳ ಹಿಂದೆ ನಿಂತು ಹೋಗಿರುವ ಫೋಕ್ಸ್‌ವ್ಯಾಗನ್ ಐಕಾನಿಕ್ ಕ್ಯಾಂಪರ್ ವ್ಯಾನ್ ನಿಕಟ ಭವಿಷ್ಯದಲ್ಲೇ ಎಲೆಕ್ಟ್ರಿಕ್ ವಾಹನವಾಗಿ ಮಾರ್ಪಾಡುಗೊಳ್ಳಲಿದೆ. ಈ ಬಗ್ಗೆ ವಾಹನೋದ್ಯಮದಿಂದ ಖಚಿತ ಮಾಹಿತಿಗಳು ಬಂದಿದ್ದು, ತನ್ನ ಐಕಾನಿಕ್ ಬಸ್ಸಿಗೆ ಹೊಸ ಸ್ವರೂಪ ತುಂಬಲು ಜರ್ಮನಿಯ ಪ್ರತಿಷ್ಠಿತ ಫೋಕ್ಸ್ ವ್ಯಾಗನ್ ಸಂಸ್ಥೆಯು ಎದುರು ನೋಡುತ್ತಿದೆ.
ಅಂದರೆ ಪೆಟ್ರೋಲ್ ಬದಲು ಫೋಕ್ಸ್ ವ್ಯಾಗನ್ ಕ್ಯಾಂಪರ್ ವ್ಯಾನ್ ಇನ್ನು ಮುಂದೆ ಬ್ಯಾಟರಿಯಿಂದ ಚೈತನ್ಯ ತುಂಬಲಿದೆ. ಅಲ್ಲದೆ ಹೆಚ್ಚು ಪರಿಸರ ಸ್ನೇಹಿ ಕೂಡಾ ಎನಿಸಿಕೊಳ್ಳಲಿದೆ.

1950ರ ಇಸವಿಯಿಂದಲೇ ಮಾರುಕಟ್ಟೆಯಲ್ಲಿರುವ ಫೋಕ್ಸ್ ವ್ಯಾಗನ್ ವ್ಯಾನ್ ಅತಿ ಪುರಾತನ ವಾಹನಗಳಲ್ಲಿ ಒಂದಾಗಿದೆ. ಇದು ಸಂಸ್ಥೆಯ ಪ್ರತಿಷ್ಠಿತಯ ಸಂಕೇತವೂ ಹೌದು.

ಈಗಾಗಲೇ ಕ್ಲಾಸಿಕ್ ವಾಹನಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಫೋಕ್ಸ್ ವ್ಯಾಗನ್ ಕ್ಯಾಂಪರ್ ವ್ಯಾನ್ ನ್ಯೂಯಾರ್ಕ್ ಆಟೋ ಶೋದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.

ಪ್ರಸ್ತುತ ಫ್ರಂಟ್ ವೀಲ್ ನಿಯಂತ್ರಿತ ಸಣ್ಣ ಎಲೆಕ್ಟ್ರಿಕ್ ಬ್ಯಾಟರಿ ಆಳವಡಿಸುವ ಯೋಜನೆಯಿದೆ. ಹಾಗಿದ್ದರೂ ಜಗತ್ತಿನೆಲ್ಲ ಮಾರುಕಟ್ಟೆಗೆ ಪರಿಚಯಿಸಲಾಗುವುದೇ ಎಂಬುದಕ್ಕೆ ಸಂಬಂಧಿಸಿದ ಮಾಹಿತಿಗಳು ಅಲಭ್ಯ.

ಇದಕ್ಕಾಗಿ ಫೋಕ್ಸ್ ವ್ಯಾಗನ್ ಸಂಸ್ಥೆಯು ಮೂರು ವಿನ್ಯಾಸ ನೀತಿಗಳನ್ನು ಅನುಸರಿಸಲಿದೆ. ಇವುಗಳಲ್ಲಿ ವಿಸ್ತಾರವಾದ ಸದೃಢ ಡಿ ಪಿಲ್ಲರ್, ಬಾಕ್ಸಿ ಡಿಸೈನ್ ಹಾಗೂ ಚಾಚಿಕೊಂಡಿರುವ ಮುಂಭಾಗ ಪ್ರಮುಖವೆನಿಸಲಿದೆ.

ಪ್ರಸ್ತುತ ಫೋಕ್ಸ್ ವ್ಯಾಗನ್ ಮಿನಿ ಬಸ್ 2017ನೇ ವೇಳೆಯಾಗುವಾಗ ನಿರ್ಮಾಣ ಆವೃತ್ತಿಯನ್ನು ಪಡೆಯಲಿದೆ ಎಂಬುದು ತಿಳಿದು ಬಂದಿದೆ.

ವಿಶ್ವ ದಾಖಲೆ: ಮಿನಿ ವ್ಯಾನಲ್ಲಿ 51 ಮಂದಿ ಜಾಮ್ ಪ್ಯಾಕ್!


Click it and Unblock the Notifications








