ಫೋಕ್ಸ್‌ವ್ಯಾಗನ್ ವೆಂಟೊ ಹೈಲೈನ್ ಪ್ಲಸ್ ಬಿಡುಗಡೆ
ಈಗಷ್ಟೇ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿ ಬಿಡುಗಡೆ ಮಾಡಿರುವ ಜರ್ಮನಿ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು, ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಮಗದೊಂದು ಆಕರ್ಷಕ ಕಾರನ್ನು ಪರಿಚಯಿಸಿದೆ. ಅದುವೇ,
ಫೋಕ್ಸ್‌ವ್ಯಾಗನ್ ವೆಂಟೊ ಹೈಲೈನ್ ಪ್ಲಸ್
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಪೆಟ್ರೋಲ್: 9.42 ಲಕ್ಷ ರು.
- ಡೀಸೆಲ್: 10.67 ಲಕ್ಷ ರು.

ಈ ಹಬ್ಬದ ಆವೃತ್ತಿಯಲ್ಲಿ ತಮ್ಮ ಕುಟುಂಬದ ಜೊತೆಗೆ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವ ಗ್ರಾಹಕರಿಗೆ ನೂತನ ಕಾರು ಪರಿಪೂರ್ಣ ಆಯ್ಕೆಯಾಗಿರಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಹೊಸ ಮಲ್ಟಿಮೀಡಿಯಾ ನೇವಿಗೇಷನ್, ಫ್ಲೋರ್ ಮ್ಯಾಟ್, ಸ್ಕಫ್ ಪ್ಲೇಟ್, ರೂಫ್ ರೈಲ್, ಕಾರ್ಬನ್ ಫೈಬರ್ ಹಾಗೂ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಕಾರ್ಬನ್ ಫೈಬರ್ ಪ್ರಮುಖ ಆಕರ್ಷಣೆಯಾಗಲಿದೆ.
ಇನ್ನು ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಸೌಲಭ್ಯಗಳು ಲಭ್ಯವಾಗಲಿದೆ. ಇವೆಲ್ಲದರ ಜೊತೆಗೆ 20,000 ರು.ಗಳ ಲಾಯಲ್ಟಿ ಎಕ್ಸ್ ಚೇಂಜ್ ಪ್ರಯೋಜನವನ್ನು ನೀಡಲಾಗುತ್ತಿದೆ.


Click it and Unblock the Notifications








