8.5 ಮಿಲಿಯನ್ ಫೋಕ್ಸ್‌ವ್ಯಾಗನ್ ಕಾರು ಹಿಂದಕ್ಕೆ; ಲಂಬೋರ್ಗಿನಿ ಕಚೇರಿಗೂ ದಾಳಿ
ಮಹತ್ವದ ಬೆಳವಣಿಗೆಯೊಂದರಲ್ಲಿ ಫೋಕ್ಸ್ ವ್ಯಾಗನ್ ಮಹಾ ಮಾಲಿನ್ಯ ಮೋಸ ಪ್ರಕರಣ ಬಯಲಾಗಿರುವ ಬೆನ್ನಲ್ಲೇ ಸರಿ ಸುಮಾರು 8.5 ಮಿಲಿಯನ್ ಡೀಸೆಲ್ ವಾಹನ ಹಿಂಪಡೆಯಲು ಸೂಚಿಸಲಾಗಿದೆ. ಇದರ ಮುಂದುವರಿದ ಬೆಳವಣಿಗೆಯಲ್ಲಿ ವಿಶ್ವ ವಿಖ್ಯಾತ ಲಂಬೋರ್ಗಿನಿ ಕಚೇರಿಗೆ ಪೊಲೀಸ್ ದಾಳಿ ಮಾಡಿರುವ ಘಟನೆಯೂ ನಡೆದಿದೆ.
ಯುರೋಪ್‍ನ 28 ರಾಷ್ಟ್ರಗಳಲ್ಲಿ ಫೋಕ್ಸ್ ವ್ಯಾಗನ್ ಡೀಸೆಲ್ ಕಾರುಗಳಲ್ಲಿ ಆಪಾದಿತ ಸಾಫ್ಟ್ ವೇರ್ ಬಳಕೆ ಮಾಡಿರುವುದು ಖಚಿತವಾಗಿದೆ. ಈ ಸಂಬಂಧ ಸಮಗ್ರ ವಿವರವು ಇನ್ನೇನು ಕೆಲವೇ ದಿನಗಳಲ್ಲಿ ಬಯಲಾಗಲಿದೆ.

ಈ ನಡುವೆ ಫೋಕ್ಸ್ ವ್ಯಾಗನ್ ಅಂಗಸಂಸ್ಥೆಯಾಗಿರುವ ಲಂಬೋರ್ಗಿನಿ ಕಚೇರಿಗೆ ಇಟಲಿ ಪೊಲೀಸ್ ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ದಾಳಿಯ ಹಿಂದಿರುವ ನೈಜ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಇತ್ತೀಚೆಗಷ್ಟೇ ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿತ್ತು.


Click it and Unblock the Notifications








