ಆಟೋ ಎಕ್ಸ್ ಪೋದ ನವ ತಾರೆ ಫೋಕ್ಸ್ ವ್ಯಾಗನ್ ಟೈಗನ್
ಎಮಿಯೊ ಕಾಂಪಾಕ್ಟ್ ಸೆಡಾನ್ ಹಾಗೂ ಶಕ್ತಿಶಾಲಿ ಪಸ್ಸಾಟ್ ಜಿಟಿಇ ಕಾರುಗಳನ್ನು ಪ್ರದರ್ಶಿಸಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯೀಗ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಟೈಗನ್ (Tiguan) ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪರಿಚಯಿಸಿದೆ.
ನಿರ್ಮಾಣ ಗುಣಮಟ್ಟ ಹಾಗೂ ಬ್ರಾಂಡ್ ಮೌಲಕ್ಕೆ ಹೆಚ್ಚು ಹೆಸರುವಾಸಿಯಾಗಿರುವ ಫೋಕ್ಸ್ ವ್ಯಾಗನ್ ಟೈಗನ್ ಮುಂದಿನ ದಿನಗಳಲ್ಲಿ ಭಾರತದ ನವ ತಾರೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕಳೆದ ವರ್ಷ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲೇ ಪಾದಾರ್ಪಣೆಗೈದಿರುವ ನೂತನ ಟೈಗನ್, ಪ್ರಸಕ್ತ ಸಾಲಿನಲ್ಲೇ ದೇಶದ ಮಾರುಕಟ್ಟೆ ಪ್ರವೇಶಿಸಿರುವ ಸಾಧ್ಯತೆಯಿದೆ. ಇದನ್ನು ಸಂಸ್ಥೆಯ ಮೊಡ್ಯೂಲರ್ ಟ್ರಾನ್ಸ್ ವರ್ಸ್ ಮ್ಯಾಟ್ರಿಕ್ (ಎಂಕ್ಯೂಬಿ) ತಳಹದಿಯಲ್ಲಿ ನಿರ್ಮಿಸಲಾಗಿದೆ.
ಎಲ್‌ಇಡಿ ಹೆಡ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ತ್ರಿ ಡಿ ಪ್ರಭಾವದೊಂದಿಗಿನ ಎಲ್‌ಇಡಿ ಟೈಲ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಯಾಗಲಿದೆ. ಇವೆಲ್ಲದಕ್ಕೂ ಮಿಗಿಲಾಗಿ ಟೈಗನ್ ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣವಾಗಲಿದೆಯೆಂಬ ಶುಭ ಸಮಾಚಾರವೂ ಬಂದಿರುವುದು ವಾಹನ ಪ್ರೇಮಿಗಳ ಸಂತಸವನ್ನು ಇಮ್ಮಡಿಗೊಳಿಸುತ್ತದೆ.
ಆಯಾಮ (ಎಂಎಂ)
ಉದ್ದ: 4485
ಅಗಲ: 1839
ಎತ್ತರ: 1633
ಚಕ್ರಾಂತರ: 2682
ಹಳೆಯ ತಲೆಮಾರಿನ ಮಾದರಿಗೆ ಹೋಲಿಸಿದಾಗ ಒಟ್ಟಾರೆ ಭಾರವು 50 ಕೆ.ಜಿಗಳಷ್ಟು ಇಳಿಕೆಗೊಳಿಸಲಾಗಿದ್ದು, ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.
ಇನ್ನುಳಿದಂತೆ 12.3 ಇಂಚುಗಳ ಆಕ್ಟಿವ್ ಇನ್ಪೋ ಡಿಸ್ ಪ್ಲೇ ವ್ಯವಸ್ಥೆಯ ಜೊತೆಗೆ ಪ್ಯಾನರಾಮಿಕ್ ಸನ್ ರೂಫ್ ಮತ್ತು ಹಿಂಬದಿಯಲ್ಲಿ ಬೃಹತ್ತಾದ 615 ಲೀಟರ್ ಗಳ ಢಿಕ್ಕಿ ಜಾಗವಿರಲಿದೆ.
ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್ ಗಳಲ್ಲೂ ಲಭ್ಯವಾಗಲಿರುವ ಫೋಕ್ಸ್ ವ್ಯಾಗನ್ ಟೈಗನ್, ಫೋರ್ ವೀಲ್ ಡ್ರೈವ್ ವ್ಯವಸ್ಥೆಯೊಂದಿಗೆ ಆಫ್ ರೋಡ್ ಚಾಲನೆಯನ್ನು ನನಸಾಗಿಸಲಿದೆ.


Click it and Unblock the Notifications


























