ಕಣ್ಮಣ ಸೆಳೆದ ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೊ ಪ್ರೀಮಿಯಂ ಹ್ಯಾಟ್ ಬ್ಯಾಕ್ ಕಾರಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ.
ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆ ದಿನಾಂಕ ನಿಗದಿಯಾಗಿರುವ ಬಲೆನೊ ಆರ್‌ಎಸ್ ನಿರ್ವಹಣಾ ಕಾರು 1.0 ಲೀಟರ್ ಬೂಸ್ಟರ್ ಜೆಟ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು ಟಾಪ್ ಎಂಡ್ ಆಲ್ಪಾ ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

ಒಮ್ಮೆ ಬಿಡುಗಡೆಯಾದಾಗ ಬಲೆನೊ ಆರ್‌ಎಸ್ ಮಾದರಿಯು 100ಕ್ಕಿಂತಲೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸುವ ಕಾರುಗಳ ಸಾಲಿನಲ್ಲಿ ಸೇರಿಕೊಳ್ಳಲಿದೆ. ಪ್ರಸ್ತುತ ಈ ವಿಭಾಗದಲ್ಲಿ ಫಿಯೆಟ್ ಅಬಾರ್ತ್ ಪುಂಟೊ, ಫೋರ್ಡ್ ಫಿಗೊ 1.5 ಮತ್ತು ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಕಾರುಗಳಿವೆ. ಅಂದ ಹಾಗೆ ನೂತನ ಬಲೆನೊ ಆರ್‌ಎಸ್ 175 ಎನ್‌ಎಂ ತಿರುಗುಬಲದಲ್ಲಿ 112 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.
ಶೈಲಿ, ವಿಶಿಷ್ಟತೆ
ನೂತನ ಬಲೆನೊ ಆರ್‌ಎಸ್ ಕಾರಿನಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಅಲ್ಲದೆ ಕಾರಿನೊಳಗೂ ಗಮನಾರ್ಹ ಬದಲಾವಣೆಗಳನ್ನು ತರಲಾಗಿದ್ದು, ಕಪ್ಪು ವರ್ಣದ ಇಂಟಿರಿಯರ್, ಕ್ರೀಡಾತ್ಮಕ ಸೀಟು ಹಾಗೂ ಹೋದಿಕೆಗಳು ಕಂಡುಬರಲಿದೆ. ಇನ್ನು ಸೆಂಟ್ರಲ್ ಕನ್ಸಾಲ್ ನಲ್ಲಿ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ ಹಾಗೂ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಇದರಲ್ಲಿರಲಿದೆ.


Click it and Unblock the Notifications




























