ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

By Nagaraja

ಅತ್ಯಂತ ಶಕ್ತಿಶಾಲಿ ಜಿಟಿಆರ್ ಸೂಪರ್ ಕಾರನ್ನು ಪ್ರದರ್ಶನಗೊಳಿಸಿರುವ ಜಪಾನ್ ಮೂಲದ ನಿಸ್ಸಾನ್, 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಆಕರ್ಷಕ ಕಾರನ್ನು ಅನಾವರಣಗೊಳಿಸಿದೆ. ಅದುವೇ,

ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್‌ಯುವಿ.
*2016 ಆಟೋ ಎಕ್ಸ್ ಪೋ ವಿಶೇಷ ಪುಟಕ್ಕೆ ಇಲ್ಲಿ ಭೇಟಿ ಕೊಡುತ್ತಿರಿ

ಭಾರತ ವಾಹನ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್‌ಯುವಿ) ಹೆಚ್ಚುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ನಿಸ್ಸಾನ್ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ನಿಯಂತ್ರಿತ ಕಾರು ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಈ ಹಿಂದೆ ನಿಸ್ಸಾನ್ ಎಕ್ಸ್ ಟ್ರೈಲ್ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತ ಪ್ರವೇಶಿಸಿದರೂ ಅಷ್ಟೇನೂ ಯಶ ಸಾಧಿಸಿರಲಿಲ್ಲ. ಇದರಿಂದಾಗಿ ದೇಶದಲ್ಲಿ ಎಕ್ಸ್ ಟ್ರೈಲ್ ಮಾರಾಟವನ್ನು ನಿಸ್ಸಾನ್ ನಿಲುಗಡೆಗೊಳಿಸಿತ್ತು.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಈಗ 2016 ಸಾಲಿನಲ್ಲೇ ಭಾರತಕ್ಕೆ ಭರ್ಜರಿ ಪುನರಾಗಮನದ ನಿರೀಕ್ಷೆಯಲ್ಲಿರುವ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ರೂಪದಲ್ಲಿ ಪರಿಚಯವಾಗುತ್ತಿರುವುದು ಮಾರಾಟ ಉತ್ತೇಜನಕ್ಕೆ ನೆರವಾಗಲಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಪವರ್ ಬಗ್ಗೆ ಮಾತನಾಡುವುದಾದ್ದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಪೆಟ್ರೋಲ್ ಎಂಜಿನ್ 207 ಎನ್‌ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಜೊತೆಗೆ 41 ಅಶ್ವಶಕ್ತಿ (160 ಎನ್‌ಎಂ ತಿರುಗುಬಲ) ಉತ್ಪಾದಿಸಬಲ್ಲ ಎಲೆಕ್ಟ್ರಿಕ್ ಮೋಟಾರು ಸಹ ಜೋಡಣೆ ಮಾಡಲಾಗಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಎಲ್ಲ ಚಕ್ರಗಳಿಗೂ ಸಿವಿಟಿ ಗೇರ್ ಬಾಕ್ಸ್ ಮುಖಾಂತರ ಶಕ್ತಿ ರವಾನೆಯಾಗಲಿದೆ. ಅಲ್ಲದೆ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿರುವುದು ಆಫ್ ರೋಡ್ ಸ್ನೇಹಿಗಳಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ 'ವಿ' ಆಕಾರದ ಫ್ರಂಟ್ ಗ್ರಿಲ್ ಹಾಗೂ ಹನಿಕಾಂಬ್ ಗ್ರಿಲ್ ಇರಲಿದೆ. ಇನ್ನು ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಸಿಂಗಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಫಾಗ್ ಲ್ಯಾಂಪ್ ಗಳಿಗೂ ಕ್ರೋಮ್ ಸ್ಪರ್ಶವನ್ನು ಕೊಡಲಾಗಿದ್ದು, 5 ಟ್ವಿನ್ ಸ್ಪೋಕ್ ಅಲಾಯ್ ಚಕ್ರಗಳು ಇದರಲ್ಲಿರುತ್ತದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಕಾರಿನೊಳಗೆ ಡ್ಯುಯಲ್ ಟೋನ್ ಬದಲಾಗಿ ಸಿಂಗಲ್ ಟೋನ್ ಒಳಮೈಯನ್ನು ಕೊಡಲಾಗಿದೆ. ಅಲ್ಲದೆ ಕ್ಲೈಮೇಟ್ ಕಂಟ್ರೋಲ್, 3 ಸ್ಪೋಕ್ ಸ್ಟೀರಿಂಗ್ ವೀಲ್, ಸೆಮಿ ಅನಲಾಗ್ ಇನ್ಸ್ಟ್ರುಮೆಂಟ್ ಪರದೆ, ಡ್ಯುಯಲ್ ಎಸಿ ವೆಂಟ್ಸ್ ಇತ್ಯಾದಿ ವೈಶಿಷ್ಟ್ಯಗಳು ಪ್ರಮುಖ ಆಕರ್ಷಣೆಯಾಗಲಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಒಟ್ಟಿನಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಪ್ಯೂರ್ ಡ್ರೈವ್ ಹೈಬ್ರಿಡ್ ಕಾರು ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಭಾರತೀಯರಿಗೆ ನೆಚ್ಚಿನ ಆಯ್ಕೆಯಾಗಿರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4640

ಅಗಲ: 1820

ಎತ್ತರ: 1715

ಚಕ್ರಾಂತರ: 2705

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಅಂದ ಹಾಗೆ ನಿಸ್ಸಾನ್‌ನ ಕಾಮನ್ ಮೊಡ್ಯುಲ್ ಫ್ಯಾಮಿಲಿ ತಳಹದಿಯಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್‌ಯುವಿ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತಕ್ಕೆ ನಿಸ್ಸಾನ್ ಕೊಡುಗೆ; ಎಕ್ಸ್‌ಟ್ರೈಲ್ ಹೈಬ್ರಿಡ್ ಎಸ್‌ಯುವಿ

ಭಾರತ ಮಾರುಕಟ್ಟೆಯಲ್ಲಿ ನೂತನ ನಿಸ್ಸಾನ್ ಕಾರು ಪ್ರಮುಖವಾಗಿಯೂ ಹೋಂಡಾ ಸಿಆರ್ ವಿ ಮತ್ತು ಹೈಬ್ರಿಡ್ ಸಾಂಟಾಫೆ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಕೊನೆಯದಾಗಿ ನಿಸ್ಸಾನ್ ಎಕ್ಸ್ ಟ್ರೈಲ್ ಭಾರತದಲ್ಲಿ 30 ಲಕ್ಷ ರು.ಗಳಷ್ಟು ದುಬಾರಿಯೆನಿಸಿಕೊಳ್ಳುವ ಸಾಧ್ಯತೆಯಿದೆ.

More from DriveSpark

Article Published On: Wednesday, February 10, 2016, 9:17 [IST]
English summary
X-Trail Goes Down The Hybrid Path For India Return
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+