ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ

Written By:

ಸ್ವೀಡನ್ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ವೋಲ್ವೋ, ಭಾರತದಲ್ಲಿ ನೂತನ ವಿ40 ಕಾರನ್ನು ಬಿಡುಗಡೆಗೊಳಿಸಿದೆ. ಇದು ಭಾರತದಲ್ಲಿ ಲಭ್ಯವಿರುವ ಅತಿ ಅಗ್ಗದ ವೋಲ್ವೋ ಕಾರೆನಿಸಿಕೊಳ್ಳಲಿದೆ.

ಬೆಲೆ ಮಾಹಿತಿ: 24.75 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ದೇಶದ ಲಗ್ಷುರಿ ಮಾರುಕಟ್ಟೆಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ನೂತನ ವೋಲ್ವೋ ವಿ40 ಕಾರು, ಜರ್ಮನಿಯ ಪ್ರತಿಷ್ಠಿತ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್ ಎ ಕ್ಲಾಸ್, ಬಿಎಂಡಬ್ಲ್ಯು 1 ಸಿರೀಸ್ ಹಾಗೂ ಮಿನಿ ಕೂಪರ್ 5 ಡೋರ್ ಮಾದರಿಗಳಿಗೆ ನೂತನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಪೈಪೋಟಿ ಒಡ್ಡಲಿದೆ.

ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ

ನೂತನ ವೋಲ್ವೋ ವಿ40 ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಕೈನಾಟಿಕ್ ಮತ್ತು ಆರ್-ಡಿಸೈನ್. ಈ ಪೈಕಿ ಆರ್ ಡಿಸೈನ್ 27.7 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ

ವೋಲ್ವೋ ವಿ40 ಕ್ರಾಸ್ ಕಂಟ್ರಿ ಜೊತೆ ಸಮಾನತೆಯನ್ನು ಹೊಂದಿರುವ ವಿ40 ಕಾರಿನಲ್ಲಿ ವೋಲ್ವೋ ಡ್ರೈವ್-ಇ ಫ್ಯಾಮಿಲಿಯ ಎಂಜಿನ್ ಆಳವಡಿಸಲಾಗಿದೆ.

ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ

ವೋಲ್ವೋ ವಿ40 ಕೈನಾಟಿಕ್ ಹಾಗೂ ಆರ್-ಡಿಸೈನ್ ಮಾದರಿಗಳು 2.0 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 148 ಅಶ್ವಶಕ್ತಿ (350) ಉತ್ಪಾದಿಸಲಿದೆ. ಅಲ್ಲದೆ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಅತಿ ಅಗ್ಗದ ವೋಲ್ವೋ ಕಾರು ಭಾರತದಲ್ಲಿ ಬಿಡುಗಡೆ

ಸಂಸ್ಥೆಯ ಪ್ರಕಾರ ವೋಲ್ವೋ ವಿ40 ಪ್ರತಿ ಲೀಟರ್ ಗೆ 16.81 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವಿಶೇಷತೆ

ವಿಶೇಷತೆ

ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ,

ಬಾಗಿದಂತಹ ಹೆಡ್ ಲೈಟ್,

ಪ್ಯಾನರೋಮಿಕ್ ರೂಫ್,

ಅಡಾಪ್ಟಿವ್ ಡಿಜಿಟಲ್ ಡಿಸ್ ಪ್ಲೇ ಕನ್ಸೋಲ್.

ರೈನ್ ಸೆನ್ಸಾರ್,

ಪಾರ್ಕ್ ಅಸಿಸ್ಟ್,

ಕೀಲೆಸ್ ಡ್ರೈವ್,

ಲೆಥರ್ ಸೀಟು,

ಎಬಿಎಸ್,

ಏರ್ ಬ್ಯಾಗ್ (ಮುಂಭಾಗ, ಬದಿ, ಕರ್ಟೈನ್)

Read more on ವೋಲ್ವೋ volvo
English summary
Volvo India is showcasing tremendous faith in the domestic market and is launching one product after the other. Now on 17th June, 2015 the Swedish manufacturer has launched its premium hatchback V40 in India.
Story first published: Thursday, June 18, 2015, 14:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark