ವಿಶ್ವದ ಅತಿ ದೊಡ್ಡ ಆಟೋ ಶೋದಲ್ಲಿ ಟೈಗ್ವಾನ್ ಭರ್ಜರಿ ಎಂಟ್ರಿ
ವಿಶ್ವದ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಫೋಕ್ಸ್‌ವ್ಯಾಗನ್ ಅತಿ ನೂತನ ಟೈಗ್ವಾನ್ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಭರ್ಜರಿ ಪ್ರವೇಶ ಕಂಡಿದೆ. ಇದು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.
ಫ್ರಾಂಕ್ ಫರ್ಟ್ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಫೋಕ್ಸ್ ವ್ಯಾಗನ್ ಟೈಗ್ವಾನ್ ನಾಲ್ಕು ಮಾದರಿಗಳನ್ನು ಅನಾವರಣಗೊಳಿಸಲಾಗಿತ್ತು. ಅವುಗಳೆಂದರೆ,
ಟೈಗ್ವಾನ್ ಆರ್ ಲೈನ್, ಟೈಗ್ವಾನ್ ಜಿಟಿಇ ಕಾನ್ಸೆಪ್ಟ್, ಟೈಗ್ವಾನ್ ಆನ್ ರೋಡ್ ಟೈಗ್ವಾನ್ ಆಫ್ ರೋಡ್

ಎರಡನೇ ತಲೆಮಾರಿನ ಮೊಡ್ಯುಲರ್ ಟ್ರಾನ್ಸ್‌ವರ್ಸ್ ಮ್ಯಾಟ್ರಿಕ್ಸ್ (ಎಂಕ್ಯೂಬಿ) ತಳಹದಿಯಲ್ಲಿ ನಿರ್ಮಾಣವಾಗಿರುವ ಫೋಕ್ಸ್ ವ್ಯಾಗನ್ ಟೈಗ್ವಾನ್ ನೈಜ ಎಸ್‌ಯುವಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಟೈಗ್ವಾನ್ ಒಟ್ಟಾರೆ ಭಾರದಲ್ಲಿ 50 ಕೆ.ಜಿಗಳಷ್ಟು ಇಳಿಕೆಯಾಗಿದ್ದು, ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಅಲ್ಲದೆ 615 ಲೀಟರ್ ಗಳಷ್ಟು ಬೃಹತ್ ಢಿಕ್ಕಿ ಜಾಗವನ್ನು ಇದು ಹೊಂದಿರುತ್ತದೆ. ಅಷ್ಟೇ ಯಾಕೆ ಹಿಂಭಾಗದ ಸೀಟು ಮಡಚಿದಾದ 1655 ಲೀಟರ್ ಢಿಕ್ಕಿ ಜಾಗ ನಿಮ್ಮದಾಗಲಿದೆ.

ಎಂಟು ಎಂಜಿನ್ ಆಯ್ಕೆಗಳನ್ನು ಕೊಡಲಾಗುತ್ತಿದೆ. ಇದು 115 ಅಶ್ವಶಕ್ತಿಯಿಂದ ಆರಂಭವಾಗಿ 240 ಅಶ್ವಶಕ್ತಿಯ ವರೆಗೆ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅಂತೆಯೇ ನೂತನ ಫೋಕ್ಸ್ ವ್ಯಾಗನ್ ಟೈಗ್ವಾನ್ ಹಿಂದಿನ ಮಾದರಿಗಿಂತಲೂ ಶೇಕಡಾ 24ರಷ್ಟು ಪರಿಣಾಮಕಾರಿ ಇಂಧನ ಕ್ಷಮತೆಯನ್ನು ಹೊಂದಿರಲಿದೆ.

ನೂತನ 4 ಮೋಷನ್ ಆಕ್ಟಿವ್ ಕಂಟ್ರೋಲ್ ವ್ಯವಸ್ಥೆಯು ಇತರ ವಾಹನಗಳಿಂದ ವಿಭಿನ್ನವಾಗಿಸಲಿದ್ದು, ಆಲ್ ವೀಲ್ ಡ್ರೈವ್ ಹೊಂದಾಣಿಕೆಯೊಂದಿಗೆ ಎಲ್ಲ ಚಾಲನಾ ಪರಿಸ್ಥಿತಿಗೂ ಸಹಕಾರಿಯಾಗಲಿದೆ.

ಅನುಕೂಲತೆ, ಚಲನಶೀಲತೆ ಹಾಗೂ ಸುರಕ್ಷತೆಯಲ್ಲಿ ಯಾವುದೇ ರಾಜಿಗೂ ಫೋಕ್ಸ್ ವ್ಯಾಗನ್ ತಯಾರಾಗಿಲ್ಲ. ಇದರಲ್ಲಿ ಫ್ರಂಟ್ ಅಸಿಸ್ಟ್ ಜೊತೆ ಸಿಟಿ ಎಮರ್ಜನ್ಸಿ ಬ್ರೇಕಿಂಗ್, ಪಾದಚಾರಿ ಗ್ರಹಿಕಾ ವ್ಯವಸ್ಥೆ, ಲೇಸ್ ಸಹಾಯ, ಆಟೋಮ್ಯಾಟಿಕ್ ಢಿಕ್ಕಿ ಬ್ರೇಕಿಂಗ್ ಸಿಸ್ಟಂ ಎಲ್ಲ ಸೇವೆಯು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಬಹು ಕ್ರಿಯಾತ್ಮಕ ಮಾಹಿತಿ ಮನರಂಜನಾ ಸಿಸ್ಟಂಗೆ ಆಪಲ್ ಹಾಗೂ ಆಂಡ್ರಾಯ್ಡ್ ಫೋನ್ ಗಳನ್ನು ಆಪ್ ಕನೆಕ್ಟ್ ಸಹ ಮಾಡಬಹುದಾಗಿದೆ.

ಈ ಪೈಕಿ ಫೋಕ್ಸ್ ವ್ಯಾಗನ್ ಟೈಗ್ವಾನ್ ಜಿಟಿಇ, ಪ್ಲನ್ ಇನ್ ಹೈಬ್ರಿಡ್ ಕಾನ್ಸೆಪ್ಟ್ ವಾಹನವಾಗಿದ್ದು, ನಿಕಟ ಭವಿಷ್ಯದಲ್ಲೇ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಒಟ್ಟಿನಲ್ಲಿ 'ಅರ್ಬನ್ ಅಡ್ವೆಂಚರ್' ಎಂಬ ಗುರುತಿನೊಂದಿಗೆ ಪ್ರವೇಶ ಪಡೆದಿರುವ ಫೋಕ್ಸ್ ವ್ಯಾಗನ್ ಟೈಗ್ವಾನ್ ಮಾರುಕಟ್ಟೆಯಲ್ಲಿ ಭಾರಿ ಅಲೆ ಎಬ್ಬಿಸುವ ನಿರೀಕ್ಷೆ ಹೊಂದಿದೆ.
ಫೋಕ್ಸ್ ವ್ಯಾಗನ್ ಟೈಗ್ವಾನ್ ಎಂಟ್ರಿ - ವಿಡಿಯೋ ವೀಕ್ಷಿಸಿ


Click it and Unblock the Notifications








