Volvo: ಸಿಂಗಲ್ ಚಾರ್ಜ್‌ನಲ್ಲಿ 592 ಕಿ.ಮೀ ರೇಂಜ್: ವೋಲ್ವೋ XC40 ರೀಚಾರ್ಜ್ ವಿಶೇಷತೆಗಳು
ವೋಲ್ವೋ ಕಂಪನಿ ಇತ್ತೀಚೆಗೆ XC40 ರೀಚಾರ್ಜ್‌ನ ಸಿಂಗಲ್ ಮೋಟಾರ್ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಸಿಂಗಲ್ ಮೋಟಾರ್ ವೇರಿಯೆಂಟ್ ರೂ. 54.95 ಲಕ್ಷಗಳ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಇದರ ವೈಶಿಷ್ಟ್ಯಗಳು, ಪರ್ಫಾಮೆನ್ಸ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
XC40 ರೀಚಾರ್ಜ್ ವಿಶೇಷತೆಗಳು: ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಮ್ಸ್, ಎಲ್ಇಡಿ ಹೆಡ್ಲೈಟ್, 5 ವರ್ಷಗಳ ಚಂದಾದಾರಿಕೆಯೊಂದಿಗೆ ಡಿಜಿಟಲ್ ಸೇವೆಗಳು, ಗೂಗಲ್ ಬಿಲ್ಟ್-ಇನ್ (ಗೂಗಲ್ ಅಸಿಸ್ಟೆಂಟ್, ಗೂಗಲ್ ಪ್ಲೇ, ಗೂಗಲ್ ಮ್ಯಾಪ್ಸ್), ವೋಲ್ವೋ ಕಾರ್ಸ್ ಅಪ್ಲಿಕೇಶನ್ (ಕಾರ್ ಲಾಕ್/ಅನ್‌ಲಾಕ್, ಪ್ರೀ ಕಂಡೀಷನಿಂಗ್, ಬ್ಯಾಟರಿ ಚಾರ್ಜಿಂಗ್ ಸ್ಥಿತಿ), ಹೆಚ್ಚಿನ ಕಾರ್ಯಕ್ಷಮತೆಯ ಸೌಂಡ್ ಸಿಸ್ಟಮ್ (250W, 8 ಸ್ಪೀಕರ್‌ಗಳು)ಗಳನ್ನು ಒಳಗೊಂಡಿದೆ.

ಇವಿಷ್ಟೇ ಅಲ್ಲದೇ ವೋಲ್ವೋ ಆನ್ ಕಾಲ್, PM 2.5 ಸೆನ್ಸಾರ್‌ನೊಂದಿಗೆ ಸುಧಾರಿತ ಏರ್ ಪ್ಯೂರಿಫೈಯರ್ ಸಿಸ್ಟಮ್, ರಿವರ್ಸಿಂಗ್ ಕ್ಯಾಮೆರಾ, ಕ್ರಾಸ್ ಟ್ರಾಫಿಕ್ ವಾರ್ನಿಂಗ್‌ನೊಂದಿಗೆ ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪೈಲಟ್ ಅಸಿಸ್ಟ್, ಲೇನ್ ಕೀಪಿಂಗ್ ಏಡ್, ಪಾರ್ಕಿಂಗ್ ಸೆನ್ಸಾರ್‌ಗಳು, 7 ಏರ್‌ಬ್ಯಾಗ್‌ಗಳು, ವೈರ್‌ಲೆಸ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ ಮತ್ತು ರೇಂಜ್: XC40 ರೀಚಾರ್ಜ್ ಕೇವಲ 7.3 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದ್ದು, 180 ಕಿ.ಮೀ ಗರಿಷ್ಠ ವೇಗವನ್ನು ತಲುಪುಬಲ್ಲದು. ಮುಂಭಾಗದಲ್ಲಿ (ಫ್ರಂಕ್) 31 ಲೀಟರ್ ಸಂಗ್ರಹಣೆ ಹಾಗೂ ಹಿಂಭಾಗದಲ್ಲಿ 419 ಲೀಟರ್ ಸಂಗ್ರಹಣೆ (ಬೂಟ್ ಸ್ಪೇಸ್) ಸಾಮರ್ಥ್ಯವನ್ನು ಹೊಂದಿದೆ.

ವೋಲ್ವೋ XC40 ರೀಚಾರ್ಜ್ ಸಿಂಗಲ್ ಮೋಟಾರ್ ರೂಪಾಂತರವು WLTP ಮಾನದಂಡಗಳ ಪ್ರಕಾರ ಸಂಪೂರ್ಣ ಚಾರ್ಜ್‌ನಲ್ಲಿ 475 ಕಿ.ಮೀ ರೇಂಜ್ ಮತ್ತು ICAT ಪರೀಕ್ಷಾ ಪರಿಸ್ಥಿತಿಗಳ ಅಡಿಯಲ್ಲಿ 592 ಕಿ.ಮೀ ರೇಂಜ್ ನೀಡುವುದಾಗಿ ಹೇಳಿಕೊಂಡಿದೆ. ಕಾರಿನ ಪವರ್ ಔಟ್‌ಪುಟ್‌ಗಳ ವಿಷಯಕ್ಕೆ ಬಂದರೆ, 69 kWh ಬ್ಯಾಟರಿ ಪ್ಯಾಕ್‌ನೊಂದಿಗೆ 238hp ಪವರ್ ಮತ್ತು 420Nm ಟಾರ್ಕ್ ಅನ್ನು ಹೊರಹಾಕುತ್ತದೆ.
ಅನ್ವಯವಾಗುವ ಇತರ ಸೇವೆಗಳು: 8 ವರ್ಷಗಳ ಬ್ಯಾಟರಿ ವಾರಂಟಿ, 3 ವರ್ಷಗಳ ಸಮಗ್ರ ಕಾರು ಖಾತರಿ, 3 ವರ್ಷಗಳ ವೋಲ್ವೋ ಸೇವಾ ಪ್ಯಾಕೇಜ್, 3 ವರ್ಷಗಳ ರಸ್ತೆ ಬದಿಯ ಸಹಾಯ, ಡಿಜಿಟಲ್ ಸೇವೆಗಳಿಗೆ 5 ವರ್ಷಗಳ ಚಂದಾದಾರಿಕೆ, ಮೂರನೇ ವ್ಯಕ್ತಿಯ ಮೂಲಕ 1 ವಾಲ್ ಬಾಕ್ಸ್ ಚಾರ್ಜರ್ (11 Kw) ಒಳಗೊಂಡಿದೆ.
ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು: ವೋಲ್ವೋ ಕಾರ್ ಇಂಡಿಯಾ ಇಂದು XC40 ರೀಚಾರ್ಜ್‌ನ ಸಿಂಗಲ್ ಮೋಟಾರ್ ವೇರಿಯೆಂಟ್ ಇವಿ ಕಾರಿನ ಬುಕ್ಕಿಂಗ್‌ಗಳು ಆನ್‌ಲೈನ್‌ನಲ್ಲಿ ತೆರೆಯಲಾಗಿದ್ದು, ವೋಲ್ವೋ ಕಾರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು ಎಂದು ವೋಲ್ವೋ ಇಂಡಿಯಾ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವೋಲ್ವೊ ಡೀಲರ್ ಅನ್ನು ಸಂಪರ್ಕಿಸಬಹುದು.
ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಮಾತನಾಡಿ, ಭಾರತೀಯ ಗ್ರಾಹಕರಿಗೆ ಕಾರ್ಯಕ್ಷಮತೆ, ಸುಸ್ಥಿರತೆ ಮತ್ತು ಅನುಕೂಲತೆಯ ಅಸಾಧಾರಣ ಸಮ್ಮಿಳನವನ್ನು ಒದಗಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಭಾರತದಲ್ಲಿ ವಾರ್ಷಿಕವಾಗಿ ಒಂದು ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುವ ನಮ್ಮ ಭರವಸೆಯನ್ನು ಬಲಪಡಿಸುತ್ತದೆ. ನಮ್ಮ ಎಲ್ಲಾ ಕೊಡುಗೆಗಳಂತೆ, XC40 ರೀಚಾರ್ಜ್ ಅನ್ನು ನಮ್ಮ ಬೆಂಗಳೂರಿನ ಹೊಸಕೋಟೆ ಸ್ಥಾವರದಲ್ಲಿ ನಿಖರವಾಗಿ ಜೋಡಿಸಲಾಗುತ್ತಿದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications