ಐಷಾರಾಮಿ ಕಾರು ಮಾರಾಟದತ್ತ ಕಣ್ಣಾಯಿಸಿದ ವೋಲ್ವೋ

Written By:

ಭಾರತದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ 2020ರ ವೇಳೆಯಾಗುವಾಗ ಶೇಕಡಾ 10ರಷ್ಟು ಮಾರಾಟ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಸ್ವೀಡನ್‌ನ ಪ್ರತಿಷ್ಠಿತ ವಾಹನ ಸಂಸ್ಥೆ ವೋಲ್ವೋ, ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಇರಾದೆ ಹೊಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೋಲ್ವೋ ಆಟೋ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಾಮ್ ವೊನ್ ಬೊನ್ಸ್‌ಡೊರ್ಫ್, ಕಳೆದ ವರ್ಷ 1,200ರಷ್ಟು ಯುನಿಟ್ ಗಳನ್ನು ಮಾರಾಟ ಮಾಡಿರುವ ಸಂಸ್ಥೆಯು ಶೇಕಡಾ 30ರಷ್ಟು ವೃದ್ಧಿ ಸಾಧಿಸಿದೆ ಎಂದಿದೆ.

To Follow DriveSpark On Facebook, Click The Like Button
ವೋಲ್ವೋ

ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಶೇಕಡಾ 4.5ರಷ್ಟು ಮಾರಾಟ ಶೇರನ್ನು ಹೊಂದಿರುವ ನಾವು ಶೇಕಡಾ 10ರಷ್ಟನ್ನು ಗುರಿ ಮಾಡುತ್ತಿದ್ದೇವೆ ಎಂದು ಕೋಲ್ಕತ್ತಾದಲ್ಲಿ ಚೊಚ್ಚಲ ಡೀಲರ್ ಶಿಪ್ ತೆರೆದ ಬಳಿಕ ಟಾಮ್ ನುಡಿದರು. ಅಲ್ಲದೆ ತನ್ನ ಮಾರಾಟ ಜಾಲವನ್ನು ದೇಶದ್ಯಾಂತ ವಿಸ್ತರಿಸುವ ಯೋಜನೆ ಇರುವುದಾಗಿಯೂ ತಿಳಿಸಿದ್ದಾರೆ.

ಭಾರತೀಯ ವಾಹನ ಮಾರುಕಟ್ಟೆ ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಇದರಂತೆ ಮುಂದಿನೆರಡು ವರ್ಷಗಳಲ್ಲಿ ಕೆಲವು ವೆರಿಯಂಟ್ ಗಳ ಹೊರತಾಗಿ ಮೂರರಿಂದ ಐದು ಹೊಸ ಕಾರುಗಳನ್ನು ಪರಿಚಯಿಸಲಿದ್ದೇವೆ ಎಂದಿದ್ದಾರೆ.

ವೋಲ್ವೋ

ದೇಶದ ಪ್ರೀಮಿಯಂ ಕಾರುಗಳ ಮಾರುಕಟ್ಟೆಯಲ್ಲಿ ವೋಲ್ವೋ ಸಂಸ್ಥೆಯು, ಜರ್ಮನಿಯ ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳ ಸವಾಲನ್ನು ಎದುರಿಸುತ್ತಿದೆ.

Read more on ವೋಲ್ವೋ volvo
English summary
Swedish carmaker Volvo is eyeing 10 percent market share in the luxury car segment in India by 2020. The company has plans to introduce four new models in India.
Story first published: Monday, August 3, 2015, 14:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark