ಅಚ್ಚರಿ! 100 ಕೀ.ಮೀ. ಮೈಲೇಜ್ ನೀಡುವ ರೆನೊ ಎಲೊಬ್
ನವದೆಹಲಿಯಲ್ಲಿ ನಡೆಯುತ್ತಿರುವ 13ನೇ ಆಟೋ ಎಕ್ಸ್ ಪೋದಲ್ಲಿ ವಿಶಿಷ್ಟ ಕಾರೊಂದರ ಪ್ರವೇಶವಾಗಿದೆ. ಅದುವೇ ರೆನೊ ಎಲೊಬ್ (Eolab). ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಪರಿಚಯಿಸಿರುವ ಎಲೊಬ್ ಹೈಬ್ರಿಡ್ ಕಾರು ಪ್ರತಿ ಲೀಟರ್ ಗೆ 100 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿರುವ ರೆನೊ ಎಲೊಬ್ ಯಾವಾಗ ನಿರ್ಮಾಣ ಆವೃತ್ತಿ ಪಡೆಯಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಳಗಡೆ ರೆನೊ ಎಲೊಬ್ ಕಾರಿನ ವಿಶಿಷ್ಟತೆಗಳ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ಎಂಜಿನ್ ತಾಂತ್ರಿಕತೆ
1 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ರೆನೊ ಎಲೊಬ್ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದಲ್ಲದೆ ಇದರ ಜೊತೆಗೆ 53 ಅಶ್ವಶಕ್ತಿ ಉತ್ಪಾದಿಸಬಲ್ಲ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.
ಹೇಗೆ ಚಲಿಸುತ್ತದೆ?
ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ರೆನೊ ಎಲೊಬ್ ಮೊದಲ ಹಾಗೂ ಎರಡನೇ ಗೇರ್ ನಲ್ಲಿ ಎಲೆಕ್ಟ್ರಿಕ್ ಮೋಡ್ ನಲ್ಲೂ ವೇಗವಾಗಿ ಚಲಿಸುವಾಗ ಪೆಟ್ರೋಲ್ ಇಂಧನದಲ್ಲೂ ಚಲಿಸುತ್ತದೆ.
ವಿನ್ಯಾಸ, ಭಾರ ಕಡಿತ
ಹಗುರ ಭಾರದ ಬಿಡಿಭಾಗಗಳಿಂದ ರಚಿಸಿರುವ ರೆನೊ ಎಲೊಬ್ ಕಾರಿನಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಇದು ಅತ್ಯುತ್ತಮ ಚಲನಶೀಲತೆ ಕಾಪಾಡಿಕೊಳ್ಳಲು ನೆರವಾಗಲಿದೆ.
995 ಕೆ.ಜಿ ತೂಕವನ್ನಷ್ಟೇ ಹೊಂದಿರುವ ರೆನೊ ಎಲೊಬ್ ನಿರ್ಮಾಣದಲ್ಲಿ ಅಲ್ಯೂಮಿನಿಯಂ ಹಾಗೂ ಸಮ್ಮಿಶ್ರ ಪದಾರ್ಥಗಳ ಮಿಶ್ರಣಗಳನ್ನು ಬಳಕೆ ಮಾಡಲಾಗಿದೆ. ಅಂತೆಯೇ ಕಾರಿನ ಮೇಲ್ಚಾವಣಿಯಲನ್ನು ಮೆಗ್ನೀಸಿಯಮ್ ಮತ್ತು ಫ್ಲೋರನ್ನು ಕಾರ್ಬನ್ ಫೈಬರ್ ನಿಂದ ತಯಾರಿಸಲಾಗಿದೆ.
ಯಾವಾಗ ಎಂಟ್ರಿ?
ಅಷ್ಟಕ್ಕೂ ರೆನೊ ಎಲೊಬ್ ಸದ್ಯಕ್ಕಂತೂ ಮಾರುಕಟ್ಟೆಗೆ ಎಂಟ್ರಿ ಕೊಡುವುದಿಲ್ಲ. ಟೊಯೊಟಾದ ಪ್ರಯಸ್ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿರುವ ರೆನೊ ಎಲೊಬ್ 2022ರ ವೇಳೆಯಲ್ಲಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.


Click it and Unblock the Notifications
























