ಫೋಕ್ಸ್‌ವ್ಯಾಗನ್ ಪರಿಷ್ಕೃತ ಪೊಲೊ, ವೆಂಟೊ ಬಿಡುಗಡೆ
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಫೋಕ್ಸ್‌ವ್ಯಾಗನ್ ಪರಿಷ್ಕೃತ ಪೊಲೊ ಹಾಗೂ ವೆಂಟೊ ಕಾರುಗಳನ್ನು ಬಿಡುಗಡೆಗೊಳಿಸಿದೆ. ನೂತನ ಪೊಲೊ ಹ್ಯಾಚ್ ಬ್ಯಾಕ್ ಹಾಗೂ ವೆಂಟೊ ಸೆಡಾನ್ ಕಾರುಗಳು ಮತ್ತಷ್ಟು ಉತ್ತೇಜನವನ್ನು ನೀಡಲಿದೆ.
ಬೆಲೆ ಮಾಹಿತಿ
- ಪೊಲೊ: 5.33 ಲಕ್ಷ ರು.ಗಳಿಂದ 8.9 ಲಕ್ಷ ರು.
- ವೆಂಟೊ: 7.85 ಲಕ್ಷ ರು.ಗಳಿಂದ 12.13 ಲಕ್ಷ ರು.

ಹೊಸತೇನಿದೆ?
- ಡೈನಾಮಿಕ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ,
- ಮಿರರ್ ಲಿಂಕ್ ಕನೆಕ್ಟಿವಿಟಿ,
- ಫೋನ್ ಬುಕ್,
- ಎಸ್‌ಎಂಎಸ್ ವೀಕ್ಷಣೆ,
- ರೈನ್ ಸೆನ್ಸಿಂಗ್ ವೈಪರ್,
- ಆಟೋ ಡಿಮ್ಮಿಂಗ್ ಐಆರ್‌ವಿಎಂ

ದೇಶದ ಪೊಲೊ ಹಾಗೂ ವೆಂಟೊ ಕಾರುಗಳ ಮಾರಾಟದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯ ಅಧಿಕಾರಿಗಳು ಪರಿಷ್ಕೃತ ಆವೃತ್ತಿಯ ಆಗಮನದೊಂದಿಗೆ ಮತ್ತಷ್ಟು ಮಾರಾಟ ಏರಿಕೆಯ ಗುರಿಯಿರಿಸಿಕೊಂಡಿದ್ದಾರೆ.


Click it and Unblock the Notifications

























