ಡಸ್ಟರ್, ಟೆರನೊಗಿಂತಲೂ ದುಬಾರಿ ಹ್ಯುಂಡೈ ಕ್ರೆಟಾ
ಇನ್ನಷ್ಟೇ ಬಿಡುಗಡೆಯಾಗಲಿರುವ ಹ್ಯುಂಡೈ ಕ್ರೆಟಾ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನೂತನ ಹ್ಯುಂಡೈ ಕ್ರೆಟಾ ಮಾದರಿಯು ರೆನೊ ಡಸ್ಟರ್ ಹಾಗೂ ನಿಸ್ಸಾನ್ ನ ಪ್ರೀಮಿಯಂ ಟೆರನೊ ಕಾರಿಗಿಂತಲೂ ದುಬಾರಿಯೆನಿಸಲಿದೆ.
ಸಂಸ್ಥೆಯ ಹೊಸತಾದ ಫ್ಲೂಯಿಡಿಕ್ ವಿನ್ಯಾಸ ತಂತ್ರಗಾರಿಕೆಯಲ್ಲಿ ನಿರ್ಮಾಣವಾಗಲಿರುವ ಹ್ಯುಂಡೈ ಕ್ರೆಟಾ ಈಗಾಗಲೇ 10,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆಗೆ ಎಡೆಮಾಡಿಕೊಟ್ಟಿದೆ.

ನಿಸ್ಸಾನ್ ಟೆರನೊ ಪ್ರಾರಂಭಿಕ ಬೆಲೆ 10.58 ಲಕ್ಷ ರು.ಗಳಾಗಿವೆ. ಅದೇ ಹೊತ್ತಿಗೆ ರೆನೊ ಡಸ್ಟರ್ ಆರಂಭಿಕ ಬೆಲೆ 9.09 ಲಕ್ಷ ರು.ಗಳಾಗಿದೆ. ಅಂತೆಯೇ ಇವೆರಡರ ಟಾಪ್ ಎಂಡ್ ವೆರಿಯಂಟ್ ಗಳು ಅನುಕ್ರಮವಾಗಿ 13.47 ಹಾಗೂ 13.63 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.
ಈಗ ಬರಲಿರುವ ಮಿನಿ ಎಸ್ ಯುವಿ ಹೆಚ್ಚು ಸೌಲಭ್ಯಗಳ ಜೊತೆಗೆ ಬೆಲೆಯೂ ಕೊಂಚ ದುಬಾರಿಯೆನಿಸಲಿದೆ. ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್ ವೆರಿಯಂಟ್ ಸಹ ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ.


Click it and Unblock the Notifications