2016 ವರ್ಷಾರಂಭದಲ್ಲಿ ಟೈಗ್ವಾನ್ ಭಾರತ ಪ್ರವೇಶ

By Nagaraja

ಭಾರತಕ್ಕೆ ಹಲವು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸಿರುವ ಜರ್ಮನಿಯ ಐಕಾನಿಕ್ ಐಕಾನಿಕ್ ಫೋಕ್ಸ್ ವ್ಯಾಗನ್ ಸಂಸ್ಥೆಯು 2016 ವರ್ಷಾರಂಭದಲ್ಲಿ ನೂತನ ಕ್ರೀಡಾ ಬಳಕೆಯ ವಾಹನ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಫೋಕ್ಸ್ ವ್ಯಾಗನ್ ಟೈಗ್ವಾನ್ ಈಗಾಗಲೇ ಸುದ್ದಿಯಲ್ಲಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೀಗ ಇವೆಲ್ಲಕ್ಕೂ ಉತ್ತರ ಲಭಿಸಿದಂತಾಗಿದೆ.

volkswagen tiguan

ಹಾಗಿದ್ದರೂ ನಿಗದಿತ ಅವಧಿಯಲ್ಲೇ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್ ಯುವಿ ಭಾರತ ಪ್ರವೇಶ ಪಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಲವಾರು ಕಾರಣಗಳಿಂದಾಗಿ ಟೈಗ್ವಾನ್ ಭಾರತ ಎಂಟ್ರಿ ಹೆಚ್ಚು ಮಹತ್ವ ಗಿಟ್ಟಿಸಿಕೊಂಡಿದೆ.

ಎಂಜಿನ್: 2.0 ಲೀಟರ್
ಅಶ್ವಶಕ್ತಿ: 147.88, 187.32 ಹಾಗೂ 236.62 (ವಿವಿಧ ಆಯ್ಕೆ)
ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್ ಹಾಗೂ ಡಿಎಸ್ ಜಿ ಆಯ್ಕೆ.

volkswagen tiguan

ಟೈಗ್ವಾನ್ ಏಳು ಸೀಟಿನ ಎಸ್ ಯುವಿ ಆಗಿರಲಿದೆ. ಇದರಲ್ಲಿ ಫೋರ್ ವೀಲ್ ಡ್ರೈವ್ ಆಯ್ಕೆಯು ಇರಲಿದ್ದು 20 ಲಕ್ಷ ರು.ಗಳಿಂದ 30 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ಇನ್ನು ತನ್ನ ಜನಪ್ರಿಯ ಪೊಲೊ ಹ್ಯಾಚ್ ಬ್ಯಾಕ್ ತಳಹದಿಯಲ್ಲಿ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವ ಯೋಜನೆಯನ್ನು ಫೋಕ್ಸ್ ವ್ಯಾಗನ್ ಹೊಂದಿದೆ. ಈ ಎಲ್ಲ ನೂತನ ಉತ್ಪನ್ನಗಳ ನಿರಂತರ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Tuesday, May 12, 2015, 8:18 [IST]
English summary
Volkswagen currently is struggling with products to offer in India. Now the German manufacturer plans on introducing its Tiguan SUV in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+