ಜಿನೆವಾ ಮೋಟಾರು ಶೋದಲ್ಲಿ ಆಡಿ ಕ್ಯೂ2 ಮಿನಿ ಎಸ್‌ಯುವಿ ಎಂಟ್ರಿ

Written By:

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಆಡಿ, ಮುಂಬರುವ 2016 ಜಿನೆವಾ ಮೋಟಾರು ಶೋದಲ್ಲಿ ಅತಿ ನೂತನ ಕ್ಯೂ2 ಮಿನಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ತದಾ ಬಳಿಕ ಪ್ರಸಕ್ತ ಸಾಲಿನಲ್ಲೇ ನೂತನ ಆಡಿ ಕ್ಯೂ2 ಮಾರುಕಟ್ಟೆಯನ್ನು ತಲುಪಲಿದೆ. ನಿಮ್ಮ ಮಾಹಿತಿಗಾಗಿ, ನೂತನ ಆಡಿ ಕಾರು ಎಂಟ್ರಿ ಲೆವೆಲ್ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಆಡಿ ಕ್ಯೂ2

ಬೆಲೆಯ ವಿಚಾರದಲ್ಲಿ ಈ ಕಾರು ಆಡಿ ಕ್ಯೂ3 ಕೆಳಗಡೆ ಗುರುತಿಸಿಕೊಳ್ಳಲಿದೆ. ಈ ಮೂಲಕ ಮಿನಿ ಎಸ್‌ಯುವಿ ವಿಭಾಗದಲ್ಲೂ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಫೋಕ್ಸ್‌ವ್ಯಾಗನ್‌ ಎಂಕ್ಯೂಬಿ ಫ್ಲ್ಯಾರ್ಟ್‌ಫಾರ್ಮ್ ಹಂಚಿಕೊಳ್ಳಲಿರುವ ನೂತನ ಆಡಿ ಕ್ಯೂ2 ನಿರ್ಮಾಣವಾಗಲಿದೆ. ಅಲ್ಲದೆ ಕಾರಿನಡಿಯಲ್ಲಿ ಫೋರ್ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ಕಂಡುಬರಲಿದೆ. ಅಂತೆಯೇ ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಇವೆಲ್ಲದರ ಹೊರತಾಗಿ ಆಡಿಯ ಜನಪ್ರಿಯ ಆಲ್ ವೀಲ್ ಡ್ರೈವ್ ಕ್ವಾಟ್ರೊ ಸಿಸ್ಟಂ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಿರುವ ಆಡಿ ಮಾದರಿಗಳಿಂದ ಸ್ಪೂರ್ತಿ ಪಡೆದುಕೊಂಡು ಇದರ ವಿನ್ಯಾಸ ರಚಿಸಲಾಗುತ್ತಿದೆ. ಹಾಗಿದ್ದರೂ ಭಾರತಕ್ಕೂ ಆಡಿ ತನ್ನ ನೂತನ ಕಾರನ್ನು ತರಲಿದೆಯೇ ಎಂಬುದು ತಿಳಿದು ಬಂದಿಲ್ಲ.

Read more on ಆಡಿ audi
English summary
Audi Q2 Mini SUV To Debut At 2016 Geneva Motor Show
Story first published: Saturday, January 2, 2016, 15:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark