ಗಂಟೆಗೆ ಐದು ಸಾವಿರ; ಆಡಿ ಆರ್8 ವಿ10 ಪ್ಲಸ್ ಬಾಡಿಗೆಗೆ

By Nagaraja

ಎರಡು ಸೀಟುಗಳ ಫೋರ್ ವೀಲ್ ಚಾಲನಾ ವ್ಯವಸ್ಥೆ ಹೊಂದಿರುವ ಶಕ್ತಿಶಾಲಿ ಸೂಪರ್ ಕಾರು ಓಡಿಸುವ ಆಸೆ ನಿಮಗಿದೆಯೇ? ಹಾಗಿದ್ದರೆ ಇನ್ನು ತಡ ಮಾಡಬೇಡಿ.

ಒಂದು ತಾಸಿಗೆ 5,000 ರುಪಾಯಿಗಳನ್ನು ಖರ್ಚು ಮಾಡುವಷ್ಟು ಆರ್ಥಿಕ ಸ್ಥಿತಿ ನಿಮ್ಮದಾಗಿದ್ದಲ್ಲಿ ಈ ಕೂಡಲೇ ಆಡಿ ಆರ್8 ವಿ10 ಪ್ಲಸ್ ಕಾರನ್ನು ಬಾಡಿಗೆಗೆ ಪಡೆದುಕೊಳ್ಳಿರಿ.

ಆಡಿ ಆರ್8 ವಿ10 ಪ್ಲಸ್

ಸೆಲ್ಪ್ ಡ್ರೈವಿಂಗ್ ಗಾಗಿ ವಾಹನಗಳನ್ನು ನೀಡುವ ಇಕೊ ರೆಂಟ್ ಎಂಬ ಸಂಸ್ಥೆಯು ಇಂತಹದೊಂದು ವಿನೂತನ ಆಫರ್ ಮುಂದಿಡುತ್ತಿದೆ.

ವಿಶಿಷ್ಟ ನೀಲಿ ಬಣ್ಣದಿಂದ ಕಂಗೊಳಿಸುವ ಆಡಿ ಆ8 ವಿ10 ಕಾರನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದಕ್ಕಾಗಿ ಗಂಟೆಗೆ 5000 ರು.ಗಳನ್ನು ಖರ್ಚು ಮಾಡಬೇಕಾಗುತ್ತದೆ.


ಇಲ್ಲಿ ಮೊದಲ 10 ಕೀ.ಮೀ.ಗಳ ಉಚಿತ ಪಯಣದ ಬಳಿಕ ಪ್ರತಿ ತಾಸಿಗೂ ಹೆಚ್ಚುವರಿ 300 ರುಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಕಾರು ಬಾಡಿಗೆಗೆ ಪಡೆಯುವ ಮುನ್ನ ಸಂಸ್ಥೆ ಮುಂದಿಡುವ ಷರತ್ತುಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಕೋಟಿ ಗಟ್ಟಲೆ ದುಬಾರಿ ಕಾರನ್ನು ಓಡಿಸುವ ಮೊದಲು ಹಿಂಪಾವತಿ ಮಾಡಬಹುದಾದ ಎರಡು ಲಕ್ಷ ರುಪಾಯಿಗಳನ್ನು ಮುಂಗಡ ಪಾವತಿಸಬೇಕಾಗುತ್ತದೆ.

ಭಾರತೀಯ ಐಷಾರಾಮಿ ಕಾರು ಮಾರುಕಟ್ಟೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, 2015-18ರ ಅವಧಿಯಲ್ಲಿ ಶೇಕಡಾ 15ರಷ್ಟು ಏರುಗತಿ ಸಾಧಿಸುವ ನಿರೀಕ್ಷೆಯಿದೆ. ಇದು ಕಾರು ಬಾಡಿಗೆ ಸಂಸ್ಥೆಗಳನ್ನು ಆಕರ್ಷಿಸುವಂತೆ ಮಾಡಿದೆ.

ದೇಶದ ಒಂಬತ್ತು ನಗರಗಳಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿರುವ ಇಕೊ ರೆಂಟ್, ತಮ್ಮ ಗರಡಿಯಲ್ಲಿ 2,500ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಇರಿಸಿಕೊಂಡಿದೆ. ಇನ್ಯಾಕೆ ತಡ ಒಮ್ಮೆ ಆಡಿ ಆರ್8 ವಿ10 ಪ್ಲಸ್ ರೈಡಿಂಗ್ ಮಾಡಿ ನೋಡಿ ಬಿಡಿ.

More from DriveSpark

Article Published On: Thursday, January 21, 2016, 9:33 [IST]
English summary
Now You Can Rent An Audi R8 V10 Plus At Rs. 5000 An Hour
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+