ನಾಲ್ಕು ವಿವಿಧ ಭಂಗಿಗಳಲ್ಲಿ ಫೋಕ್ಸ್ ವ್ಯಾಗನ್ ಟೈಗ್ವಾನ್
2015 ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಅಧಿಕೃತ ಅನಾವರಣಕ್ಕೂ ಮುಂಚಿತವಾಗಿ ಅತಿ ನೂತನ ಫೋಕ್ಸ್ ವ್ಯಾಗನ್ ಟೈಗ್ವಾನ್ ನಾಲ್ಕು ವಿವಿಧ ಭಂಗಿಗಳಲ್ಲಿ ಪ್ರದರ್ಶನ ಕಂಡಿದೆ.
- ಟೈಗ್ವಾನ್ ಆರ್ ಲೈನ್,
- ಟೈಗ್ವಾನ್ ಜಿಟಿಇ ಕಾನ್ಸೆಪ್ಟ್,
- ಟೈಗ್ವಾನ್ ಆನ್ ರೋಡ್
- ಟೈಗ್ವಾನ್ ಆಫ್ ರೋಡ್
ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಿರುವ ಎರಡನೇ ತಲೆಮಾರಿನ ಟೈಗ್ವಾನ್ ಕ್ರೀಡಾ ಬಳಕೆಯ ವಾಹನವು ತವರೂರಾದ ಜರ್ಮನಿಯಲ್ಲೇ ನಡೆಯುತ್ತಿರುವ ಜಗತ್ತಿನ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ.

ಸಾಮಾನ್ಯ ರಸ್ತೆ ಪರಿಸ್ಥಿತಿಗೆ ಹಾಗೂ ಆಫ್ ರೋಡ್ ಗೆ ಹೊಂದಿಕೆಯಾಗುವ ರೀತಿಯಲ್ಲಿ ನೂತನ ಟೈಗ್ವಾನ್ ಮಾದರಿಯನ್ನು ಫೋಕ್ಸ್ ವ್ಯಾಗನ್ ಅಭಿವೃದ್ಧಿಪಡಿಸಿದೆ. ಇದೊಂದು ಪರಿಪೂರ್ಣ ಎಸ್ ಯುವಿ ಆಗಿರಲಿದೆ.

ಒಟ್ಟು ಎಂಟು ಎಂಜಿನ್ ಆಯ್ಕೆಗಳಲ್ಲಿ ನೂತನ ಟೈಗ್ವಾನ್ ಲಭ್ಯವಾಗಲಿದೆ. ಅದೇ ಸಮಯಕ್ಕೆ ನಿರ್ವಹಣೆ ಜೊತೆಗೆ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಫೋಕ್ಸ್ ವ್ಯಾಗನ್ ಎಂಜಿನಿಯರ್ ಗಳು ಗಮನ ಹರಿಸಿದ್ದಾರೆ.

ಕಾರಿನೊಳಗೆ ಹೆಚ್ಚು ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದೆ. ಅಲ್ಲದೆ ತನ್ನ ಹಿಂದಿನ ಮಾದರಿಗಿಂತಲೂ 50 ಕೆ.ಜಿ.ಗಳಷ್ಟು ತೂಕ ಇಳಿಸುವಲ್ಲಿಯೂ ಯಶಸ್ವಿಯಾಗಿದೆ.

ಹೊರಮೈ ಹಾಗೂ ಒಳಮೈಯಲ್ಲಿ ಹೆಚ್ಚಿನ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

ಪ್ರಸ್ತುತ ಆಟೋ ವಿಶ್ಲೇಷಕರಿಂದಲೂ ಹೆಚ್ಚಿನ ಮನ್ನಣೆ ಗಿಟ್ಟಿಸಿಕೊಳ್ಳುವಲ್ಲಿ ಟೈಗ್ವಾನ್ ಯಶ ಕಂಡಿದೆ.

ಮುಂದಿನ ದಿನಗಳಲ್ಲಿ ಟೈಗ್ವಾನ್ ಜಿಟಿಎ ಹೈಬ್ರಿಡ್ ಮಾದರಿಯೂ ರಸ್ತೆ ಪ್ರವೇಶಿಸಲಿದೆ ಎಂಬುದು ಮತ್ತಷ್ಟು ಸಂತಸದಾಯಕ ವಿಚಾರವೆನಿಸಿದೆ.

ಅಷ್ಟಕ್ಕೂ ಪ್ರೀಮಿಯಂ ಎಸ್‌ಯುವಿಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ನೂತನ ಟೈಗ್ವಾನ್ ಭಾರತಕ್ಕೆ 2016ನೇ ಸಾಲಿಲ್ಲಿ ಪ್ರವೇಶಿಸುವ ಸಾಧ್ಯತೆಯಿದೆ.


Click it and Unblock the Notifications








