ಜಾಗ್ವಾರ್ ಎಫ್ ಪೇಸ್ ಶಕ್ತಿಶಾಲಿ ಎಸ್‌ಯುವಿ ಶಕ್ತಿ ಪ್ರದರ್ಶನ

By Nagaraja

ಬಾಲಿವುಡ್ ನಾಯಕಿ ಕತ್ರಿನಾ ಕೈಫ್ ಮುಂದಾಳತ್ವದಲ್ಲಿ ಜಾಗ್ವಾರ್ ಎಕ್ಸ್‌ಇ ಐಷಾರಾಮಿ ಸೆಡಾನ್ ಕಾರು ಅನಾವರಣಗೊಂಡಿರುವ ಬೆನ್ನಲ್ಲೇ 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಶಕ್ತಿಶಾಲಿ ಜಾಗ್ವಾರ್ ಕಾರು ಶಕ್ತಿ ಪ್ರದರ್ಶನ ನಡೆಸಿದೆ.

ಇಡೀ ದೇಶದ ವಾಹನ ಪ್ರೇಮಿಗಳಲ್ಲಿ ಅತಿ ಹೆಚ್ಚು ಪ್ರಭಾವ ಬೀರಿರುವ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಜಾಗ್ವಾರ್ ಎಫ್-ಪೇಸ್ ಕ್ರೀಡಾ ಬಳಕೆಯ ವಾಹನವು ಪಾದಾರ್ಪಣೆಗೈದಿದೆ. ಇದು ಮೊದಲನೇ ಬಾರಿಗೆ ದೇಶಕ್ಕೆ ಎಂಟ್ರಿ ಕೊಡುತ್ತಿರುವುದು ಗಮನಾರ್ಹ.

ಜಾಗ್ವಾರ್ ಎಫ್ ಪೇಸ್


ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿರುವ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಅತಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ನ ಈ ಐಕಾನಿಕ್ ಕಾರು ಸಂಸ್ಥೆಯು ಲ್ಯಾಂಡ್ ರೋವರ್ ಬದಲಾಗಿ ಜಾಗ್ವಾರ್ ಎಫ್-ಪೇಸ್ ಕ್ರೀಡಾ ಬಳಕೆಯ ವಾಹನವನ್ನು ದೇಶಕ್ಕೆ ಪರಿಚಯಿಸಿದೆ.

ನಿಮ್ಮ ಮಾಹಿತಿಗಾಗಿ, ಜಾಗ್ವಾರ್ ಎಕ್ಸ್ ಇ ತಳಹದಿಯಲ್ಲೇ ನಿರ್ಮಾಣವಾಗಿರುವ ಎಫ್-ಪೇಸ್, ಅಲ್ಯೂಮಿನಿಯಂ ಪರಿಕರಗಳನ್ನು ಪಡೆದಿದ್ದು, ಭಾರ ಕಡಿತದೊಂದಿಗೆ ಹೆಚ್ಚಿನ ನಿರ್ವಹಣೆ ಕಾಪಾಡಿಕೊಳ್ಳಲಿದೆ.

ಎಂಜಿನ್ ತಾಂತ್ರಿಕತೆ

2.0 ಲೀಟರ್ ಡೀಸೆಲ್
180 ಅಶ್ವಶಕ್ತಿ,
ಮ್ಯಾನುವಲ್ ಗೇರ್ ಬಾಕ್ಸ್ - ರಿಯರ್ ವೀಲ್ ಡ್ರೈವ್
ಆಟೋಮ್ಯಾಟಿಕ್ ಗೇರ್ ಬಾಕ್ಸ್ - ಆಲ್ ವೀಲ್ ಡ್ರೈವ್

2.0 ಲೀಟರ್
240 ಅಶ್ವಶಕ್ತಿ
ರಿಯರ್ ವೀಲ್ ಡ್ರೈವ್

3.0 ಲೀಟರ್ ಪೆಟ್ರೋಲ್
340 ಹಾಗೂ 380 ಅಶ್ವಶಕ್ತಿ
ಆಟೋಮ್ಯಾಟಿಕ್ ಆಲ್ ವೀಲ್ ಡ್ರೈವ್

3.0 ಲೀಟರ್ ಡೀಸೆಲ್
300 ಅಶ್ವಶಕ್ತಿ
ಆಲ್ ವೀಲ್ ಡ್ರೈವ್

ವೇಗವರ್ಧನೆ
5.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 250 ಕೀ.ಮೀ.

ಭಾರತದಲ್ಲಿ ಜಾಗ್ವಾರ್ ಎಫ್-ಪೇಸ್ ಒಂದು ಕೋಟಿ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದ್ದು, ರೇಂಜ್ ರೋವರ್ ಇವೋಕ್, ಬಿಎಂಡಬ್ಲ್ಯು ಎಕ್ಸ್6 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕೂಪೆ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Wednesday, February 17, 2016, 11:16 [IST]
English summary
Jaguar F-Pace SUV unveiled at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+