ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

By Nagaraja

ದೇಶಪ್ರೇಮಕ್ಕೆ ಕಿಚ್ಚು ಹಚ್ಚಿರುವ ಬಜಾಜ್ ವಿ15 ಪ್ರಯಾಣಿಕ ಬೈಕ್, ಬಿಡುಗಡೆಯಾದ ಕೇವಲ ನಾಲ್ಕು ತಿಂಗಳುಗಳ ಅವಧಿಯಲ್ಲೇ ಒಂದು ಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪುವ ಮೂಲಕ ನೂತನ ದಾಖಲೆ ಮಾಡಿದೆ.

ಇತಿಹಾಸ ಪುಟ ಸೇರಿರುವ ಐಕಾನಿಕ್ ವಿಕ್ರಾಂತ್ ಯುದ್ಧ ನೌಕೆಯ ಲೋಹದಿಂದ ನಿರ್ಮಿತ ಬಜಾಜ್ ವಿ15, ಪ್ರೀಮಿಯಂ ಪ್ರಯಾಣಿಕ ವಿಭಾಗದಲ್ಲಿ ಹೊಸ ಅಲೆಯೆಬ್ಬಿಸಿದೆ. ಬಾಲಿವುಡ್ ನಟ ಅಮೀರ್ ಖಾನ್ ಸಹ ಬಜಾಜ್ ವಿ15 ಹೊಂದಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಬಜಾಜ್ ವಿ15 ಮೊದಲ ನಾಲ್ಕು ತಿಂಗಳಲ್ಲಿ ಸರಾಸರಿ 25,000 ಯುನಿಟ್ ಗಳ ಮಾರಾಟವನ್ನು ಕಾಪಾಡಿಕೊಂಡಿದೆ. ತನ್ಮೂಲಕ 125 ಸಿಸಿ ವಿಭಾಗಕ್ಕೂ ಮೇಲ್ಪಟ್ಟ ವಿಭಾಗದ ಸಂಸ್ಥೆಯ ಒಟ್ಟಾರೆ ಮಾರಾಟವು ಶೇಕಡಾ 10ರಷ್ಟು ಏರುಗತಿಯಾಗಲು ನೆರವಾಗಿದೆ.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಎಪ್ರಿಲ್ ತಿಂಗಳಲ್ಲಿ ದೇಶದ ಅಗ್ರ 10 ದ್ವಿಚಕ್ರ ವಾಹನಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಬಜಾಜ್ ವಿ ಶ್ರೇಣಿಯ ಬೈಕ್ ಗಳನ್ನು ವಿಸ್ತರಿಸಲು ಹೊರಟಿರುವ ಸಂಸ್ಥೆಯೀಗ ನಿಕಟ ಭವಿಷ್ಯದಲ್ಲೇ ಮತ್ತೆರಡು ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

149.5 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಸ್‌ಒಎಚ್ ಸಿ ಏರ್ ಕೂಲ್ಡ್ ಡಿಟಿಎಸ್-ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ವಿ, 13 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. '

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಬಹುಮುಖಧಾರಿ ಆಧುನಿಕ ಕ್ಲಾಸಿಕ್ ಶೈಲಿಯನ್ನು ಮೈಗೂಡಿಸಿ ಬಂದಿರುವ ಬಜಾಜ್ ವಿ15, ದಿಟ್ಟವಾದ ಸ್ಪೋರ್ಟಿ ಗ್ರಾಫಿಕ್ಸ್, ಕ್ಲಾಸಿಕ್ ಎಲ್‌ಇಡಿ ಟೈಲ್ ಲ್ಯಾಂಪ್, ಪ್ರೀಮಿಯಂ ಸೀಟು, ಪ್ರೀಮಿಯಂ ಇನ್ಸ್ಟ್ರುಮೆಂಟ್ ಕ್ಲ್ಸ್ಟರ್ ಮತ್ತು 10 ಸ್ಪೋಕ್ ಅಲ್ಯೂಮಿನಿಯಂನಿಂದ ಸುತ್ತುವರಿದ ವೀಲ್ ಡಿಸೈನ್ ಗಳನ್ನು ಪಡೆದಿದೆ.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಪ್ರಭಾವಶಾಲಿ ಮುಂಭಾಗ, ಎತ್ತರದ ಸಾನಿಧ್ಯ, ಎದ್ದು ಕಾಣಿಸುವ ಇಂಧನ ಟ್ಯಾಂಕ್, ಕಾರ್ಯ ಕ್ಷಮತೆಯ ಹ್ಯಾಂಡಲ್ ಬಾರ್, ಆಕ್ರಮಣಕಾಗಿ ಫ್ರಂಟ್ ಫಾರ್ಕ್ ಮತ್ತು ಬಿರುಸುತನದ ಡಬಲ್ ದೇಹ ರಚನೆ ಇದರಲ್ಲಿದೆ.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡಾಲಿಕ್ ಟೈಪ್ ಸಸ್ಪನ್ಷನ್ ಜೊತೆಗೆ ಮುಂಭಾಗದಲ್ಲಿ 240 ಡಿಸ್ಕ್ ಹಾಗೂ ಹಿಂಭಾಗದಲ್ಲಿ 130 ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಪಡೆದಿದೆ.

ಬಜಾಜ್ ವಿ15 ಮೈಲುಗಲ್ಲು; 4 ತಿಂಗಳಲ್ಲೇ ಒಂದು ಲಕ್ಷ ಮಾರಾಟ

ಸೋಲರಿಯದ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ (Made with the invincible metal of INS Vikrant) ನಿರ್ಮಿತ ನೂತನ ಬಜಾಜ್ 'ವಿ' ಬೈಕ್, ತನ್ನ ಹೆಸರಿನಲ್ಲೇ ಶೌರ್ಯವನ್ನು (Valor) ಪ್ರತಿಬಿಂಬಿಸುತ್ತದೆ.

Article Published On: Tuesday, July 26, 2016, 11:22 [IST]
English summary
Bajaj V15 Clocks The 1 Lakh Sales Milestone In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+