ಬಿಡುಗಡೆಗೆ ಮೊದಲೇ ವೋಲ್ವೋ ಎಸ್‌ಯುವಿಗೆ ಭಾರಿ ಡಿಮ್ಯಾಂಡ್

By Nagaraja

ಸ್ವಿಡನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ವೋಲ್ವೋ ಇತ್ತೀಚೆಗಷ್ಟೇ ಎಕ್ಸ್‌ಸಿ90 ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಿತ್ತು. ಪ್ರಸ್ತುತ ವಾಹನ ಬಿಡುಗಡೆಗೆ ಮೊದಲೇ ಭಾರಿ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಕಾರಣವಾಗಿದೆ.

ವರದಿಗಳ ಪ್ರಕಾರ ವೋಲ್ವೋ ನೂತನ ಎಸ್‌ಯುವಿ ಬಿಡುಗಡೆಗೂ ಮುಂಚಿತವಾಗಿ ಈಗಾಗಲೇ 16,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

volvo xc90

ವೋಲ್ವೋ ಎಕ್ಸ್‌ಸಿ90 ತವರೂರಾದ ಸ್ವಿಡನ್‌ ಟೊರ್ಸಲ್ಯಾಂಡಾ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಅಲ್ಲದೆ ಬಿಡುಗಡೆ ಬೆನ್ನಲ್ಲೇ ಮಾರುಕಟ್ಟೆ ತಲುಪಲಿದೆ.

ಹೊಸ ವೋಲ್ವೋ ಎಸ್‍‌ಯುವಿ 2.0 ಲೀಟರ್ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಸೂಪರ್ ಚಾರ್ಜ್ಡ್ ಜೊತೆಗೆ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಇವೆಲ್ಲದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಅಂತೆಯೇ ಡ್ರೈವ್ ಇ ವ್ಯವಸ್ಥೆಯಿಂದ ಗರಿಷ್ಠ 400 ಅಶ್ವಶಕ್ತಿ ಹುಟ್ಟು ಹಾಕಬಹುದಾಗಿದೆ. ಗರಿಷ್ಠ ಇಂಧನ ಕ್ಷಮತೆಯ ಈ ಹೈಬ್ರಿಡ್ ತಂತ್ರಜ್ಞಾನವು ಗ್ರಾಹಕರನ್ನು ಅತಿ ಹೆಚ್ಚು ಆಕರ್ಷಿಸಲು ನೆರವಾಗಿದೆ.

volvo xc90

ಇನ್ನೊಂದೆಡೆ ಟರ್ಬೊ ಡಿ5 ಡೀಸೆಲ್ ಎಂಜಿನ್ 225 ಅಶ್ವಶಕ್ತಿ (470 ತಿರುಗುಬಲ) ಹಾಗೂ ಡಿ4 ಟರ್ಬೊ ಡೀಸೆಲ್ ಎಂಜಿನ್ 190 ಅಶ್ವಶಕ್ತಿ (400 ತಿರುಗುಬಲ) ಉತ್ಪಾದಿಸಲಿದೆ. ಇನ್ನು ಟಿ6 ಸೂಪರ್ ಟರ್ಬೊ ಪೆಟ್ರೋಲ್ ಎಂಜಿನ್ 320 ಅಶ್ವಶಕ್ತಿ (400 ತಿರುಗುಬಲ) ಮತ್ತು ಟಿ5 ಪೆಟ್ರೋಲ್ ಎಂಜಿನ್ 254 ಅಶ್ವಶಕ್ತಿ (350 ತಿರುಗುಬಲ) ಉತ್ಪಾದಿಸಲಿದೆ. ಇವೆಲ್ಲವೂ ಸ್ಟ್ಯಾಂಡರ್ಡ್ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

More from DriveSpark

Article Published On: Saturday, February 14, 2015, 12:10 [IST]
English summary
Swedish automobile manufacturer had recently showcased its new SUV the XC90. It will soon be arriving in showrooms and dealerships have begun accepting bookings. Volvo has now announced that its SUV has witnessed tremendous demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+