ಪ್ರತಿಷ್ಠಿತ 2016 ಆಟೋ ಎಕ್ಸ್ ಪೋಗೆ ಸಜ್ಜಾದ ವಾಹನ ಲೋಕ
ಭಾರತದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋ ಬರ ಮಾಡಿಕೊಳ್ಳಲು ದೇಶದೆಲ್ಲ ಸಂಸ್ಥೆಗಳು ಸಜ್ಜಾಗಿ ನಿಂತಿದೆ.
2016ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 23 ಕಾರುಗಳು
ವಾಹನ ಲೋಕದಲ್ಲಿ ಹೊಸ ಹೊಸ ಕಾನೆಪ್ಟ್ ಗಳ ಪ್ರದರ್ಶನಕ್ಕೆ ಮಗದೊಂದು ವೇದಿಕೆ ಸಿದ್ಧಗೊಂಡಿದೆ. ಮುಂದಿನ ತಿಂಗಳು 2016 ಫೆಬ್ರವರಿ 03ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದ ಕ್ಷಣ ಕ್ಷಣದ ಮಾಹಿತಿಗಳನ್ನು ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡಲಿದೆ. ಪ್ರಸ್ತುತ ಲೇಖನದಲ್ಲಿ 2016 ಆಟೋ ಎಕ್ಸ್ ಪೋದಲ್ಲಿ ಗಮನ ಸೆಳೆಯಲಿರುವ ಕೆಲವು ವಾಹನಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ನೂತನ ವಿಟಾರಾ ಬ್ರೆಝಾದೊಂದಿಗೆ 2016 ಆಟೋ ಎಕ್ಸ್ ಪೋವನ್ನು ಬರ ಮಾಡಿಕೊಳ್ಳಲಿದೆ. ಇದರೊಂದಿಗೆ ಆಲ್ಟೊ 800 ಡೀಸೆಲ್ ಮಾದರಿಯನ್ನು ನಿರೀಕ್ಷೆ ಮಾಡಬಹುದಾಗಿದೆ. ಇವೆಲ್ಲದರ ಹೊರತಾಗಿ ಅತಿ ನೂತನ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರಿನ ಪ್ರದರ್ಶನವೂ ಇರಲಿದೆ.

ಫೋರ್ಡ್
ಕಳೆದ ಕೆಲವು ಸಮಯಗಳಿಂದ ಭಾರಿ ಚರ್ಚೆಯಾಗಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯ ಐಕಾನಿಕ್ ಮಸ್ಟಾಂಗ್ ಭಾರತಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದೆ. ಇದು 5 ಲೀಟರ್ ವಿ8 ಅಥವಾ 2.3 ಲೀಟರ್ ಇಕೊಬೂಸ್ಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಹೋಂಡಾ
ಜಪಾನ್ ಮೂಲದ ಹೋಂಡಾ ಸಂಸ್ಥೆಯು ಅಕಾರ್ಡ್ ಕಾರನ್ನು ಮಗದೊಮ್ಮೆ ದೇಶಕ್ಕೆ ಪರಿಚಯಿಸುವ ಸಾಧ್ಯತೆಯಿದೆ. ಇದಕ್ಕೂ ಮಿಗಿಲಾಗಿ ಎಲ್ಲರೂ ಕಾತರದಿಂದ ಕಾಯುತ್ತಿರುವ ಹೋಂಡಾ ಬಿಆರ್ ವಿ ಪ್ರವೇಶವೂ ಇದೇ ಆಟೋ ಎಕ್ಸ್ ಪೋದಲ್ಲಿ ನಡೆಯಲಿದೆ. ಇನ್ನುಳಿದಂತೆ ಹೋಂಡಾ ಜಾಝ್ ಹೆಚ್ಚು ಶಕ್ತಿಶಾಲಿ ಆರ್‌ಎಸ್ ಮಾದರಿಯೂ ಪರಿಚಯವಾಗಲಿದೆ.

ದಟ್ಸನ್
ರೆನೊ ಕ್ವಿಡ್ ಅದೇ ತಳಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ರೆಡಿ ಗೊ ಸಣ್ಣ ಕಾರು ಸಹ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ರೆನೊ
ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ತನ್ನ ಜನಪ್ರಿಯ ಕ್ವಿಡ್ ಕಾರಿನ ಎಎಂಟಿ ಹಾಗೂ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಮಾದರಿಯನ್ನು ಪರಿಚಯಿಸಲಿದೆ. ಅದೇ ಹೊತ್ತಿಗೆ ಪರಿಷ್ಕೃತ ಡಸ್ಟರ್ ಆಗಮನಕ್ಕೂ ಈ ಆಟೋ ಶೋ ವೇದಿಕೆಯಾಗಲಿದೆ.

ಬೆನೆಲ್ಲಿ
ಇಟಲಿಯ ಐಕಾನಿಕ್ ಬೆನೆಲ್ಲಿ ಸಂಸ್ಥೆಯು ತನ್ನೆಲ್ಲ ಶ್ರೇಣಿಯ ಮೋಟಾರುಸೈಕಲ್ ಗಳನ್ನು ಅನಾವರಣಗೊಳಿಸುವ ಇರಾದೆಯಲ್ಲಿದೆ. ಈ ಪ್ರಯತ್ನಕ್ಕಾಗಿ ಬೆನೆಲ್ಲಿ ಸಂಸ್ಥೆಗೆ ಶುಭ ಹಾರೈಸೋಣವೇ!

ಟ್ರಯಂಪ್
ಬ್ರಿಟನ್‌ನ ವಿಶ್ವ ಪ್ರಸಿದ್ಧ ದ್ವಿಚಕ್ರ ಸಂಸ್ಥೆ ಟ್ರಯಂಪ್ ಸಾಹ ತನ್ನೆಲ್ಲ ಶ್ರೇಣಿಯ ಮೋಟಾರ್‌ಸೈಕಲ್ ಗಳನ್ನು ಇದೇ ವಾಹನ ಮೇಳದಲ್ಲಿ ಪ್ರದರ್ಶನಕ್ಕಿರಿಸಲಿದೆ.

ಯುಎಂ ಮೋಟಾರ್‌ಸೈಕಲ್ಸ್
ಭಾರತಕ್ಕೆ ಹೆಚ್ಚಿನ ನಿರೀಕ್ಷೆಯೊಂದಿಗೆ ಕಾಲಿಡಲಿರುವ ಯುಎಂ ಮೋಟಾರ್‌ಸೈಕಲ್ಸ್, 2016 ಆಟೋ ಎಕ್ಸ್ ಪೋದಲ್ಲಿ ಮೋಡಿ ಮಾಡುವ ಇರಾದೆಯಲ್ಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಬಿಡುಗಡೆ


Click it and Unblock the Notifications








