ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

By Nagaraja

ವಾಣಿಜ್ಯ ನಗರಿ ಮುಂಬೈನಲ್ಲಿ ಜೇಮ್ಸ್ ಬಾಂಡ್ ಫೇವರಿಟ್ ಕಾರು ಆಸ್ಟನ್ ಮಾರ್ಟಿನ್ ಭರ್ಜರಿ ಪ್ರದರ್ಶನ ಕಂಡಿದೆ. ಆಸ್ಟನ್ ಮಾರ್ಟಿನ್ ಕಾರು ಶ್ರೇಣಿಗಳಲ್ಲಿ ಅತ್ಯಂತ ತಾಜಾತನದ ಡಿಬಿ11 ಭಾರತ ಎಂಟ್ರಿಗೂ ಮುನ್ನುಡಿಯಾಗಿ ಅನಾವರಣಗೊಂಡಿದೆ. ಬಲ್ಲ ಮೂಲಗಳ ಪ್ರಕಾರ ಆಸ್ಟನ್ ಮಾರ್ಟಿನ್ ಡಿಬಿ11 ಇನ್ನೇನು ಕೆಲವೇ ದಿನಗಳಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಇದರೊಂದಿಗೆ ದೇಶದಲ್ಲಿ ತನ್ನ ಸಾನಿಧ್ಯವನ್ನು ಬಲಪಡಿಸಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಡಿಬಿ11 ಬಿಡುಗಡೆ ಮುಂಚಿತವಾಗಿ ಶಕ್ತಿ ಪ್ರದರ್ಶನ ನಡೆಸಿದೆ. ಹಬ್ಬದ ಸಂಭ್ರಮದ ಅಂಗವಾಗಿ ಆಸ್ಟನ್ ಮಾರ್ಟಿನ್ ಡಿಬಿ11 ಪ್ರದರ್ಶನ ಕಂಡಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಇದಕ್ಕೂ ಮೊದಲು ಮಾರ್ಚ್ ತಿಂಗಳಲ್ಲಿ ನಡೆದ 2016 ಜಿನೆವಾ ಮೋಟಾರು ಶೋದಲ್ಲಿ ಆಸ್ಟನ್ ಮಾರ್ಟಿನ್ ಜಾಗತಿಕ ಪಾದಾರ್ಪಣೆಗೈದಿತ್ತು. ತದಾ ಬಳಿಕ ಅನೇಕ ಜಾಗತಿಕ ಮಾರುಕಟ್ಟೆಗೆ ತಲುಪಿತ್ತು.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಡಿಬಿ11 ಸಂಸ್ಥೆಯ 'ಸೆಕೆಂಡ್ ಸೆಂಚುರಿ' ಯೋಜನೆಯಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಕಾರಾಗಿದೆ. ಮತ್ತಷ್ಟು ನೂತನ ಹಾಗೂ ಪರಿಷ್ಕತ ಆವೃತ್ತಿಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಈ ಯೋಜನೆಯ ಮುಖಾಂತರ ಇತರ ಜಾಗತಿಕ ಮಾರುಕಟ್ಟೆಗಳಿಗೂ ತನ್ನ ಸಾನಿಧ್ಯವನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಇದರೊಂದಿಗೆ ಆಕರ್ಷಕ ಜೇಮ್ಸ್ ಬಾಂಡ್ ಕಾರು ಕನಸು ನನಸಾಗಿಸಬಹುದಾಗಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಡಿಬಿ11 ನಿರ್ವಹಣೆ ಬಗ್ಗೆ ಮಾತನಾಡುವುದಾದ್ದಲ್ಲಿ ಇದರಲ್ಲಿರುವ ಹೊಸದಾಗಿ ಅಭಿವೃದ್ಧಿಪಡಿಸಿರುವ 5.2 ಲಿಟರ್ ಟ್ವಿನ್ ಟರ್ಬೊ ವಿ12 ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಡಿಬಿ11, ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 322 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಸಾಲಿನ ಅತ್ಯಂತ ಪವರ್ ಫುಲ್ ಕಾರು ಇದಾಗಿದ್ದು, ಝಡ್ ಎಫ್ ನಿರ್ಮಿತ ಎಂಟು ಸ್ಪೀಡ್ ಗೇರ್ ಬಾಕ್ಸ್ ಚಕ್ರಗಳಲ್ಲಿ ಶಕ್ತಿಯನ್ನು ಹಸ್ತಾಂತರಿಸಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಮಾರುಕಟ್ಟೆಯನ್ನು ತಲುಪಲಿರುವ ಆಸ್ಟನ್ ಮಾರ್ಟಿನ್ ಡಿಬಿ11 ದೇಶದಲ್ಲಿ 4.5 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಮುಂಬರುವ ಆಸ್ಟನ್ ಮಾರ್ಟಿನ್ ಡಿಬಿ ಶ್ರೇಣಿಯ ಕಾರುಗಳಿಗೆ ಇದೇ ಎಂಜಿನ್ ಬಳಕೆಯಾಗಲಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಆಸ್ಟನ್ ಮಾರ್ಟಿನ್ ಡಿಬಿ9 ಮಾದರಿಗೆ ಹೋಲಿಸಿದಾಗ ಹೊಸ ಕಾರು 20 ಎಂಎಂ ಗಳಷ್ಟು ಹೆಚ್ಚು ಅಗಲವನ್ನು ಪಡೆದಿದೆ. ಟ್ವಿನ್ ಟರ್ಬೊ ಎಂಜಿನ್ ಪಡೆದಿರುವ ಮೊದಲ ಆಸ್ಟನ್ ಮಾರ್ಟಿನ್ ಕಾರೆಂಬ ಗೌರವಕ್ಕೂ ಪಾತ್ರವಾಗಿದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ ಇಡಿ ಹೆಡ್ ಲೈಟ್, ಡೇಲೈಟ್ ರನ್ನಿಂಗ್ ಲೈಟ್ಸ್, ಲೊ ಸ್ಪೀಡ್ ಕಾರ್ನರಿಂಗ್ ಲೈಟ್ಸ್, 20 ಇಂಚುಗಳ ಚಕ್ರಗಳು, ಎಲ್ ಇಡಿ ಟೈಲ್ ಲೈಟ್, 12 ಇಂಚುಗಳ ಕಲರ್ ಟಿಎಫ್ ಟಿ ಎಲ್ ಸಿಡಿ ಡಿಸ್ ಪ್ಲೇ ಇದರಲ್ಲಿರುತ್ತದೆ.

ಮುಂಬೈನಲ್ಲಿ ಜೇಮ್ಸ್ ಬಾಂಡ್ ನೆಚ್ಚಿನ ಕಾರು ಆಸ್ಟನ್ ಮಾರ್ಟಿನ್ ಜಲಕ್

ಹಾಗೆಯೇ ಇನ್ಪೋಟೈನ್ಮೆಂಟ್ ಸಿಸ್ಟಂಗಾಗಿ ಎಂಟು ಇಂಚುಗಳ ಟಿಎಫ್ ಟಿ ಸ್ಕ್ರೀನ್, ಬ್ಯಾಂಗ್ ಆಂಡ್ ಓಲುಫ್ಸೆನ್ ಆಡಿಯೋ ಸಿಸ್ಟಂ, ಪ್ಯಾರಲಲ್ ಮತ್ತು ಬೇ ಪಾರ್ಕಿ ಅಸಿಸ್ಟನ್ಸ್ ಮತ್ತು 360 ಡಿಗ್ರಿ ಐ ಕ್ಯಾಮೆರಾ ವ್ಯವಸ್ಥೆಗಳಿರಲಿದೆ.

More from DriveSpark

Article Published On: Monday, October 10, 2016, 9:25 [IST]
English summary
Aston Martin Showcases James Bond’s Favorite Car In India — Launch Imminent
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+