ಮುಂದಿನ 3 ವರ್ಷಗಳಲ್ಲಿ ಒಂದು ಡಜನ್ ಹೈಬ್ರಿಡ್-ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ!
ದೇಶದ ಪ್ರಮುಖ ನಗರಗಳ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ವಾಹನ ಕ್ಷೇತ್ರದ ನಿಕಟವರ್ತಿಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದು ಡಜನ್ ನಷ್ಟು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳು ರಸ್ತೆಗೆ ಪ್ರವೇಶಿಸಲಿದೆ.
ದೇಶದ ಮುಂಚೂಣಿಯ ವಾಹನ ಸಂಸ್ಥೆಗಳಾದ ಮಹೀಂದ್ರ ಆಂಡ್ ಮಹೀಂದ್ರ, ಹ್ಯುಂಡೈ, ಟೊಯೊಟಾ, ನಿಸ್ಸಾನ್ ಸೇರಿದಂತೆ ಮಾರುತಿ ಸುಜುಕಿ ಸಂಸ್ಥೆಗಳು ಹೈಬ್ರಿಡ್ ತಂತ್ರಗಾರಿಕೆಯತ್ತ ವಾಲುತ್ತಿದೆ. ಇದು ಭಾರತೀಯ ವಾಹನ ಮಾರುಕಟ್ಟೆಯ ದೃಷ್ಟಿಕೋನದಲ್ಲಿ ಉತ್ತಮವಾದ ಬೆಳವಣಿಗೆಯಾಗಿದೆ.

ದೇಶದ ನಂ.1 ಉಪಯುಕ್ತ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಎಕ್ಸ್ ಯುವಿ ಮೈಲ್ಡ್ ಹೈಬ್ರಿಡ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದೆ. ಇದು ಮುಂದಿನ ಒಂದು ವರ್ಷದೊಳಗೆ ಬಿಡುಗಡೆಯಾಗಲಿದೆ.

ಆಗಲೇ ನಾಲ್ಕು ಬಾಗಿಲುಗಳ ಇ2ಒ ಮತ್ತು ಕೆಯುವಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದಲ್ಲಿ ಮಹೀಂದ್ರ ಕಾರ್ಯ ಮಗ್ನವಾಗಿದ್ದು, ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಮೂಲಕ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರು ಇಂಡಿಯಾ ಸಹ ಮಧ್ಯಮ ಗಾತ್ರದ ಸೆಡಾನ್ ಕಾರು ವೆರ್ನಾದ ಸಾಫ್ಟ್ ಹೈಬ್ರಿಡ್ ಕಾರನ್ನು ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ. ಮುಂಬರುವ ಟಸ್ಕನ್ ಕಾರಿಗೂ ಇದೇ ತಂತ್ರಜ್ಞಾನ ಆಳವಡಿಕೆಯಾಗಲಿದೆ.

ಫೋಕ್ಸ್ ವ್ಯಾಗನ್, ಟೊಯೊಟಾ, ಹೋಂಡಾ ಹಾಗೂ ನಿಸ್ಸಾನ್ ಗಳಂತಹ ಸಂಸ್ಥೆಗಳು ಸಹ ಪ್ರೀಮಿಯಂ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ಸಂಪೂರ್ಣ ಹೈಬ್ರಿಡ್ ತಂತ್ರಜ್ಞಾನದ ಹೈ ಎಂಡ್ ಕಾರುಗಳನ್ನು ಬಿಡುಗಡೆ ಮಾಡುವುದು ಈ ಎಲ್ಲ ಸಂಸ್ಥೆಗಳ ಯೋಜನೆಯಾಗಿದೆ.

ದೇಶದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿ ಸಹ 2018-19ರ ವೇಳೆಯಾಗುವಾಗ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದಕ್ಕೂ ಮೊದಲು 2017-18ರ ಅವಧಿಯಲ್ಲಿ ಎಸ್ ಕ್ರಾಸ್ ಡೀಸೆಲ್ ಮೈಲ್ಡ್ ಹೈಬ್ರಿಡ್ ಆವೃತ್ತಿಯ ಪ್ರವೇಶವಾಗಲಿದೆ.

ಅತ್ತ ಟಾಟಾ ಮೋಟಾರ್ಸ್ ಸಹ 2018-19ರ ವೇಳೆಯಲ್ಲಿ ಹೈಬ್ರಿಡ್ ತಂತ್ರಗಾರಿಕೆಯ ಹೆಕ್ಸಾ ಕಾರನ್ನು ಬಿಡುಗಡೆ ಮಾಡಲಿದೆ. ಇನ್ನೊಂದೆಡೆ 2017 ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರಿನ ಆಗಮನವಾಗಲಿದೆ.

ಎಲೆಕ್ಟ್ರಿಕ್-ಹೈಬ್ರಿಡ್ ಕಾರುಗಳ ಯೋಜನೆಗಳು
ಮಾರುತಿ ಸಣ್ಣ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಕಾರು - 2018-19
ಮಾರುತಿ ಎಸ್-ಕ್ರಾಸ್ ಡೀಸೆಲ್ ಮೈಲ್ಡ್ ಹೈಬ್ರಿಡ್ - 2017-18
ಹ್ಯುಂಡೈ ವೆರ್ನಾ ಡೀಸೆಲ್ ಮೈಲ್ಡ್ ಹೈಬ್ರಿಡ್ - 2017
ಟಾಟಾ ಹೆಕ್ಸಾ ಡೀಸೆಲ್ ಮೈಲ್ಡ್ ಹೈಬ್ರಿಡ್ - 2018-19
ಮಹೀಂದ್ರ ಇ2o ಫೋರ್ ಡೋರ್ ಸಂಪೂರ್ಣ ಎಲೆಕ್ಟ್ರಿಕ್ - 2018-19

ಎಲೆಕ್ಟ್ರಿಕ್-ಹೈಬ್ರಿಡ್ ಕಾರುಗಳ ಯೋಜನೆಗಳು
ಮಹೀಂದ್ರ ಕೆಯುವಿ ಸಂಪೂರ್ಣ ಎಲೆಕ್ಟ್ರಿಕ್ - 2019-20
ಹೋಂಡಾ ಅಕಾರ್ಡ್ ಸಂಪೂರ್ಣ ಹೈಬ್ರಿಡ್ - 2016
ಫೋಕ್ಸ್ ವ್ಯಾಗನ್ ಪಸ್ಸಾಟ್ ಸಂಪೂರ್ಣ ಹೈಬ್ರಿಡ್ - 2017
ನಿಸ್ಸಾನ್ ಎಕ್ಸ್-ಟ್ರೈಲ್ - ಸಂಪೂರ್ಣ ಹೈಬ್ರಿಡ್ - 2017
ಟೊಯೊಟಾ ಆಲ್ ನ್ಯೂ ಕರೊಲ್ಲಾ ಸಂಪೂರ್ಣ ಹೈಬ್ರಿಡ್ - 2017-18

ಎಲೆಕ್ಟ್ರಿಕ್-ಹೈಬ್ರಿಡ್ ಕಾರುಗಳ ಯೋಜನೆಗಳು
ವೋಲ್ವೋ ಎಕ್ಸ್ ಸಿ90 ಸಂಪೂರ್ಣ ಹೈಬ್ರಿಡ್ - 2016
ಹ್ಯುಂಡೈ ಟಕ್ಸನ್ ಮೈಲ್ಡ್ ಹೈಬ್ರಿಡ್ - ಪರಿಗಣನೆಯಲ್ಲಿದೆ
ನಿಸ್ಸಾನ್ ಲೀಫ್ ಸಂಪೂರ್ಣ ಎಲೆಕ್ಟ್ರಿಕ್ - ಪರಿಗಣನೆಯಲ್ಲಿದೆ
ಫೋಕ್ಸ್ ವ್ಯಾಗನ್ ಪೊಲೊ ಮತ್ತು ವೆಂಟೊ ಸಂಪೂರ್ಣ ಹೈಬ್ರಿಡ್/ಎಲೆಕ್ಟ್ರಿಕ್ - ಪರಿಗಣನೆಯಲ್ಲಿದೆ


Click it and Unblock the Notifications








