2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿ, ಅತಿ ನೂತನ 2016 ಆಡಿ ಎ4 ಲಗ್ಷುರಿ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಐದನೇ ತಲೆಮಾರಿನ ಆಡಿ ಎ4 ಕಾರು, 30 ಟಿಎಫ್ ಎಸ್ ಐ ಪೆಟ್ರೋಲ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪ್ರೀಮಿಯಂ ಪ್ಲಸ್ ಗ್ರೇಡ್: 38.1 ಲಕ್ಷ ರು.
ಟೆಕ್ನಾಲಜಿ ಗ್ರೇಡ್: 41.20 ಲಕ್ಷ ರು.

ಹಿಂದಿನ ಮಾದರಿಗಿಂತಲೂ ಶೇಕಡಾ 43ರಷ್ಟು ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಳ್ಳಲಿರುವ ನೂತನ ಆಡಿ ಎ4 ಪ್ರತಿ ಲೀಟರ್ ಗೆ 17.84 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

2016 ಆಡಿ ಎ4 ಕಾರು ಎಲ್ ಎಲ್ ಬಿ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದ್ದು, 120 ಕೆ.ಜಿ.ಗಳಷ್ಟು ಭಾರ ಕಡಿತಗೊಂಡಿದೆ. ಅಲ್ಲದೆ ಹಿಂದಿನ ಮಾದರಿಗೆ ಹೋಲಿಸಿದಾಗ 25 ಎಂಎಂಗಳಷ್ಟು ಹೆಚ್ಚು ಉದ್ದ, 16 ಎಂಎಂಗಳಷ್ಟು ಹೆಚ್ಚು ಅಗಲ ಮತ್ತು 12ಎಂಎಂಗಳಷ್ಟು ಹೆಚ್ಚು ಉದ್ದವಾದ ಚಕ್ರಾಂತರಗಳನ್ನು ಪಡೆದಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4,726

ಅಗಲ: 1,842

ಎತ್ತರ: 1,427

ಚಕ್ರಾಂತರ: 2,820

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ನೂತನ ಆಡಿ ಎ4 ಟೆಕ್ನಾಲಜಿ ವೆರಿಯಂಟ್, ಎಲ್ ಇಡಿ ಹೆಡ್ ಲೈಟ್, ಎಲ್ ಇಡಿ ಟೈಲ್ ಲ್ಯಾಂಪ್, ಹೆಡ್ಸ್ ಅಪ್ ಡಿಸ್ ಪ್ಲೇ (ಎಚ್ ಯುಡಿ), ವೆರ್ಚ್ಯೂವಲ್ ಕಾಕ್ ಪೀಟ್ ಡಿಸ್ ಪ್ಲೇ, ಪರಿಷ್ಕೃತ ಆಡಿ ಎಂಎಂಐ ಸಿಸ್ಟಂ ಜೊತೆ ಏಳು ಇಂಚುಗಳ ಡಿಸ್ ಪ್ಲೇ ಯುನಿಟ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಪೋರ್ಟ್, 755 ವಾಟ್ ಬ್ಯಾಂಗ್ ಮತ್ತು ಓಲುಫ್ಸೆನ್ ತ್ರಿಡಿ ಆಡಿಯೋ ಸಿಸ್ಟಂ ಜೊತೆ 19 ಸ್ಪೀಕರುಗಳು, ಪಾರ್ಕಿಂಗ್ ಏಡ್ ಪ್ಲಸ್, ಪವರ್ ಹೊಂದಾಣಿಸಬಹುದಾದ ಸೀಟು ಮತ್ತು ಮೂರು ಝೋನ್ ಗಳ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯಿರಲಿದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ನೂತನ ಆಡಿ ಎ4 30 ಟಿಎಫ್ ಎಸ್ ಐ ಮಾದರಿಯು 1.4 ಲೀಟರ್ ಟಿಎಫ್ ಎಸ್ ಐ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 250 ಎನ್ ಎಂ ತಿರುಗುಬಲದಲ್ಲಿ 150 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಏಳು ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆಯೂ ಪ್ರಮುಖ ಆಕರ್ಷಣೆಯಾಗಿದ್ದು, ಪ್ರತಿ ಲೀಟರ್‌ಗೆ 17.85 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ಆಡಿ ಎ4 ಜಾಗತಿಕ ಮಟ್ಟದಲ್ಲೇ ಅತ್ಯಂತ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಈಗ ದೆಹಲಿಯಂತಹ ಪ್ರದೇಶಗಳಲ್ಲಿ ಡೀಸೆಲ್ ಎಂಜಿನ್ ಕಾರುಗಳಿಗೆ ನಿಷೇಧ ಹೇರಿದ್ದರಿಂದ ಪೆಟ್ರೋಲ್ ಆವೃತ್ತಿ ಬಿಡುಗಡೆಯತ್ತ ಆಡಿ ಒಲವು ತೋರಿರುವುದು ಕಂಡುಬಂದಿದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ನೂತನ ಆಡಿ ಎ4 ಕಾರು ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ಬಿಎಂಡಬ್ಲ್ಯು 3 ಸಿರೀಸ್ ಮತ್ತು ವೋಲ್ವೋ ಎಸ್60 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ಆಡಿ ಎ4 ಕೇವಲ 8.5 ಸಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 210 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

2016 ಆಡಿ ಎ4 30 ಟಿಎಫ್‌ಎಸ್ಐ ಲಗ್ಷುರಿ ಸೆಡಾನ್ ಕಾರು ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಂಟು ಏರ್ ಬ್ಯಾಗ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಪಾರ್ಕಿಂಗ್ ಕ್ಯಾಮೆರಾ ಜೊತೆ ಎಬಿಎಸ್, ಇಬಿಡಿ ಮುಂತಾದ ಸೌಲಭ್ಯಗಳು ದೊರಕಲಿದೆ.

Article Published On: Thursday, September 8, 2016, 16:18 [IST]
English summary
Audi A4 Launched In India; Prices Start At Rs. 38.1 Lakh
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+