1.1 ಕೋಟಿ ಕಾರುಗಳ ಎಂಜಿನ್ ಬದಲಾಯಿಸಲಿರುವ ಫೋಕ್ಸ್‌ವ್ಯಾಗನ್
ತಮ್ಮ ಮೇಲೆ ಬಿದ್ದಿರುವ ಮೋಸದ ಕಲೆಯನ್ನು ತೊಳೆಯುವ ಪ್ರಯತ್ನದಲ್ಲಿರುವ ಜರ್ಮನಿಯ ಪ್ರಖ್ಯಾತ ಕಾರು ತಯಾರಿಕ ಸಂಸ್ಥೆ ಫೋಕ್ಸ್ ವ್ಯಾಗನ್, 1.1 ಕೋಟಿ ಕಾರುಗಳ ಎಂಜಿನ್ ಮರು ಜೋಡಣೆ ಮಾಡುವ ಬಗ್ಗೆ ಯೋಜನೆಯಿರುವುದಾಗಿ ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋಕ್ಸ್ ವ್ಯಾಗನ್ ನೂತನ ಸಿಇಒ ಮಾಥಿಯಸ್ ಮುಲ್ಲರ್, "ಮುಂದಿನ ಕೆಲವು ದಿನಗಳಲ್ಲಿ ಸಾಫ್ಟ್ ವೇರ್ ಬಾಧಿತ ಕಾರುಗಳಲ್ಲಿನ ಎಂಜಿನ್ ಬದಲಾಯಿಸುವಂತೆ ಗ್ರಾಹಕರನ್ನು ಕೇಳಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಇದಕ್ಕಾಗಿ ಬರೋಬ್ಬರಿ 6.5 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ತಗುಲಲಿದೆ. ಯುರೋಪ್ ಹಾಗೂ ಅಮೆರಿಕದಲ್ಲಿ ಅತಿ ಹೆಚ್ಚು ಫೋಕ್ಸ್ ವ್ಯಾಗನ್ ಮೋಸದ ಪ್ರಕರಣ ದಾಖಲಾಗಿದ್ದವು.
ಏನಿದು ಪ್ರಕರಣ?
ಕೆಲವು ದಿನಗಳ ಹಿಂದೆಯಷ್ಟೇ ಫೋಕ್ಸ್ ವ್ಯಾಗನ್ ಮಹಾ ಮಾಲಿನ್ಯ ಮೋಸ ಬೆಳಕಿಗೆ ಬಂದಿತ್ತು. ಈ ಸಂಬಂಧ ಬಂದ ವರದಿಯ ಪ್ರಕಾರ ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿದ್ದವು.
ಕಳೆದ 78 ವರ್ಷಗಳ ವಾಹನ ಇತಿಹಾಸದಲ್ಲಿ ಅತಿ ದೊಡ್ಡ ಹಗರಣ ಇದಾಗಿದ್ದು, ಜಾಗತಿಕ ಮಟ್ಟದಲ್ಲಿ ಫೋಕ್ಸ್ ವ್ಯಾಗನ್ ಶೇರುಗಳೆಲ್ಲ ಭಾರಿ ಕುಸಿತವನ್ನು ಕಂಡಿತ್ತು. ಪ್ರಸ್ತುತ ಫೋಕ್ಸ್ ವ್ಯಾಗನ್ ಪ್ರಕರಣವು ಜಾಗತಿಕ ಕ್ಷೇತ್ರದಲ್ಲಿ ವಾಹನ ದೈತ್ಯ ಜರ್ಮನಿಗೂ ಭಾರಿ ಹಿನ್ನೆಡೆಯನ್ನುಂಟು ಮಾಡಿದೆ.


Click it and Unblock the Notifications








