ಭಾರತಕ್ಕೆ ಕಾಲಿರಿಸಿದ ಷೆವರ್ಲೆ ಕಾರ್ವೆಟ್ ಸ್ಟ್ರೀಂಗ್ರೇ ಚೆಲುವೆ

By Nagaraja

ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋದಲ್ಲಿ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ಏಳನೇ ಪೀಳಿಗೆಯ ಕಾರ್ವೆಟ್ ಸ್ಟ್ರೀಂಗ್ರೇ (Corvette Stingray) ಕ್ರೀಡಾ ಕಾರನ್ನು ಅನಾವರಣಗೊಳಿಸಿದೆ.

ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ ಷೆವರ್ಲೆ ಕಾರ್ವೆಟ್ ಸ್ಟ್ರೀಂಗ್ರೇ ಚೆಲುವೆಯ ಪ್ರವೇಶವು ಅದ್ದೂರಿಯಾಗಿ ಜರಗಿತ್ತು. ಇದು ಯಾವಾಗ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದಕ್ಕೆ ಮಾಹಿತಿಗಳು ಲಭ್ಯವಾಗಿಲ್ಲ.

ಷೆವರ್ಲೆ ಕಾರ್ವೆಟ್ ಸ್ಟ್ರೀಂಗ್ರೇ


ಎಂಜಿನ್ ತಾಂತ್ರಿಕತೆ
6.2 ಲೀಟರ್ ವಿ8
460 ಅಶ್ವಶಕ್ತಿ (6000 ಆರ್‌ಪಿಎಂ)
624 ಎನ್‌ಎಂ ತಿರುಗುಬಲ (4600 ಆರ್‌ಪಿಎಂ)

3.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ
ಗಂಟೆಗೆ ಗರಿಷ್ಠ 291 ಕೀ.ಮೀ. ವೇಗ

ಗೇರ್ ಬಾಕ್ಸ್: 7 ಸ್ಪೀಡ್ ಮ್ಯಾನುವಲ್ ಮತ್ತು 8 ಸ್ಪೀಡ್ ಆಟೋಮ್ಯಾಟಿಕ್.

ಶೈಲಿ
ಕ್ರೀಡಾ ಕಾರಿಗೆ ತಕ್ಕಂತೆ ಚಪ್ಪಟೆ ಆಕಾರದ ಏರೋಡೈನಾಮಿಕ್ ವಿನ್ಯಾಸವನ್ನು ಷೆವರ್ಲೆ ಕಾರ್ವೆಟ್ ಪಡೆದುಕೊಂಡಿದೆ. ಇದು ಮುಂದುಗಡೆ ದೊಡ್ಡದಾದ ಫ್ರಂಟ್ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಗಳನ್ನು ಪಡೆದಿರುತ್ತದೆ.

ಕಾರ್ಬನ್ ಫೈಬರ್ ದೇಹ ರಚನೆಯು ಭಾರತ ಕಡಿತ ಮಾಡಲು ಸಹಕಾರಿಯಾಗಲಿದ್ದು, ಗರಿಷ್ಠ ಇಂಧನ ಕ್ಷಮತೆಯನ್ನು ನೀಡಲು ಈ ಸೂಪರ್ ಕಾರಿಗೆ ನೆರವಾಗಲಿದೆ.

ಇನ್ನುಳಿದಂತೆ ಕಾರಿನೊಳಗೆ 8 ಇಂಚುಗಳ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಗುರ ಭಾರತದ ಪರಿಕರಗಳು, ಮೈಲಿಂಕ್ ಇನ್ಪೋಟೈನ್ಮೆಂಟ್ ಸಿಸ್ಟಂ ಮುಂತಾದ ವ್ಯವಸ್ಥೆಗಳಿರಲಿದೆ.

ಪ್ರತಿಸ್ಪರ್ಧಿಗಳು
ಅಷ್ಟಕ್ಕೂ ಇನ್ನಷ್ಟೇ ಬಿಡುಗಡೆಯಾಗಲಿರುವ ನಿಸ್ಸಾನ್ ಜಿಟಿಆರ್ ಮತ್ತು ಪೋರ್ಷೆ 911 ಶ್ರೇಣಿಯ ವಾಹನಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಷೆವರ್ಲೆ ಕಾರ್ವೆಟ್ ಭಾರತದಲ್ಲಿ ಬಿಡುಗಡೆಯಾದಲ್ಲಿ ಯಶಸ್ವಿಯಾದಿತೇ ಎಂಬುದನ್ನು ಕಾದು ನೋಡಬೇಕಿದೆ.

More from DriveSpark

Article Published On: Saturday, February 13, 2016, 17:24 [IST]
English summary
Auto Expo 2016: Chevrolet Corvette Stingray Growls its Way Into India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+