ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಅತಿ ನೂತನ 'ಇಂಟೆಲ್ಲಿ ಹೈಬ್ರಿಡ್' ತಂತ್ರಜ್ಞಾನವನ್ನು ಒಳಗೊಂಡಿರುವ ಸ್ಕಾರ್ಪಿಯೊ ಕಾರನ್ನು ಬಿಡುಗಡೆಗೊಳಿಸಿದೆ.

ಸಂಸ್ಥೆಯು ಹೇಳುವ ಪ್ರಕಾರ ಇಂಟೆಲ್ಲಿ ಹೈಬ್ರಿಡ್ ತಂತ್ರಗಾರಿಕೆಯ ಬಳಕೆಯಿಂದಾಗಿ ಶೇಕಡಾ ಏಳರಷ್ಟು ಇಂಧನ ಉಳಿತಾಯವಾಗಲಿದೆ. ಇದರೊಂದಿಗೆ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ಸ್ಕಾರ್ಪಿಯೊಗೆ ಸಾಧ್ಯವಾಗಲಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಮಹೀಂದ್ರ ಸ್ಕಾರ್ಪಿಯೊ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಇಂಟೆಲ್ಲಿ-ಹೈಬ್ರಿಡ್ ತಂತ್ರಜ್ಞಾನವು ಒಳಗೊಂಡಿರಲಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಮಹೀಂದ್ರ ಸ್ಕಾರ್ಪಿಯೊ ಎಸ್4, ಎಸ್4 ಪ್ಲಸ್, ಎಸ್4 ಪ್ಲಸ್ ಫೋರ್ ವೀಲ್ ಡ್ರೈವ್, ಎಸ್6 ಪ್ಲಸ್, ಎಸ್8, ಎಸ್10 ಟು ವೀಲ್ ಡ್ರೈವ್ (ಮ್ಯಾನುವಲ್ ಟ್ರಾನ್ಸ್ ಮಿಷನ್) ಮತ್ತು ಎಸ್10 ಫೋರ್ ವೀಲ್ ಡ್ರೈವ್ (ಮ್ಯಾನುವಲ್ ಟ್ರಾನ್ಸ್ ಮಿಷನ್) ವೆರಿಯಂಟ್ ಗಳಲ್ಲಿ ಇಂಟೆಲ್ಲಿ-ಹೈಬ್ರಿಡ್ ತಂತ್ರಜ್ಞಾನವನ್ನು ಒದಗಿಸಲಾಗುತ್ತಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಮಹೀಂದ್ರ ಸ್ಕಾರ್ಪಿಯೊ ಟಾಪ್ ಎಂಡ್ ಎಸ್10 ಟು ವೀಲ್ ಡ್ರೈವ್ (ಮ್ಯಾನುವಲ್ ಟ್ರಾನ್ಸ್ ಮಿಷನ್) ಇಂಟೆಲ್ಲಿ ಹೈಬ್ರಿಡ್ ಆವೃತ್ತಿಯು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 12.84 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಇಂಟೆಲಿ ಹೈಬ್ರಿಡ್ ತಂತ್ರಜ್ಞಾನವು ಆಟೋಮ್ಯಾಟಿಕ್ ಸ್ಟ್ಯಾರ್ಟ್/ಸ್ಟಾಪ್ ತಂತ್ರಗಾರಿಕೆಯ ಹೊರತಾಗಿ ರಿಜನರೇಟಿವ್ ಬ್ರೇಕಿಂಗ್, ಹೆಚ್ಚು ಸಾಮರ್ಥ್ಯದ ಬ್ಯಾಟರಿ ಮತ್ತು ವಿವಿಧ ಸ್ಟ್ಯಾರ್ಟರ್ ಮೋಟಾರುಗಳನ್ನು ಪಡೆಯಲಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಕೆಲವು ನಿರ್ದಿಷ್ಟ ಚಾಲನಾ ಪರಿಸ್ಥಿತಿಯಲ್ಲಿ ವಿಶೇಷವಾಗಿಯೂ ವೇಗವರ್ಧನೆಯ ವೇಳೆ ಈ ಎಲ್ಲ ವ್ಯವಸ್ಥೆಗಳು ಎಂಜಿನ್ ಗೆ ವಿದ್ಯುತ್ ಸಹಾಯವನ್ನು ಮಾಡಲಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ನೂತನ ತಂತ್ರಜ್ಞಾನದೊಂದಿಗೆ ಸ್ಕಾರ್ಪಿಯೊ ದೇಶದಲ್ಲಿ ಲಭ್ಯವಿರುವ ಮೂರನೇ ಮೈಲ್ಡ್ ಹೈಬ್ರಿಡ್ ಕಾರೆನಿಸಿಕೊಳ್ಳಲಿದೆ. ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ಸಿಯಾಝ್ ಸೆಡಾನ್ ಮತ್ತು ಎರ್ಟಿಗಾ ಎಂಪಿವಿ ಮಾದರಿಗಳಲ್ಲಿ ಎಸ್‌ಎಚ್‌ವಿಎಸ್ ತಂತ್ರಜ್ಞಾನವನ್ನು ಒದಗಿಸುತ್ತಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಹಾಗಿದ್ದರೂ ಮಹೀಂದ್ರ ಸ್ಕಾರ್ಪಿಯೊ ಪೂರ್ಣ ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರುವ ಕಾರಲ್ಲ. ಅಲ್ಲದೆ ಎಲೆಕ್ಟ್ರಿಕ್ ಬಲದಿಂದ ಸಂಚರಿಸುವ ಸಾಮರ್ಥ್ಯವೂ ಇದಕ್ಕಿರುವುದಿಲ್ಲ. ಹಾಗಿದ್ದರೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವ ದೇಶದ ಮೊದಲ ಎಸ್‍ಯುವಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಮಹೀಂದ್ರ ಸ್ಕಾರ್ಪಿಯೊ ಇಂಟೆಲ್ಲಿ ಹೈಬ್ರಿಡ್ ಎಸ್‍ಯುವಿ ಬಿಡುಗಡೆ

ಇದಕ್ಕೂ ಮೊದಲು ಸ್ಕಾರ್ಪಿಯೊದಲ್ಲಿ ಮೈಕ್ರೊ ಹೈಬ್ರಿಡ್ ಪರಿಚಯಿಸಲಾಗಿತ್ತು. ಇದು ಸ್ಟ್ಯಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಮಾತ್ರ ಪಡೆದಿತ್ತು. ಇದನ್ನೀಗ ಇಂಟೆಲ್ಲಿ ಹೈಬ್ರಿಡ್ ತಂತ್ರಜ್ಞಾನವು ಬದಲಾಯಿಸಿಕೊಳ್ಳಲಿದೆ.

Most Read Articles

Kannada
English summary
Mahindra Launches The Scorpio With Intelli-Hybrid Technology
Story first published: Thursday, July 21, 2016, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X