ಬಿಡುಗಡೆಗೂ ಮೊದಲೇ 'ಟಾಟಾ ಝಿಕಾ' ಸೌಂದರ್ಯ ಪ್ರದರ್ಶನ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅತಿ ಶೀಘ್ರದಲ್ಲೇ ನೂತನ ಝಿಕಾ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡುವ ಕುರಿತಾಗಿ ನಾವು ಮಾಡಿರುತ್ತೇವೆ. ಇದರ ಬೆನ್ನಲ್ಲೇ ವಾಹನ ಪ್ರೇಮಿಗಳಲ್ಲಿ ಹೊಸ ಟಾಟಾ ಝಿಕಾ ಹೇಗಿರಬಹುದೆಂಬ ಕುತೂಹಲ ಮನೆ ಮಾಡಿದೆ.

Also Read: ಭಾರಿ ನಿರೀಕ್ಷೆ ಹುಟ್ಟಿಸಿದ ಟಾಟಾ ಕೈಟ್ ರೇಖಾ ಚಿತ್ರ

ಕಳಪೆ ಗುಣಮಟ್ಟದ ಆಪಾದನೆಯನ್ನು ಎದುರಿಸುತ್ತಲೇ ಬಂದಿರುವ ಟಾಟಾಗೆ ಪ್ರಯಾಣಿಕ ಕಾರು ವಿಭಾಗದಲ್ಲಿ ಭರ್ಜರಿ ಪುನರಾಗಮನ ಮಾಡಿಕೊಳ್ಳಲು ಹೊಸ ಝಿಕಾ ಕಾರು ನೆರವಾಗಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ. ಏನೇ ಆದರೂ ಬಿಡುಗಡೆಗೂ ಮೊದಲು ಟಾಟಾ ಝಿಕಾ ಸೌಂದರ್ಯ ಪ್ರದರ್ಶನವನ್ನು ಮಾಡಿಕೊಂಡಿದ್ದು, ಪ್ರಭಾವಿ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಟಾಟಾ ಝಿಕಾ ಹ್ಯಾಚ್‌ಬ್ಯಾಕ್ ಕಾರು ಮುಂದಿನ ವರ್ಷಾರಂಭದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಅಲ್ಲದೆ 2016 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಾರುತಿ ಆಲ್ಟೊ ಕೆ10, ಹ್ಯುಂಡೈ ಐ10, ಹ್ಯುಂಡೈ ಇಯಾನ್, ಮಾರುತಿ ವ್ಯಾಗನಾರ್ ಹಾಗೂ ರೆನೊ ಕ್ವಿಡ್ ಮಾದರಿಗಳಿಗೆ ನೂತನ ಟಾಟಾ ಝಿಕಾ ಪ್ರತಿಸ್ಪರ್ಧಿಯಾಗಲಿದೆ.

ಬೆಲೆ ಪರಿಧಿ

ಬೆಲೆ ಪರಿಧಿ

ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಆಗಿರುವ ಟಾಟಾ ಝಿಕಾ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, ಮೂರರಿಂದ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಇದು ದೇಶದ ಮಧ್ಯಮ ವರ್ಗದ ಕಾರು ಖರೀದಿ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯೊದಗಿಸಲಿದೆ.

ಹೊಸ ತಳಹದಿ

ಹೊಸ ತಳಹದಿ

ಸಂಪೂರ್ಣ ಹೊಸ ಫ್ಲ್ಯಾಟ್‌ಫಾರ್ಮ್ ನಲ್ಲಿ ನಿರ್ಮಾಣವಾಗಲಿರುವ ಟಾಟಾ ಝಿಕಾ ಕಾರಿನಲ್ಲಿ ನಾವೀನ್ಯ ಹಾಗೂ ತಾಜಾ ವಿನ್ಯಾಸ ಹಾಗೂ ಕಟ್ಟಿಂಗ್ ಎಡ್ಜ್ ಚಲನಶೀಲತೆ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ ಎಂದು ಟಾಟಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿನ್ಯಾಸ

ವಿನ್ಯಾಸ

ಇತರ ಟಾಟಾ ಕಾರುಗಿಂತಲೂ ಭಿನ್ನವಾಗಿ ನೂತನ ಝಿಕಾದಲ್ಲಿ ದೃಢವಾದ ಸ್ವಭಾವ ರೇಖೆಗಳು, ಮಲ್ಟಿ ಸ್ಪೋಕ್ ಸ್ಪೋಕ್ ಅಲಾಯ್ ವೀಲ್, ಹೊಸ ಟೈಲ್ ಲ್ಯಾಂಪ್, ಹಿಂದುಗಡೆ ವಿಂಡ್ ಶಿಲ್ಡ್, ದೇಹ ಬಣ್ಣದ ಡೋರ್ ಹ್ಯಾಂಡಲ್, ಇಂಟೇಗ್ರೇಟಡ್ ರಿಯರ್ ಸ್ಪಾಯ್ಲರ್, ಬ್ರೇಕ್ ಲೈಟ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಟಾಟಾ ಝಿಕಾ ಅನಾವರಣ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಮುಂಭಾಗದಲ್ಲಿ ಸಂಸ್ಥೆಯ ಸಿಗ್ನೇಚರ್ ಗ್ರಿಲ್ ಹೊರತಾಗಿ 'ಹ್ಯುಮಾನಿಟಿ ಲೈನ್' ನೋಡಬಹುದಾಗಿದೆ. ಇದು ಬೋಲ್ಟ್ ಹಾಗೂ ಜೆಸ್ಟ್ ಮಾದರಿಗಳಿಗೆ ಸಮಾನವಾಗಿದೆ.

ಟಾಟಾ ಝಿಕಾ ಅನಾವರಣ

ಟಾಟಾ ಸಂಸ್ಥೆಯ ನೂತನ ಹೋರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ಆಕ್ರಮಣಕಾರಿ ಹಾಗೂ ಕ್ರೀಡಾತ್ಮಕ ವಿನ್ಯಾಸ ತಂತ್ರಜ್ಞಾನವನ್ನು ಅನುಸರಿಸಲಾಗಿದೆ. ಅಂತೆಯೇ ಬೋಲ್ಟ್ ಹಾಗೂ ಜೆಸ್ಟ್ ತರಹನೇ ನೂತನ ಝಿಕಾ ಕಾರನ್ನು ಸಹ ಸಂಸ್ಥೆಯ ಪುಣೆ, ಕೊವೆಂಟ್ರಿ ಮತ್ತು ಟ್ಯುರಿನ್ ನಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಾಗಿದೆ.

ಟಾಟಾ ಝಿಕಾ ಅನಾವರಣ

ಮಾರುಕಟೆಯಲ್ಲಿ ಇಂಡಿಕಾ ಇವಿ2 ಸ್ಥಾನವನ್ನು ತುಂಬಲಿರುವ ನೂತನ ಝಿಕಾ, 1.2 ಲೀಟರ್ ಪೆಟ್ರೋಲ್ ಹಾಗೂ 1.05 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ.

  • 1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್,
  • 1.05 ಲೀಟರ್, 3 ಸಿಲಿಂಡರ್ ಡೀಸೆಲ್

ಟಾಟಾ ಝಿಕಾ ಅನಾವರಣ

ಸಮಕಾಲೀನ ಫುಟ್ಬಾಲ್ ಜಗತ್ತಿನ ಅತಿ ಜನಪ್ರಿಯ ಆಟಗಾರ ಲಿಯೊನೆಲ್ ಮೆಸ್ಸಿ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಳಿಸಿದ ಬಳಿಕ ಟಾಟಾ ಸಂಸ್ಥೆಯು ಭಾರತ ಸಹಿತ ಜಾಗತಿಕ ಉತ್ಪನ್ನಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ನೂತನ ಟಾಟಾ ಝಿಕಾ ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಲಿದೆ.

English summary
Zica - The Next Big Thing From Tata Motors

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark