ಆಡಿ ಸೂಪರ್ ಕಾರಲ್ಲಿ ಕೊಹ್ಲಿ, ಮುದ್ದು ಬೆಡಗಿ ಆಲಿಯಾ ಚೆಲ್ಲಾಟ!

By Nagaraja

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಆಕ್ರಮಣಕಾರಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್‌ನ ಮುದ್ದು ಬೆಡಗಿ ಆಲಿಯಾ ಭಟ್ ಸಾನಿಧ್ಯದಲ್ಲಿ ದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಆಡಿ ಶಕ್ತಿಶಾಲಿ ಆರ್8 ವಿ10 ಪ್ಲಸ್ ಸೂಪರ್ ಕಾರು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಆಗಲೇ ಭಾರತೀಯ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಆಡಿ ನೂತನ ಸೂಪರ್ ಕಾರಿನೊಂದಿಗೆ ತನ್ನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಬೆಲೆ 2.47 ಕೋಟಿ ರು.ಗಳಾಗಿರಲಿದೆ.

ಆಡಿ ಆರ್8 ವಿ10 ಪ್ಲಸ್


ಎಂಜಿನ್ ತಾಂತ್ರಿಕತೆ
5.2 ಲೀಟರ್ ವಿ10
602 ಅಶ್ವಶಕ್ತಿ (8250 ಆರ್‌ಪಿಎಂ)
560 ಎನ್‌ಎಂ ತಿರುಗುಬಲ (6500 ಆರ್‌ಪಿಎಂ)

ವೇಗವರ್ಧನೆ
3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 330 ಕೀ.ಮೀ.

ಕ್ವಾಟ್ರೊ ಆಲ್ ವೀಲ್ ಚಾಲನಾ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನೆಯಾಗಲಿದೆ. ಅಲ್ಲದೆ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದೆ.

ಶೈಲಿ
ನಿಖರವಾದ ಹಾಗೂ ಕಣ್ಮಣ ಸೆಳೆಯುವ ವಿನ್ಯಾಸವು ಆಡಿಗೆ ವರದಾನವಾಗಿದೆ. ಮುಂಭಾಗದಲ್ಲಿ ಪರಿಷ್ಕೃತ ಆಕ್ರಮಣಕಾರಿ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ ಹಾಗೂ ಸಂಸ್ಥೆಯ ವಿಶಿಷ್ಟ ಲೇಸರ್ ಲೈಟ್ ತಂತ್ರಜ್ಞಾನಗಳು ಪ್ರಮುಖ ಆಕರ್ಷಣೆಯಾಗಲಿದೆ.

ಇನ್ನು ಹಿಂಭಾಗದಲ್ಲೂ ಕ್ರೀಡಾ ಕಾರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಏರೋಡೈನಾಮಿಕ್ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್ ಮುಂತಾದ ಸೌಲಭ್ಯಗಳಿರಲಿದೆ.

ಲಭ್ಯತೆ, ಪ್ರತಿಸ್ಪರ್ಧಿಗಳು
ಆಸಕ್ತರು ಆಡಿ ಅಧಿಕೃತ ಡೀಲರ್ ಶಿಪ್ ಗಳನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಎಸ್, ಪೋರ್ಷೆ 911 ಟರ್ಬೊ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ನಿಸ್ಸಾನ್ ಜಿಟಿಆರ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

More from DriveSpark

Article Published On: Friday, February 12, 2016, 10:07 [IST]
English summary
Ballistic Audi R8 V10 Plus Roars Into India With Virat Kohli At The Wheel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+