ಮರ್ಸಿಡಿಸ್ ಐಷಾರಾಮಿ ಜಿಎಲ್‌ಸಿ ಎಸ್‌ಯುವಿ ಅನಾವರಣ
2016 ಆಟೋ ಎಕ್ಸ್ ಪೋದಲ್ಲಿ ಜರ್ಮನಿಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್ ಅತಿ ನೂತನ ಜಿಎಲ್‌ಸಿ 300 4 ಮ್ಯಾಟಿಕ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಅನಾವರಣಗೊಳಿಸಿದೆ.
ಕಳೆದ ಸಾಲಿನಲ್ಲಷ್ಟೇ ಜಾಗತಿಕ ಅನಾವರಣ ಕಂಡಿರುವ ಜಿಎಲ್ ಸಿ 300 4 ಮ್ಯಾಟಿಕ್ ಎಸ್ ಯುವಿ ಭಾರತ ಪ್ರವೇಶಿಸಿದಾಗ 40 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ತಲುಪಲಿದೆ.

ಪರ್ಮನೆಂಟ್ ಆಲ್ ವೀಲ್ ಚಾಲನಾ ವ್ಯಸ್ಥೆಯಾಗಿರುವ 4 ಮ್ಯಾಟಿಕ್ ಹೊಂದಿರುವ ನೂತನ ಬೆಂಝ್ ಜಿಎಲ್‌ಸಿ ಎಸ್ ಯುವಿ ಕಾರು ಪ್ರಮುಖವಾಗಿಯೂ ಆಡಿ ಕ್ಯೂ5, ಬಿಎಂಡಬ್ಲ್ಯು ಎಕ್ಸ್3 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.
ಎಂಜಿನ್ ತಾಂತ್ರಿಕತೆ
2.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ (ಜಿಎಲ್ ಎಲ್ ಸಿ 300 4 ಮ್ಯಾಟಿಕ್),
240 ಅಶ್ವಶಕ್ತಿ (5500 ಆರ್‌ಪಿಎಂ)
370 ಎನ್‌ಎಂ ತಿರುಗುಬಲ (1300 ಆರ್‌ಪಿಎಂ)
ಮೈಲೇಜ್: 10.2 ಕೀ.ಮೀ.
ಗೇರ್ ಬಾಕ್ಸ್: 9 ಸ್ಪೀಡ್
ಶೈಲಿ
ಮರ್ಸಿಡಿಸ್ ಸಿ ಕ್ಲಾಸ್ ನಿಂದ ಕೆಲವು ವಿನ್ಯಾಸ ತಂತ್ರಗಾರಿಕೆಗಳನ್ನು ಜಿಎಲ್ ಸಿ ಕಾರಿಗಾಗಿ ಆಮದು ಮಾಡಲಾಗಿದೆ. ಇದು ನಿಖರವಾದ ಹೆಡ್ ಲೈಟ್ ಮತ್ತು ಹಿಂದುಗಡೆ ಟೈಲ್ ಲ್ಯಾಂಪ್ ಪಡೆದಿದೆ.
ಮುಂದುಗಡೆ ಡೇಟೈಮ್ ರನ್ನಿಂಗ್ ಎಲ್ ಇಡಿ ಬೆಳಕಿನ ಸೇವೆಯೂ ಇರಲಿದೆ. ಅಂತೆಯೇ ಟೈಲ್ ಲೈಟಿಗೂ ಎಲ್ ಇಡಿ ಲೈಟ್ಸ್ ಜೋಡಣೆ ಮಾಡಾಲಿಗಿದೆ. ಕಾರಿನೊಳಗೆ ದೊಡ್ಡದಾದ ಮಾಹಿತಿ ಮನರಂಜನಾ ವ್ಯವಸ್ಥೆಯು ನೀವು ಕಾಣಬಹುದಾಗಿದೆ. ಅತ್ತ ಸುರಕ್ಷೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್ ಮತ್ತು ಏರ್ ಬ್ಯಾಗ್ ಗಳಿರಲಿದೆ.
ಪ್ರತಿಸ್ಪರ್ಧಿಗಳು
ಬಿಎಂಡಬ್ಲ್ಯು ಎಕ್ಸ್3,
ಆಡಿ ಕ್ಯೂ5


Click it and Unblock the Notifications


























