ಬಜಾಜ್ 'ಕ್ಯೂಟ್' ಸೊ ಕ್ಯೂಟ್; ಆದರೆ ಸೇಫ್ಟಿ ರೇಟಿಂಗ್?

Written By:

ದೇಶದ ಮುಂಚೂಣಿಯ ವಾಹನ ಸಂಸ್ಥೆ ಬಜಾಜ್ ಆಟೋ ಹೊಸತಾಗಿ ಪ್ರಾರಂಭವಾಗಿರುವ ಕ್ವಾಡ್ರಾಸೈಕಲ್ ವಿಭಾಗದಲ್ಲಿ ನೂತನ ಆರ್‌ಇ60 ಬಿಡುಗಡೆ ಮಾಡುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಭಾರತೀಯ ಸರಕಾರದಿಂದ ಹಸಿರು ನಿಶಾನೆ ದೊರಕಿರುವ ಬೆನ್ನಲ್ಲೇ ವಿಸ್ತಾರವಾಗಿ ಹರಡಿರುವ ಬಜಾಜ್ ನೂತನ ವಾಹನವು ದೇಶದ ರಸ್ತೆ ಪ್ರವೇಶಿಸಲಿದೆ.

ನೂತನ ವಾಹನವು ಬಜಾಜ್ ಕ್ಯೂಟ್ (Qute) ಎಂಬ ನಾಮಕರಣವನ್ನು ಪಡೆಯಲಿದೆ. ಈ ನಡುವೆ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಗಿ ಬಂದಿದೆ. ಹಾಗಿದ್ದರೆ ಢಿಕ್ಕಿ ಪರೀಕ್ಷೆಯಲ್ಲಿ ಬಂದ ಫಲಿತಾಂಶವೇನು? ಬನ್ನಿ ನೋಡೋಣ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಬಜಾಜ್ ನೂತನ ಕ್ವಾಡ್ರಾಸೈಕಲ್ ವಾಹನವು ಯುರೋ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಗರಿಷ್ಠ ಐದರಲ್ಲಿ ಒಂದು ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ನಾಲ್ಕು ಚಕ್ರಗಳ ಬಜಾಜ್ ಕ್ಯೂಟ್ ವಾಹನವನ್ನು ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಎಂದೇ ಪರಿಗಣಿಸಲಾಗುತ್ತದೆ. ಇದು ರಿಕ್ಷಾಗಳಿಗೆ ಹೋಲಿಸಿದಾಗ ಹೆಚ್ಚಿನ ಭದ್ರತೆಯನ್ನು ಕಾಪಾಡಿಕೊಳ್ಳಲಿದೆ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಈ ನಡುವೆ ಒಂದು ಸ್ಟಾರ್ ಸೇಫ್ಟಿ ರೇಟಿಂಗ್ ಗಿಟ್ಟಿಸಿಕೊಂಡಿರುವ ಹೊರತಾಗಿಯೂ ಬಜಾಜ್ ಸಂಸ್ಥೆಯು ಅತ್ಯಂತ ಹೆಚ್ಚು ಸಂತೃಪ್ತಿ ವ್ಯಕ್ತಪಡಿಸಿರುವುದು ಗ್ಲೋಬಲ್ ಎನ್‌ಸಿಎಪಿ ಕೆಂಗೆಣ್ಣಿಗೆ ಗುರಿಯಾಗಿದೆ.

ವೈಶಿಷ್ಟ್ಯಗಳು - ಹೊರಮೈ

ವೈಶಿಷ್ಟ್ಯಗಳು - ಹೊರಮೈ

 • ದೊಡ್ಡದಾದ ವಿಂಡ್ ಸ್ಕೀನ್,
 • ಅತ್ಯುತ್ತಮ ಗೋಚರತೆ,
 • ವೈಪರ್ ಮತ್ತು ವಾಶಿಂಗ್ ವ್ಯವಸ್ಥೆ,
 • ದೊಡ್ಡದಾದ ಹ್ಯಾಲಗನ್ ಹೆಡ್ ಲ್ಯಾಂಪ್,
 • 12 ಇಂಚುಗಳ ಚಕ್ರಗಳು (ಅಲಾಯ್ ಅಥವಾ ಸ್ಟೀಲ್)
ಹೊರಮೈ

ಹೊರಮೈ

ಎಲ್ಲ ಹವಾಮಾನ ಪರಿಸ್ಥಿತಿಯಿಂದ ರಕ್ಷಣೆ ಪಡೆಯಲು ಕಾರಿನಂತಹ ಬಾಗಿಲು ವ್ಯವಸ್ಥೆ,

ಪ್ರಕಾಶಮಾನ ಮತ್ತು ಸ್ಟೈಲಿಷ್ ಟೈಲ್ ಲ್ಯಾಂಪ್,

ಸಸ್ಪೆನ್ಷನ್

ಸಸ್ಪೆನ್ಷನ್

ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಮತ್ತು ಆರಾಮದಾಯಕ ಚಾಲನೆಗಾಗಿ ಸಾಫ್ಟರ್ ಎಂಟ್ರಿ ಬಂಪರ್ ಸ್ಟಾಪ್ಪರ್ಸ್

ಒಳಮೈ

ಒಳಮೈ

 • ಸ್ಟೀರಿಂಗ್ ವೀಲ್,
 • 3.5 ಮೀಟರ್ ಟರ್ನಿಂಗ್ ರೇಡಿಯಸ್,
 • ಡ್ಯಾಶ್ ಬೋರ್ಡ್ ನಲ್ಲೇ ಗೇರ್ ಶಿಫ್ಟರ್,
 • 180 ಡ್ರಮ್ ಬ್ರೇಕ್,
 • ಚಾಲಕ ಮತ್ತು ಪ್ರಯಾಣಿಕರಿಗೆ ಸೀಟು ಬೆಲ್ಟ್,
ಒಳಮೈ

ಒಳಮೈ

 • ಗರಿಷ್ಠ ಸ್ಥಳಾವಕಾಶ,
 • ಫ್ಲ್ಯಾಟ್ ಫ್ಲೋರ್,
 • ಅತ್ಯುತ್ತಮ ಲೆಗ್ ರೂಂ,
 • ಸುಲಭವಾಗಿ ಒಳಗೆ-ಹೊರಗೆ ಹೋಗುವ ಅವಕಾಶ,
 • 60/40 ವಿಭಜಿತ ಸೀಟು,
 • ಸಹ ಪ್ರಯಾಣಿಕರಿಗೆ ಹಿಡಿಯಲು ಗ್ರಾಬ್ ಹ್ಯಾಂಡಲ್
ಎಂಜಿನ್

ಎಂಜಿನ್

 • ಎಂಜಿನ್: 216.6 ಸಿಸಿ
 • ವಿಧ: ಸಿಎನ್‌ಜಿ ಮತ್ತು ಎಲ್‌ಪಿಜಿ
 • ಗರಿಷ್ಠ ಶಕ್ತಿ: 13.2 ಅಶ್ವಶಕ್ತಿ
 • ಗರಿಷ್ಠ ವೇಗ: ಗಂಟೆಗೆ ಗರಿಷ್ಠ 70 ಕೀ.ಮೀ.
ಗೇರ್ ಬಾಕ್ಸ್

ಗೇರ್ ಬಾಕ್ಸ್

ಮೋಟರ್ ಸೈಕಲ್ ಕ್ರಮಾನುಗತವಾಗಿ ಗೇರ್ ಶಿಫ್ಟ್ (ಮುಂದಕ್ಕೆ 5, ರಿವರ್ಸ್ ಗೇರ್ 1)

ಆಯಾಮ (ಎಂಎಂ)

ಆಯಾಮ (ಎಂಎಂ)

 • ಉದ್ದ: 2752
 • ಅಗಲ: 1312
 • ಎತ್ತರ: 1652
 • ವೀಲ್ ಬೇಸ್: 1925
 • ವೀಲ್ ಟ್ರ್ಯಾಕ್: 1143
 • ಟರ್ನಿಂಗ್ ಸರ್ಕಲ್ ರೇಡಿಯಸ್: 3.5 ಮೀಟರ್
ಎಷ್ಟು ಪ್ರಯಾಣಿಕರಿಗೆ ಸಂಚರಿಸಬಹುದು?

ಎಷ್ಟು ಪ್ರಯಾಣಿಕರಿಗೆ ಸಂಚರಿಸಬಹುದು?

ಚಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

 ಸ್ಟೋರೆಜ್ ಜಾಗ (ಲೀಟರ್)

ಸ್ಟೋರೆಜ್ ಜಾಗ (ಲೀಟರ್)

ಮುಂಭಾಗ: 60

ಮಧ್ಯಭಾಗ: 95

ಹಿಂಭಾಗ: 44

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಯುರೋಪಿಯನ್ ಗುಣಮಟ್ಟ ಮತ್ತು ಕ್ವಾಡ್ರಾಸೈಕಲ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಬಜಾಜ್ ಕ್ಯೂಟ್, ಸ್ಟ್ಯಾಂಡರ್ಡ್ ಕಾರಿಗಿಂತಲೂ ಶೇಕಡಾ 37ರಷ್ಟು ಹಗುರ ಭಾರವನ್ನು ಹೊಂದಿರಲಿದೆ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಸಂಸ್ಥೆಯ ಪ್ರಕಾರ ಬಜಾಜ್ ಕ್ಯೂಟ್ ಪ್ರತಿ ಲೀಟರ್ ಗೆ 36 ಕೀ.ಮೀ. ಗಳಷ್ಟೇ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ವಾಹನಗಳಿಂದ ಕಿಕ್ಕಿರಿದು ತುಂಬಿರುವ ನಗರ ಚಾಲನೆಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಸಣ್ಣ ಕಾರಿಗಿಂತಲೂ ಶೇಕಡಾ 37ರಷ್ಟು ಕಡಿಮೆ ಕಾರ್ಬನ್ ಹೊಗೆಯನ್ನು ಹೊರಸೂಸುವ ಬಜಾಜ್ ಕ್ಯೂಟ್, ಪ್ರತಿ ಕೀ.ಮೀ.ಗೆ ಕೇವಲ 66 ಗ್ರಾಂಗಳಷ್ಟು ಸಿಒ2 ಹೊರದಬ್ಬುತ್ತಿದೆ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಅಂದ ಹಾಗೆ ಭಾರತದಲ್ಲಿ ಬಜಾಜ್ ಕ್ಯೂಟ್ ಅಂದಾಜು ಒಂದರಿಂದ ಒಂದು ವರೆ ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಜಾಜ್ ಕ್ಯೂಟ್: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಅಂತಿಮವಾಗಿ ಬಜಾಜ್ ಕ್ಯೂಟ್ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಯುರೋಪ್ ಖಂಡಗಳು ಸೇರಿದಂತೆ 14 ರಾಷ್ಟ್ರಗಳಿಗೆ ರಫ್ತಾಗಲಿದೆ.

English summary
Bajaj Qute Receives One Star In EURO NCAP Crash Test
Story first published: Wednesday, April 13, 2016, 16:57 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark