ವೋಲ್ವೋದಿಂದ ಕಾಂಗರೂ ಪತ್ತೇದಾರಿ ತಂತ್ರಜ್ಞಾನ
ತನ್ನ ಜೀವನವನ್ನು ಐಷಾರಾಮಿಯಾಗಿಸುವ ಭರದಲ್ಲಿ ಭೂಪ್ರಕೃತಿಯ ನಿಯಮಗಳನ್ನು ಗಾಳಿಗೆ ತೂರುವ ಮಾನವ, ತನ್ನ ಅಹಂಭಾವದಿಂದಲೇ ಒಂದೊಂದೇ ಜೀವ ಜಾಲವನ್ನು ಆಕ್ರಮಿಸುತ್ತಲೇ ಸಾಗುತ್ತಿದ್ದಾನೆ. ಪ್ರಕೃತಿಯ ಉಳಿಗಾಲದಲ್ಲಿ ತನ್ನ ಸಹ ಜೀವಿಗಳಿಗೂ ಜೀವಸುವ ಅವಕಾಶ ನೀಡಬೇಕೆಂಬ ವಿಚಾರವನ್ನು ಮರೆತು ಬಿಟ್ಟಿದ್ದಾನೆ.
Also Read: ವೋಲ್ವೋ ಎಸ್60 ಕ್ರಾಸ್ ಕಂಟ್ರಿ - ವಿಶ್ವದ ಚೊಚ್ಚಲ ಕ್ರಾಸೋವರ್ ಸೆಡಾನ್
ವಾಹನ ತಂತ್ರಜ್ಞಾನದ ಅಭಿವೃದ್ದಿಯೊಂದಿಗೆ ಅರಣ್ಯ ಪ್ರದೇಶಗಳ ನಡುವೆ ಹೊಸ ಹೊಸ ರಸ್ತೆಗಳು ಸಿದ್ಧಗೊಂಡಿವೆ. ಇದರೊಂದಿಗೆ ವನ್ಯಜೀವಿಗಳಿಗೆ ಸಾಕಷ್ಟು ತೊಂದರೆಯುಂಟಾಗುತ್ತಿದ್ದು, ಬಡಪಾಯಿ ಜೀವಿಗಳು ವಾಹನಗಳ ಪೆಟ್ಟಿಗೆ ತಮ್ಮ ಜೀವವನ್ನೇ ಕಳೆದುಕೊಳ್ಳುವಂತಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ಅತ್ಯಂತ ಜನಪ್ರಿಯವಾಗಿದ್ದು, ತನ್ನ ಮರಿ ಜೀವಿಯನ್ನು ಚೀಲದಲ್ಲಿ ಕುಳ್ಳಿರಿಸಿ ತಾಯಿ ಕಾಂಗರೂ ಸಂಚರಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ನ್ಯಾಷನಲ್ ರೋಡ್ಸ್ ಆ್ಯಂಡ್ ಮೊಟೊರಿಸ್ಟ್ ಅಸೋಸಿಯೇಷನ್ (ಎನ್‌ಆರ್‌ಎಂಎ) ವರದಿಯ ಪ್ರಕಾರ ವರ್ಷಂಪ್ರತಿ ಆಸ್ಟ್ರೇಲಿಯಾ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ 20,000ದಷ್ಟು ಕಾಂಗರೂಗಳು ಬಲಿ ಅಥವಾ ಗಾಯಗಳಾಗುತ್ತಿದ್ದು, 75 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ವಿಮೆ ಬೇಡಿಕೆ ಎದುರಾಗುತ್ತಿದೆ. ಘಟನೆಯಿಂದಾಗಿ ಸಂಚಾರಿಗಳಿಗೂ ತೊಂದರೆಯಾಗುತ್ತಿದೆ.

ಆದರೆ ಹೆಚ್ಚುತ್ತಿರುವ ಕಾಂಗರೂ ಅಪಘಾತ ಪ್ರಕರಣವನ್ನು ಪರಿಗಣಿಸಿರುವ ಜಗತ್ತಿನ ಮುಂಚೂಣಿಯ ಸಂಸ್ಥೆಯಾಗಿರುವ ಸ್ವೀಡನ್ ಮೂಲದ ವೋಲ್ವೋ ಸಂಸ್ಥೆಯು ಕಾಂಗರೂ ಪತ್ತೇದಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಕಾಂಗರೂ ಡಿಟೆಕ್ಷನ್ ಟೆಕ್ನಾಲಜಿ ಎಂದರಿಯಲ್ಪಡುವ ಈ ತಂತ್ರಾಂಶದ ಮೂಲಕ ವನ್ಯ ಜೀವಿಗಳ ಜೊತೆಗಿನ ಢಿಕ್ಕಿ ಪ್ರಕರಣವನ್ನು ತಡೆಯಬಹುದಾಗಿದೆ. ವೋಲ್ವೋ ಸಂಸ್ಥೆಯು ಈಗಿರುವ ಸಿಟಿ ಸೇಫ್ಟಿ ಸಿಸ್ಟಂನಲ್ಲಿ ಇದನ್ನು ಆಳವಡಿಸಲಿದೆ.

ಸಿಟಿ ಸೇಫ್ಟಿ ಸಿಸ್ಟಂ ಮುಖಾಂತರ ರಸ್ತೆ ಮಧ್ಯೆ ಸೈಕಲ್ ಸವಾರರು ಅಥವಾ ಪಾದಚಾರಿಗಳು ಎದುರಾದರೆ ಇದರಲ್ಲಿ ಆಳವಡಿಸಲಾಗಿರುವ ಕ್ಯಾಮೆರಾ ಹಾಗೂ ರಾಡಾರ್ ಮುಖಾಂತರ ಗುರುತಿಸಿಕೊಳ್ಳಬಹುದಾಗಿದೆ. ಇದರಂತೆ ಕಾರನ್ನು ನಿಯಂತ್ರಿಸಲುವಲ್ಲಿ ಚಾಲಕ ಎಡವಿದ್ದಲ್ಲೂ ಇದರ ಸ್ವಯಂಚಾಲಿತ ತಂತ್ರಜ್ಞಾನ ಮುಖಾಂತರ ಕಾರು ನಿಧಾನವಾಗಲಿದೆ.

ವೋಲ್ವೋ ಸಂಸ್ಥೆಯು ಈಗಾಗಲೇ ಇದಕ್ಕೆ ಸಮಾನವಾದ ರೀತಿಯಲ್ಲಿ ದೊಡ್ಡದಾದ ವನ್ಯ ಜೀವಿಗಳನ್ನು ಪತ್ತೆ ಹಚ್ಚುವ ತಂತ್ರಗಾರಿಕೆಯನ್ನು ಹೊಂದಿದೆ. ಇದಕ್ಕೆ ಹೋಲಿಸಿದಾಗ ಶರವೇಗದಲ್ಲಿ ಚಲಿಸುವ ಕಾಂಗರೂಗಳನ್ನು ಪತ್ತೆ ಹಚ್ಚುವುದು ನಿಜಕ್ಕೂ ಸವಾಲಾಗಿದೆ.

ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ವೋಲ್ವೋ ಎಂಜಿನಿಯರ್ ಗಳು ಆಸ್ಟ್ರೇಲಿಯಾದ ಕ್ಯಾಂನ್ಬೆರಾದಲ್ಲಿರುವ ಕಾಂಗರೂ ಸಂರಕ್ಷಣಾ ಕೇಂದ್ರದಲ್ಲಿ ನಿರಂತರ ಅಧ್ಯಯನ ನಡೆಸಿದ್ದರು. ಇದರ ಫಲಶ್ರುತಿಯೆಂಬಂತೆ ಹೊಸ ತಂತ್ರಗಾರಿಕೆಯೊಂದಿಗೆ ಮುಂದೆ ಬಂದಿದ್ದಾರೆ.

ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ


Click it and Unblock the Notifications